ಉಪ್ಪಳ: ಮಂಗಲ್ಪಾಡಿ ಪ್ರತಾಪನಗರ ಶಿವಶಕ್ತಿ ಮೈದಾನದ ಶ್ರೀ ಗೌರೀ ಗಣೇಶ ಭಜನಾ ಮಂದಿರದಲ್ಲಿ ಜರಗಿದ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವದ ಪ್ರಯುಕ್ತ ಮೂಡಂಬೈಲಿನ ವಾಗ್ದೇವೀ ಯಕ್ಷಗಾನ ಕಲಾಸಂಘದವರಿಂದ "ಅತಿಕಾಯ ಮೋಕ್ಷ" ಕಥಾಭಾಗದ ತಾಳಮದ್ದಳೆ ಜರಗಿತು. ಪಾತ್ರವರ್ಗದಲ್ಲಿ ಬಾಲಕೃಷ್ಣ ಆಚಾರ್ಯ ನೀರ್ಚಾಲು, ನಾರಾಯಣ ನಾವಡ ಮೂಡಂಬೈಲು, ಚಂದ್ರಕುಮಾರ್ ಬಲಿಪಗುಳಿ, ಮುರಳೀಮಾಧವ ಮಧೂರು, ಶಾಶ್ವತಿ ನಾವಡ ಮೂಡಂಬೈಲು ಹಾಗೂ ಶಾರ್ವರಿ ನಾವಡ ಮೂಡಂಬೈಲು ಭಾಗವಹಿಸಿದರು .ಹಿಮ್ಮೇಳದಲ್ಲಿ ಭಾಗವತರಾಗಿ ಶುಭಾನಂದ ಶೆಟ್ಟಿ ಕುಳೂರು, ಚೆಂಡೆ ಮತ್ತು ಮೃದಂಗದಲ್ಲಿ ಗಣಪತಿ ಭಟ್ ಪೆರ್ಲ ಹಾಗೂ ರಾಮದಾಸ್ ಶೆಟ್ಟಿ ವಗೆನಾಡು ಸಹಕರಿಸಿದರು.

.jpg)
