ಬದಿಯಡ್ಕ: ಕುಂಬಳೆ ಸೀಮೆಯ ತಂತ್ರಿಯಾಗಿದ್ದ ಬ್ರಹ್ಮಶ್ರೀ ದಿ. ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರ ಪತ್ನಿ, ಬರಹಗಾರ್ತಿ ದೇಲಂಪಾಡಿ ಸುಗುಣಾ ತಂತ್ರಿ(75)ಉಪ್ಪಿನಂಗಡಿ ಸನಿಹದ ರಾಮಕುಂಜ ಇರ್ಕಿಮಠ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ದಂಪತಿಗೆ ಮಕ್ಕಳಿರಲಿಲ್ಲ. ಪತಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರ ನಿಧನಾನಂತರ ಅಗಲ್ಪಾಡಿಯ ಸ್ವಂತ ಮನೆಯಿಂದ ರಾಮಕುಂಜದ ತವರುಮನೆಗೆ ತೆರಳಿದ್ದ ಇವರು, ಸಹೋದರರೊಂದಿಗೆ ವಾಸವಾಗಿದ್ದರು. ಹಲವಾರು ಧಾರ್ಮಿಕ ಸಾಹಿತಯಗಳನ್ನು ರಚಿಸಿರುವ ಇವರು, ಧಾರ್ಮಿಕ ಉಪನ್ಯಾಸ, ಪ್ರವಚನಗಳಲ್ಲೂ ಮುಂಚೂಣಿಯಲ್ಲಿದ್ದರು. ಉತ್ತಮ ಸಂಗೀತ ಕಲಾವಿದೆಯೂ ಆಗಿದ್ದ ಇವರು, ಹಲವಾರು ಸಂಗೀತ ಕಚೇರಿ ನಡೆಸಿಕೊಟ್ಟಿದ್ದರು.


