HEALTH TIPS

ಅಮಿತ್‌ ಶಾ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಅಧಿಕಾರಿಗಳಿಗೆ ಪ್ರವೇಶ ರದ್ದು: ಮೊಯಿತ್ರಾ

ಕೋಲ್ಕತ್ತ: 'ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪಶ್ಚಿಮ ಬಂಗಾಳಕ್ಕೆ ಜುಲೈ ಮತ್ತು ಆಗಸ್ಟ್‌ನಲ್ಲಿ ಮೂರು ಬಾರಿ ಭೇಟಿ ನೀಡಿದ್ದರು. ಮೂರು ಬಾರಿಯೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಐಎಎಸ್‌ ಮತ್ತು ಐಪಿಎಸ್‌ನ ಮೂವರು ಅಧಿಕಾರಿಗಳನ್ನು ಅಧಿಕೃತ ಕಾರ್ಯಕ್ರಮಗಳಿಂದ ದೂರ ಇಡಲಾಗಿತ್ತು' ಎಂದು ಆರೋಪಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ.


ಅಲ್ಪಸಂಖ್ಯಾತರ ವಿಷಯಗಳ ಕುರಿತು ವರದಿಗಳನ್ನು ಸಿದ್ಧಪಡಿಸುವ ವಿಶ್ವಸಂಸ್ಥೆಯ 'ಸ್ಪೆಷಲ್‌ ರಪೋಟರ್‌' ನಿಕೊಲಸ್ ಲುವ್ರಾ ಅವರಿಗೆ ಮಹುವಾ ಅವರು ಪತ್ರ ಬರೆದಿದ್ದಾರೆ. ಇದೇ ವಿಚಾರದ ಕುರಿತು ಕೆಲವು ದಿನಗಳ ಹಿಂದೆ ಮಹುವಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಅನ್ನೂ ಹಂಚಿಕೊಂಡಿದ್ದರು. ಪೋಸ್ಟ್‌ ಕಾರಣಕ್ಕಾಗಿ ಇವರ ಮೇಲೆ ದೂರು ದಾಖಲಾಗಿತ್ತು ಮತ್ತು ಸೈಬರ್‌ ಅಪರಾಧ ಪೊಲೀಸರು ತನಿಖೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದ್ದರು.

ಸಿಲಿಗುಡಿ ಪೊಲೀಸ್‌ ಕಮಿಷನರ್‌ ವಖಾರ್‌ ರಝಾ, ಪಶ್ಚಿಮ ಬಂಗಾಳ ಪೊಲೀಸರ ವಿಶೇಷ ಕಾರ್ಯಪಡೆ ಮುಖ್ಯಸ್ಥ ಜಾವೇದ್‌ ಶಮೀಮ್‌ ಮತ್ತು ಐಎಎಸ್‌ ಅಧಿಕಾರಿ ಖಲೀಲ್‌ ಅಹ್ಮದ್‌ ಅವರು ಹೆಸರನ್ನು ಮೊಹುವಾ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ, ತಮ್ಮ ಪೋಸ್ಟ್‌ನಲ್ಲಿಯೂ ಹಂಚಿಕೊಂಡಿದ್ದರು.

'ಅಮಿತ್‌ ಶಾ ಅವರಿಗೆ ಸ್ವಾಗತ ಕೋರುವವರ ಪಟ್ಟಿಯಿಂದ ವಖಾರ್‌ ಅವರನ್ನು ಕೈಬಿಡಲಾಗಿತ್ತು. ಬಳಿಕ, ಶಾ ಅವರು ಭಾಗವಹಿಸುವ ಕಾರ್ಯಕ್ರಮಕ್ಕೆ ಜಾವೇದ್‌ ಅವರಿಗೆ ಆಹ್ವಾನ ನೀಡಲಿಲ್ಲ. ಶಾ ಅವರು ಹಾಜರಿದ್ದ ಸಭೆಯೊಂದರಿಂದ ಖಲೀಲ್‌ ಅವರನ್ನು ಹೊರಹಾಕಲಾಗಿತ್ತು' ಎಂದು ಮೊಹುವಾ ಆರೋಪಿಸಿದ್ದಾರೆ.








 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries