HEALTH TIPS

ಬಾಡೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವವ

ಕುಂಬಳೆ: ಬಾಡೂರುಪದವು ಶ್ರೀಕೃಷ್ಣ ಭಜನಾ ಮಂದಿರದ ವತಿಯಿಂದ 40ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸೆ. 4ರಂದು ವಿವಿಧ ಧಾರ್ಮಿಕ, ಸಾಂಸ್ಕøತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಅಂದು ಬೆಳಗ್ಗೆ 9ಕ್ಕೆ ಭಜನಾ ಮಂದಿರದ ಪರಿಸರದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಬಾಲಕ-ಬಾಲಕಿಯರಿಗೆ ಭಕ್ತಿಗೀತೆ, ಸಂಗೀತ ಟೋಪಿ, ನಿಂಬೆ-ಚಮಚ, ಸೂಜಿ-ನೂಲು ಓಟ ಹಾಗೂ ಕಲರ್ ಬಾಟಲ್ ಸೆಟ್ಟಿಂಗ್ ಸ್ಪರ್ಧೆಗಳು ನಡೆಯಲಿವೆ. ಸಾರ್ವಜನಿಕರಿಗೆ ಮಡಕೆ ಒಡೆಯುವುದು ಹಾಗೂ ಮೊಸರು ಕುಡಿಕೆ ಕಂಬ ಏರುವ ಸ್ಪರ್ಧೆ ಆಯೋಜಿಸಲಾಗಿದೆ. ಮಹಿಳೆಯರಿಗೆ ಮಡಕೆ ಒಡೆಯುವುದು ಮತ್ತು ಹೂಮಾಲೆ ಕಟ್ಟುವ ಸ್ಪರ್ಧೆ ನಡೆಯಲಿದೆ. 10ನೇ ತರಗತಿವರೆಗಿನ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸಂಜೆ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯುವುದು. 

ನಾಯ್ಕಾಪಿನಲ್ಲಿ ಮೊಸರುಕುಡಿಕೆ: 

ಕುಂಬಳೆ ಸನಿಹದ ನಾಯ್ಕಾಪು ಶ್ರೀ ಶಾಸ್ತಾ ಮಿತ್ರ ಸಂಗಮ ಸಂಘಟನೆ ಆಶ್ರಯದಲ್ಲಿ 32 ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸೆಪ್ಟೆಂಬರ್ 4ರಂದು ನಡೆಯಲಿದೆ. ಅಂದು ಬೆಳಗ್ಗೆ ಮಕ್ಕಳ ಮುದ್ದು ಕೃಷ್ಣ ವೇಷ ದೊಂದಿಗೆ ಆಕರ್ಷಕ ಮೆರವಣಿಗೆ ನಡೆಯಲಿದ್ದು ಹಲವು ಆಟೋಟ ಸ್ಪರ್ಧೆ ಗಳು ನಡೆಯಲಿದೆ. ಸಂಜೆ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries