ಕಾಸರಗೋಡು: ರಾಜ್ಯ ಕೃಷಿ ಇಲಾಖೆಯು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಾಲೆಗಳಲ್ಲಿ ಅನುಷ್ಠಾನಗೊಳಿಸುತ್ತಿರುವ ‘ಕತಿರ್’ ಕೃಷಿ ಕ್ಲಬ್ ಯೋಜನೆಗೆ ರಾಜ್ಯಮಟ್ಟದ ಲೋಗೋ ಸಿದ್ಧಪಡಿಸಲು ಶಾಲಾ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.
ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಅತ್ಯುತ್ತಮ ಲೋಗೋ ವಿನ್ಯಾಸಕ್ಕೆ ₹10,000 ಬಹುಮಾನ ನೀಡಲಾಗುವುದು. ಹೈಯರ್ ಸೆಕೆಂಡರಿ ಹಂತದವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಲೋಗೋವನ್ನು ಡಿಜಿಟಲ್ ರೂಪದಲ್ಲಾಗಲಿ ಅಥವಾ A4 ಹಾಳೆಯಲ್ಲಿ ಕೈಯಿಂದಾಗಲಿ ಸಿದ್ಧಪಡಿಸಬಹುದು.ವಿದ್ಯಾರ್ಥಿಯ ಹೆಸರು, ತರಗತಿ, ಶಾಲೆಯ ಹೆಸರು, ದೂರವಾಣಿ ಸಂಖ್ಯೆ ಹಾಗೂ ಶಾಲಾ ಪ್ರಾಂಶುಪಾಲರ ಸಹಿ ಮತ್ತು ಮುದ್ರೆಯಿರುವ ಪ್ರಮಾಣಪತ್ರವನ್ನು ಎಂಟ್ರಿಯೊಂದಿಗೆ ಕಡ್ಡಾಯವಾಗಿ ಸಲ್ಲಿಸಬೇಕು.
ಕಾಸರಗೋಡು ಜಿಲ್ಲೆಯ ಶಾಲೆಗಳ ವಿದ್ಯಾರ್ಥಿಗಳು 2026 ಸೆಪ್ಟೆಂಬರ್ 30ರೊಳಗೆ paoksdvegcell@gmail.com ಇ-ಮೇಲ್ ವಿಳಾಸಕ್ಕೆ ಎಂಟ್ರಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ: 9383471960.

