ಕಾಸರಗೋಡು: ಕೇರಳ ಪೋಸ್ಟಲ್ ಸರ್ಕಲ್ ಉತ್ತರ ವಲಯದ 'ಅಂಚೆ ಅದಾಲತ್' ಸೆ. 9ರಂದು ಬೆಳಗ್ಗೆ 11ಕ್ಕೆ ಕೋಯಿಕ್ಕೋಡಿನ ನಡಕ್ಕಾವಿನಲ್ಲಿರುವ ಪೋಸ್ಟ್‍ಮಾಸ್ಟರ್ ಜನರಲ್ ಅವರ ಉತ್ತರವಲಯ ಕಚೇರಿಯಲ್ಲಿ ಜರುಗಲಿದೆ.
ಉತ್ತರ ವಲಯ ಕಾಸರಗೋಡಿನಿಂದ ಪಾಲಕ್ಕಾಡ್‍ವರೆಗಿನ ಕಂದಾಯ ಜಿಲ್ಲೆಗಳನ್ನು ಒಳಗೊಂಡಿದ್ದು, ಅಂಚೆ ಇಲಾಖೆಯು ಒದಗಿಸುವ ಪತ್ರ ಸೇವೆ, ಮನಿ ಆರ್ಡರ್, ಪಾರ್ಸೆಲ್, ಸ್ಪೀಡ್ ಪೆÇೀಸ್ಟ್ ಮತ್ತು ಉಳಿತಾಯ ಬ್ಯಾಂಕ್ ಮುಂತಾದ ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು, 'ಸಹಾಯಕ ನಿರ್ದೇಶಕರು (ಕಟ್ಟಡ), ಪೆÇೀಸ್ಟ್‍ಮಾಸ್ಟರ್ ಜನರಲ್ ಅವರ ಕಚೇರಿ, ಉತ್ತರ ವಲಯ, ನಡಕ್ಕಾವು, ಕೋಝಿಕ್ಕೋಡ್ - 673011' ಇವರಿಗೆ ಕಳುಹಿಸಬೇಕು.
ಈ ದೂರುಗಳು ಸೆ. 3ಕ್ಕೆ ಮುಂಚಿತವಾಗಿ ಸಂಬಂಧಪಟ್ಟ ಕಚೇರಿಯನ್ನು ತಲುಪುವಂತಿರಬೇಕು. ಲಕೋಟೆಯ ಮೇಲೆ "ಡಾಕ್ ಅದಾಲತ್" ಎಂದು ನಮೂದಿಸಬೇಕು ಎಂದುಪ್ರಕಟಣೆ ತಿಳಿಸಿದೆ.

.webp)
