ಢಾಕಾ: 'ಬ್ರಿಕ್ಸ್' ಶೃಂಗಸಭೆಯಲ್ಲಿ ಭಾಗವಹಿಸುವಂತೆ ಭಾರತವು ಪ್ರಧಾನಿ ತಾರಿಕ್ ರೆಹಮಾನ್ ಅವರಿಗೆ ಶಿಷ್ಟಾಚಾರಕ್ಕೆ ಅನುಗುಣವಾಗಿ ಆಹ್ವಾನ ನೀಡಿಲ್ಲ' ಎಂದು ಆರೋಪಿಸಿರುವ ಬಾಂಗ್ಲಾದೇಶ, ಅವರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯನ್ನು ತಳ್ಳಿಹಾಕಿದೆ.
'ರೆಹಮಾನ್ ಅವರನ್ನು ಬಾಂಗ್ಲಾದೇಶದ ಪ್ರಧಾನಿಯಾಗಿ ಭಾರತವು ಶೃಂಗಸಭೆಗೆ ಆಹ್ವಾನಿಸಿಲ್ಲ, ಬದಲಿಗೆ ಅವರೇ ಅಧ್ಯಕ್ಷರಾಗಿರುವ 7 ರಾಷ್ಟ್ರಗಳ ದಕ್ಷಿಣ ಮತ್ತು ಪೂರ್ವ ಏಷ್ಯಾ (ಬೆಮ್‌ಸ್ಟೆಕ್) ಒಕ್ಕೂಟಕ್ಕೆ ಈ ಆಹ್ವಾನವನ್ನು ವಿಸ್ತರಿಸಲಾಯಿತು, ನಾವು ಈ ಸಭೆಗೆ ಹೋಗುವುದು ಹೇಗೆ, ಬಾಂಗ್ಲಾದೇಶ ಸರ್ಕಾರದಿಂದ ಯಾರನ್ನಾದರೂ ಆಹ್ವಾನಿಸಲಾಗಿದೆಯೇ' ಎಂದು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಹುಮಾಯುನ್ ಕೊಬಿರ್ ಪ್ರಶ್ನಿಸಿದ್ದಾರೆ.

