ಕಾಸರಗೋಡು: ನಕಲಿ ಚಿನ್ನದ ಸರ ನೀಡಿ ಐದು ಲಕ್ಷ ರೂ. ಎಗರಿಸಿದ ದೂರಿನಂತೆ ಕರ್ನಾಟಕ ನಿವಾಸಿ ಶಾಂತಿ (50) ಎಂಬಾಕೆಯನ್ನು ಚಂದೇರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿ ರಾಜು ಎಂಬಾತ ತಲೆಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಪೆÇಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ತ್ರಿಕರಿಪುರ ಕೋಯಂಗರ ನಿವಾಸಿ ಎಂ. ಅನೀಶ್ ಎಂಬವರು ನೀಡಿರುವ ದೂರಿನನ್ವಯ ಕಾರ್ಯಚರಣೆ ನಡೆಸಲಾಗಿದೆ. ಆ. 30ರಂದು ಬೆಳಗ್ಗೆ ಆರೋಪಿಗಳು ಚೆರ್ವತ್ತೂರಿನ ಚಿತ್ರಮಂದಿರವೊಂದರ ಬಳಿ ನಕಲಿ ಚಿನ್ನದ ಸರ ನೀಡಿ, 5ಲಕ್ಷ ರೂ. ಪಡೆದು ವಂಚಿಸಿರುವುದಾಗಿ ಅನೀಶ್ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ಮಹಿಳೆಯನ್ನು ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.


