HEALTH TIPS

ನಮ್ಮ ಷರತ್ತು ಈಡೇರುವವರೆಗೆ ಹಾರ್ಮುಝ್ ಜಲಸಂಧಿ ಮುಚ್ಚಿರಲಿದೆ: ಇರಾನ್ ಎಚ್ಚರಿಕೆ

ಟೆಹ್ರಾನ್: ಜೂನ್ನಲ್ಲಿ ಸಹಿ ಹಾಕಲಾಗಿದ್ದ, ಇದೀಗ ಅಸ್ತಿತ್ವದಲ್ಲಿಲ್ಲದ ಶಾಂತಿ ಒಪ್ಪಂದದಡಿ ಅಮೆರಿಕ ತನ್ನ ಬದ್ಧತೆಗಳನ್ನು ಈಡೇರಿಸುವವರೆಗೆ ಹಾರ್ಮುಝ್ ಜಲಮಾರ್ಗ ಬಂದ್ ಆಗಿಯೇ ಉಳಿಯಲಿದೆ ಎಂದು ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ಹೇಳಿದ್ದಾರೆ ಎಂದು aljazeera.com ವರದಿ ಮಾಡಿದೆ.  


ಈ ಮೂಲಕ ಅವರು ಹಾರ್ಮುಝ್ ಜಲಸಂಧಿಗೆ ಸಂಬಂಧಿಸಿದಂತೆ ಟೆಹ್ರಾನ್ ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಸಂಸತ್ತನ್ನುದ್ದೇಶಿಸಿ ಮಾತನಾಡಿದ ಘಾಲಿಬಾಫ್, "ಮಧ್ಯವರ್ತಿಗಳ ಮೂಲಕ ಎದುರಾಳಿ ಪಕ್ಷಕ್ಕೆ ನಮ್ಮ ಸಂದೇಶಗಳು ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ತಲುಪಿಸಿದ್ದೇವೆ" ಎಂದು ಹೇಳಿದರು.

"ವಂಚನೆಯ ಮಾರ್ಗ ಮತ್ತು ಏಕಪಕ್ಷೀಯ ಹೇರಿಕೆಯ ದಾರಿ ಮುಚ್ಚಲ್ಪಟ್ಟಿದೆ ಎಂಬುದು ಶತ್ರುವಿಗೆ ಚೆನ್ನಾಗಿ ತಿಳಿದಿದೆ" ಎಂದು ಅವರು ಹೇಳಿದ್ದಾರೆ.

ಮುಂದುವರಿದು, "ಈ ಷರತ್ತುಗಳು ಈಡೇರುವವರೆಗೆ, ಇರಾನ್ ಜನತೆಯ ನ್ಯಾಯಸಮ್ಮತ ಹಕ್ಕುಗಳನ್ನು ಗುರುತಿಸುವವರೆಗೆ ಮತ್ತು ಅಮೆರಿಕದ ಬದ್ಧತೆಗಳು ಈಡೇರುವವರೆಗೆ, ಹಿಂದಿನ ರೀತಿಯ ಮಾತುಕತೆಗಳಿಗೆ ಮರಳಲು ಅಥವಾ ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯಲು ಯಾವುದೇ ಅವಕಾಶವಿರುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries