HEALTH TIPS

ಪಳ್ಳತ್ತಡ್ಕ ಸೇತುವೆಯ ಮೇಲ್ಭಾಗದಲ್ಲಿ ಬೃಹತ್ ಹೊಂಡ ಪ್ರತ್ಯಕ್ಷ; ಸಾರ್ವಜನಿಕರಲ್ಲಿ ಆತಂಕ ಸೃಷ್ಠಿ

ಬದಿಯಡ್ಕ: ಚೆರ್ಕಳ-ಕಲ್ಲಡ್ಕ ಅಂತರ್ ರಾಜ್ಯ ರಸ್ತೆಯ ಪೆರ್ಲ- ಬದಿಯಡ್ಕ ಪೇಟೆಯನ್ನು ಸಂಪರ್ಕಿಸುವ ಪಳ್ಳತ್ತಡ್ಕ ಸೇತುವೆಯಲ್ಲಿ ಬೃಹತ್ ಹೊಂಡ ಸೃಷ್ಟಿಯಾಗಿದೆ. ಒಂದೂವರೆ ಮೀಟರ್ ಸುತ್ತಳತೆಯ ಹೊಂಡವು ಸುಮಾರು 15 ಸೆ.ಮೀಟರ್ ನಷ್ಟು ಆಳ ಹೊಂದಿದೆ. ಇದರಿಂದಾಗಿ ಈ ಸೇತುವೆ ಭಾರೀ ಅಫಘಾತಕ್ಕೆ ಕಾರಣವಾಗಲಿದೆ.  


ಸೇತುವೆಯಲ್ಲಿ ಬದಿಯಡ್ಕ ಕಡೆಗಿನ ಎಡ ಭಾಗದಲ್ಲಿ ಈ ಹೊಂಡ ಪ್ರತ್ಯಕ್ಷವಾಗಿದೆ. ಪ್ರತಿನಿತ್ಯ 30 ಕ್ಕೂ ಹೆಚ್ಚು ಬಸ್ಸುಗಳು,ಇದರ ಹತ್ತು ಪಾಲು ಇತರ ವಾಹನಗಳ ಸಾಗುವ ರಸ್ತೆ ಇದಾಗಿದೆ. ಇತ್ತೀಚಿನ ದಿನಗಳಲ್ಲಿ ಅನಿಯಂತ್ರಿತ ರೀತಿಯಲ್ಲಿ ಈ ರಸ್ತೆಯಲ್ಲಿ ಟಾರಸ್ ವಾಹನಗಳಲ್ಲಿ ಕಗ್ಗಲ್ಲು ಸಾಗಾಟ ನಡೆಯುತ್ತಿದೆ. ಇದರಿಂದಾಗಿ ರಸ್ತೆ ತುಂಬಾ ಹೊಂಡಗಳು ಸೃಷ್ಟಿಯಾಗಿದ್ದರೂ  ಕ್ರಮ ಕೈಗೊಳ್ಳಲು ಅಧಿಕೃತರು ಮುಂದಾಗಿರಲಿಲ್ಲ.

ಪಳ್ಳತ್ತಡ್ಕ ಸೇತುವೆಯು  ಈ ಹಿಂದೆಯೇ ಅವಘಡ ಸ್ಥಿತಿಯಲ್ಲಿತ್ತು. ಸೇತುವೆಯ ಅಡಿ ಭಾಗದ ಕಾಂಕ್ರೀಟು ಎದ್ದು ಬಿದ್ದಿದ್ದು ಒಳಗಿನ ಕಬ್ಬಿಣ ಇಣುಕಿ ನೋಡುತ್ತಿತ್ತು. ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದರೂ ಅಧಿಕೃತರು ಕ್ರಮ ಕೈಗೊಂಡಿರಲಿಲ್ಲ. ಇದೀಗ ಸೇತುವೆಯ ಮೇಲ್ಭಾಗದಲ್ಲಿಯೇ ಹೊಂಡ ಕಂಡು ಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಗೆ ಕಾರಣವಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries