ಉಪ್ಪಳ: ಉಪ್ಪಳ ಬಿ.ಟಿ ರೋಡ್ ನ ಪ್ರಸಾದ್ ಶೆಟ್ಟಿ (44) ನಾಪತ್ತೆಯಾಗಿರುವ ಬಗ್ಗೆ ಮಂಜೇಶ್ವರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪ್ರಸಾದ್ ಶೆಟ್ಟಿ ತಂದೆ ಲಕ್ಷ್ಮಣ ಶೆಟ್ಟಿ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ.
ಆ. 22ರಂದು ಬೆಳಗ್ಗೆ ಪ್ರಸಾದ್ ಶೆಟ್ಟಿ ಮನೆಯಿಂದ ಹೊರಗೆ ತೆರಳಿದ್ದು ಅನಂತರ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಅವಿವಾಹಿತರಾದ ಪ್ರಸಾದ್ ಶೆಟ್ಟಿ ಈ ಹಿಂದೆ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ನೌಕರನಾಗಿದ್ದರು ಎಂದೂ ದೂರಿನಲ್ಲಿ ತಿಳಿಸಲಾಗಿದೆ.


