ಮುಳ್ಳೇರಿಯ: ಲಯನ್ಸ್ ಕ್ಲಬ್ ಆಫ್ ಮುಳ್ಳೇರಿಯ, ಜಿಲ್ಲಾ ರಸಪ್ರಶ್ನೆ ಸಂಘ ಮತ್ತು ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯ ಸಂಯುಕ್ತವಾಗಿ "ಪತ್ರಿಕಾ ವಿಶೇಷಗಳು' (ಮೇ - ಆಗಸ್ಟ್ 2026) ಎಂಬ ವಿಷಯದ ಕುರಿತು ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿತು. ಸ್ಪರ್ಧೆಯನ್ನು ಕಿಶೋರ್ ಕುಮಾರ್ ಕರ್ಮಂತೋಡಿ ನಿರ್ವಹಿಸಿದರು.
ಸ್ಪರ್ಧೆಯಲ್ಲಿ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಅನೈಕಾ ಕಾಡಗಂ(ಪ್ರಥಮ), ದಯಾನಿತಾ. ಎಸ್ ಕಾಡಗಂ(ದ್ವಿತೀಯ), ರಾಮ್ ಜನವ್. ಎಸ್ ಕಾಡಗಂ(ತೃತೀಯ), ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಧ್ಯಾನಕೃಷ್ಣ. ಕೆ ಕೆ ಕೋಟ್ಟಿಲ(ಪ್ರಥಮ), ಶಿವದಾ ಮೋಹನ್ ಒಡೆಯಂಚ್ಚಾಲ್(ದ್ವಿತೀಯ), ಹೃದಯ ಕೆ.ಎಂ.(ತೃತೀಯ), ಹೈಸ್ಕೂಲ್ ವಿಭಾಗದಲ್ಲಿ ಅಶ್ವಿನ್‍ರಾಜ್ ನೀಲೇಶ್ವರ(ಪ್ರಥಮ), ಆದರ್ಶ್ ಮೋಹನ್ ಬೇತೂರ್ಪಾರ(ದ್ವಿತೀಯ), ಶ್ರೇಯಾ ಸುಬಿನ್ ತಂಕಯಂ(ತೃತೀಯ), ಸಾಮಾನ್ಯ ವಿಭಾಗದಲ್ಲಿ ಪವಿತ್ರನ್ ಕುತ್ತಿಕೋಲ್(ಪ್ರಥಮ), ದೀಪಾ ಮೋಹನ್ ಒಡೆಯಂಚ್ಚಾಲ್(ದ್ವಿತೀಯ), ರೇಷ್ಮಾ ಮುಳ್ಳೇರಿಯ(ತೃತೀಯ) ಸ್ಥಾನ ಪಡೆದರು.
ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯನ್ನು ಮುಳ್ಳೇರಿಯ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯದ ಅಧ್ಯಕ್ಷ ಚಂದ್ರನ್ ಮೊಟ್ಟಮ್ಮಾಲ್ ಅಧ್ಯಕ್ಷತೆಯಲ್ಲಿ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಪಿ. ದಾಮೋದರನ್ ನಿರ್ವಹಿಸಿದರು. ವಿ.ತಂಬಾನ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಮುಳ್ಳೇರಿಯದ ಅಧ್ಯಕ್ಷ ವೇಣುಗೋಪಾಲನ್ ಸ್ವಾಗತಿಸಿ, ಕೆ. ವಿಜಿತ್ ವಂದಿಸಿದರು. ಪದ್ಮನಾಭನ್ ಕಾಡಗಂ, ಶೀಬಾ ಪುತ್ತಿಲೋಟ್, ವಿಜಯಕುಮಾರ್ ಎರಿಂಜಿಪ್ಪುಳ ಮುಂತಾದವರು ನೇತೃತ್ವ ವಹಿಸಿದ್ದರು.

.jpg)
.jpg)
