HEALTH TIPS

ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದಿಂದ ಬಾಯಿಕಟ್ಟೆಯಲ್ಲಿ ಕನ್ನಡ ಭಾಷಾ ತರಬೇತಿ ಶಿಬಿರ- ವಿದ್ಯಾರ್ಥಿಗಳು ಮತ್ತು ಯುವಜನತೆ ಕನ್ನಡ ಪ್ರೀತಿ ಬೆಳೆಸಿಕೊಳ್ಳಬೇಕು: ಡಾ. ರಮಾನಂದ ಬನಾರಿ

ಉಪ್ಪಳ: ವಿದ್ಯಾರ್ಥಿಗಳು ಮತ್ತು ಯುವಜನರು ಕನ್ನಡ ಕಾರ್ಯಕ್ರಮಗಳು ಮತ್ತು ತರಬೇತಿ ಶಿಬಿರಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿ ತಮ್ಮ ಕೌಶಲಗಳನ್ನು ವೃದ್ಧಿಸುವುದರೊಂದಿಗೆ ಕನ್ನಡದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಹೇಳಿದರು. ಅವರು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ನಡೆದ ಒಂದು ದಿನದ ಕನ್ನಡ ಭಾಷಾ ತರಬೇತಿ ಕಮ್ಮಟದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಯಾವುದೇ ಕೌಶಲಗಳನ್ನು ಅಭಿವೃದ್ಧಿಪಡಿಸಬೇಕಾದರೆ ಒಳ್ಳೆಯ ಪರಿಶ್ರಮ ಅಗತ್ಯ. ಉತ್ತಮ ಓದುಗಾರಿಕೆ,ಆಲಿಸುವಿಕೆ ಸೃಜನಶೀಲ ರಚನೆಗಳಿಗೆ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದರು.


ಪಾಂಡ್ಯಡ್ಕ ವೆಂಕಟರಮಣ ಮೂಡಿತ್ತಾಯರು  ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ,ನಿವೃತ್ತ ಪ್ರಾಂಶುಪಾಲ ಪೆÇ್ರ. ಪಿ .ಎನ್ ಮೂಡಿತ್ತಾಯ, ಲೇಖಕರ ಸಂಘದ ಕೋಶಾಧಿಕಾರಿ ವಿಶಾಲಾಕ್ಷ ಪುತ್ರಕಳ ತರಗತಿ ನಡೆಸಿದರು. 

ಸಮಾರೋಪ ಸಮಾರಂಭದಲ್ಲಿ ರಾಘವೇಂದ್ರ ಭಟ್ ಉಡುಪು ಮೂಲೆ, ರಘುರಾಮ  ಭಟ್ ಪುಣೆ ,ಕುಸುಮಾ ಭಟ್ 

ಮೊದಲಾದವರು ಶಿಬಿರಾರ್ಥಿಗಳಿಗೆ ಪುಸ್ತಕದ ಉಡುಗೊರೆ ನೀಡಿದರು. ಸುದರ್ಶನಪಾಣಿ ಬಲ್ಲಾಳ್, ಸುಭಾಷ್ ಪೆರ್ಲಮತ್ತು ಆನಂದರು ಉಪಸ್ಥಿತರಿದ್ದರು. ರಾಜೇಶ್ ಕನ್ನಾಟಿಪಾರೆ ಸ್ವಾಗತಿಸಿ. ಆದಿಶ್ರೀ ಕೆ. ಎಸ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries