ನ್ಯೂಯಾರ್ಕ್: ಒಮಾನ್‍ನ ಮಸ್ಕತ್‍ನಲ್ಲಿ ಅಮೆರಿಕದ ಅಧಿಕಾರಿಗಳು ಮತ್ತು ಇರಾನ್ ಬೆಂಬಲಿತ ಹೌದಿ ಬಂಡುಕೋರ ಗುಂಪಿನ ನಾಯಕರ ನಡುವೆ ನಡೆದ ಗುಪ್ತ ಸಭೆಯ ನಂತರ, ಹೌದಿಗಳೊಂದಿಗಿನ ಸಂಘರ್ಷದಲ್ಲಿ ಸೌದಿ ಅರೇಬಿಯಾವನ್ನು ಬೆಂಬಲಿಸದಿರಲು ಅಮೆರಿಕ ನಿರ್ಧರಿಸಿದೆ ಎಂದು `ದಿ ಗಾರ್ಡಿಯನ್' ವರದಿ ಮಾಡಿದೆ.
2025ರಲ್ಲಿ ಎರಡೂ ಕಡೆಯ ನಡುವೆ ಏರ್ಪಟ್ಟ ಕಟ್ಟುನಿಟ್ಟಿನ ಕದನ ವಿರಾಮ ಒಪ್ಪಂದವು ಇಂದಿಗೂ ಜಾರಿಯಲ್ಲಿದೆ ಮತ್ತು ಕೆಂಪು ಸಮುದ್ರದಲ್ಲಿ ಅಮೆರಿಕದ ಹಡಗುಗಳನ್ನು ಗುರಿಯಾಗಿಸುವ ಯಾವುದೇ ಉದ್ದೇಶ ತಮಗಿಲ್ಲ ಎಂದು ಹೌದಿಗಳು ಅಮೆರಿಕದ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ. ಸೌದಿ ಅರೆಬಿಯಾವು ಯೆಮನ್ ಮೇಲೆ ತಡೆ ಹೇರಿರುವ ಕಾರಣದಿಂದಾಗಿ, ಸೌದಿಗೆ ಸಂಬಂಧಿಸಿದ ಹಡಗುಗಳು ಮಾತ್ರ ತಮ್ಮ ಗುರಿ ಎಂದು ಹೌದಿ ನಾಯಕರು ಸ್ಪಷ್ಟಪಡಿಸಿರುವುದಾಗಿ ವರದಿ ತಿಳಿಸಿದೆ.
ಮಸ್ಕತ್‍ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ನಡೆದ ಈ ಸಭೆಯನ್ನು ಗುಪ್ತವಾಗಿಡಲಾಗಿದೆ ಎಂದು `ರಾಯ್ಟರ್ಸ್' ವರದಿ ಮಾಡಿದೆ.

