HEALTH TIPS

ರಷ್ಯಾ ಸೇನೆಯಲ್ಲಿ ಸಿಲುಕಿರುವ ತೆಲಂಗಾಣದ ನಾಲ್ವರು: ಪೋಷಕರ ಕಣ್ಣೀರು

 ಹೈದರಾಬಾದ್‌: ಉದ್ಯೋಗಕ್ಕಾಗಿ ರಷ್ಯಾಕ್ಕೆ ತೆರಳಿದ್ದ ನಿಜಾಮಾಬಾದ್‌ ಜಿಲ್ಲೆಯ ನಾಲ್ವರು ಒತ್ತಾಯಪೂರ್ವಕವಾಗಿ ರಷ್ಯಾದ ಸೇನೆ ಸೇರಿ, ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಏಜೆಂಟರ ವಂಚನೆಯಿಂದ ಹೀಗಾಗಿದೆ ಎಂದು ಅವರ ಪೋಷಕರು ಕಣ್ಣೀರು ಹಾಕಿದ್ದಾರೆ. 


ರಷ್ಯಾದಲ್ಲಿ ಸಿಲುಕಿರುವ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಮಧ್ಯಪ್ರವೇಶಿಸುವಂತೆ ಕೋರಿ ಅವರ ಕುಟುಂಬದವರು ಮುಖ್ಯಮಂತ್ರಿ ಕಚೇರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.

ಭುಕ್ಯಾ ರವೀಂದರ್‌, ಸಿರ್ಶು ಅಶೋಕ್‌, ಮೇಘಾವತ್‌ ಪ್ರಕಾಶ್‌ ಮತ್ತು ಮೊಹಮ್ಮದ್‌ ಅಫ್ಜಲ್‌ ಖಾನ್‌ ಅವರೇ ರಷ್ಯಾದಲ್ಲಿ ಸಿಲುಕಿರುವವರು. ತೈಲ ಕಂಪನಿಯೊಂದರಲ್ಲಿ ಉತ್ತಮ ವೇತನದ ಉದ್ಯೋಗದ ಭರವಸೆ ನೀಡಿದ್ದ ಏಜೆಂಟ್‌ಗಳ ಮಾತನ್ನು ನಂಬಿ ಏಳು ತಿಂಗಳ ಹಿಂದೆ ಅವರು ರಷ್ಯಾಕ್ಕೆ ತೆರಳಿದ್ದರು.

ಅಲ್ಲಿ ಅವರ ವೇತನವನ್ನು ತಡೆಹಿಡಿದು, ಒತ್ತಾಯ ಪೂರ್ವಕವಾಗಿ ತರಬೇತಿ ನೀಡಿ ರಷ್ಯಾದ ಸೇನೆಗೆ ಸೇರಿಸಲಾಗಿದೆ. ಇದೀಗ ಅವರನ್ನು ಯುದ್ಧಪೀಡಿತ ಪ್ರದೇಶಕ್ಕೆ ನಿಯೋಜಿಸಲಾಗಿದೆ ಎಂದು ಅವರ ಕುಟುಂಬದವರು ಹೇಳಿದ್ದಾರೆ.

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಮಾಸ್ಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ಜತೆ ಸಮನ್ವಯ ಸಾಧಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಹಿರಿಯ ಅಧಿಕಾರಿಗಳು ನೀಡಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries