ರಿಯಾದ್: ಸೌದಿ ಅರೇಬಿಯಾದ ತೈಫ್ ಪ್ರಾಂತದಲ್ಲಿ ಗುರುವಾರ ಡ್ರೋನ್ ಒಂದನ್ನು ಹೊಡೆದುರುಳಿಸಿದಾಗ, ಅದರ ಬಿಡಿಭಾಗಗಳು ಕೆಳಗೆ ಬಿದ್ದು ಯಮನ್ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿದ್ದ ಡ್ರೋನ್‍ನ ಅವಶೇಷಗಳಿಂದಾಗಿ ಹಲವು ಕಟ್ಟಡಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ
ಘಟನಾ ಸ್ಥಳದಲ್ಲಿದ್ದ ಕಾರುಗಳ ಕಿಟಕಿ ಗಾಜುಗಳು ಒಡೆದಿರುವುದು ಮತ್ತು ಅಂಗಡಿಗಳ ಮುಂಭಾಗ ಜಖಂಗೊಂಡಿರುವುದನ್ನು ಸೌದಿಯ ಸರಕಾರಿ ಮಾಧ್ಯಮಗಳು ಬಿಡುಗಡೆ ಮಾಡಿದ ಚಿತ್ರಗಳು ತೋರಿಸಿವೆ.

