ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಸೆ. 20 ಭಾನುವಾರ ಪರಮಪೂಜ್ಯ ಶ್ರೀ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಹರಿನಾರಾಯಣ ಮಯ್ಯ ಕುಂಬಳೆ ಇವರ ನೇತೃತ್ವದಲ್ಲಿ ಶ್ರೀಧನ್ವಂತರೀ ಹವನ ಮತ್ತು ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಜರಗಲಿರುವುದು. ಶ್ರೀ ಧನ್ವಂತರೀ ಹವನ ಪೂರ್ಣಾಹುತಿಯಾದ ಬಳಿಕ 10:45 ಕ್ಕೆ ಶ್ರೀ ಗಾಯತ್ರಿ ಮಂಟಪದಲ್ಲಿ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು ಮಠ, ಬ್ರಹ್ಮಶ್ರೀ ಕಂಠಾರರು ಮಹೇಶ್ ಮೋಹನರು ತಂತ್ರಿಗಳವರು (ಶಬರಿಮಲೆ), ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ (ಅಧ್ಯಕ್ಷರು-ಆಲುವ ತಂತ್ರ ವಿದ್ಯಾಪೀಠ, ಎರ್ನಾಕುಳಂ) ಇವರುಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿರುವುದು. ಡಾ.ಕೆ. ಪ್ರಕಾಶ್ ಶೆಟ್ಟಿ ಬೆಂಗಳೂರು, ಪ್ರಮೋದ್ ಮಧ್ವರಾಜ್, ವಿನಯ್ ಭಟ್ ಪಿ. ಜೆ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಮಾರಂಭದಲ್ಲಿ ಉದ್ಯಮಿ ಶ್ರೀನಿವಾಸ ನಾಯ್ಡು ಬೆಂಗಳೂರು, ಆಶ್ರಮದ ನವೀಕೃತ ಅಂಗಣದ ಲೋಕಾರ್ಪಣೆ ನಿರ್ವಹಿಸಲಿರುವರು. ಕೆ. ನಾರಾಯಣ ಬೆಂಗಳೂರು, ಬಿ. ನಾಗರಾಜ್ ಬೆಂಗಳೂರು, ಬಾಲಕೃಷ್ಣ ಬೆಂಗಳೂರು ಗೌರವ ಉಪಸ್ಥಿತರಿರುವರು. ಭಕ್ತಾದಿಗಳು ಈ ಪುಣ್ಯ ಕಾರ್ಯಕ್ರಮಗಳಲ್ಲಿ ತ್ರಿಕರಣ ಪೂರ್ವಕವಾಗಿ ಪಾಲ್ಗೊಂಡು ಪುನೀತರಾಗಬೇಕಾಗಿ ಶ್ರೀ ಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

