ಮಂಜೇಶ್ವರ: ಕುಂಜತ್ತೂರು ತೂಮಿನಾಡಿನಲ್ಲಿ ಅಂಗಡಿಗೆ ನುಗ್ಗಿ ಮಾಲಿಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವನ ವಿರುದ್ಧ ಮಂಜೇಶ್ವರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ತರಕಾರಿ ಅಂಗಡಿ ಮಾಲಕ ಸಂದೇಶ್ (38)ಅವರ ದೂರಿನ ಮೇರೆಗೆ ಕುಂಜತ್ತೂರಿನ ಪ್ರಜ್ವಲ್ ಎಂಬಾತನ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೆ. 13ರಂದು ಮಧ್ಯಾಹ್ನ ಆರೋಪಿ ತನ್ನ ಅಂಗಡಿಗೆ ಅಕ್ರಮವಾಗಿ ನುಗ್ಗಿ ಕಲ್ಲಿನಿಂದ ಹೊಡೆದು ಹಾಗೂ ತುಳಿದು ಗಾಯಗೊಳಿಸಿರುವುದಲ್ಲದೆ, ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆಯೊಡ್ಡಿರುವುದಾಗಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ಸಂದೇಶ್ ತಿಳಿಸಿದ್ದಾರೆ.


