ಕಾಸರಗೋಡು: ಕೇರಳದ ವ್ಯಾಪ್ತಿಗೊಳಪಟ್ಟ ಸಮುದ್ರ ಪ್ರದೇಶದಲ್ಲಿ ಅನಧಿಕೃತವಾಗಿ ಮೀನುಗಾರಿಕೆಯಲ್ಲಿ ತೊಡಗಿದ್ದ ಕರ್ನಾಟಕ ನೋಂದಾಯಿತ ನೂರ್ ಇ ಬಹಾರ್ ಎಂಬ ಯಾಂತ್ರಿಕೃತ ಬೋಟನ್ನು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಎರಡು ಲಕ್ಷ ರೂ. ದಂಡ ವಿಧಿಸಿದ್ದಾರೆ. ಕಾಸರಗೋಡು ಜಿಲ್ಲಾ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಕೆ. ಶ್ರೀಜೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಚಿರುವತ್ತೂರಿನ ಮಡಕ್ಕರ ಸಮುದ್ರ ಕಿನಾರೆಯಿಂದ ಸುಮಾರು ಒಂಭತ್ತು ನಾಟಿಕಲ್ ಮೈಲು ದೂರದ ಸಮುದ್ರದಿಂದ ಬೋಟನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮೀನುಗಾರಿಕಾ ಇಲಾಖೆಯ ಸಿವಿಲ್ ಆಫೀಸರ್ ಅರ್ಜುನ್ ಬಿ. ಪೆÇದುವಾಳ್, ಕರಾವಳಿ ಭದ್ರತಾ ಗಾರ್ಡ್ಗಳಾದ ಅಶ್ಪಾಕ್ ಅಲಿ, ರಾಜೇಶ್, ಮೀನುಗಾರಿಕಾ ಬಂದರು ಗಾರ್ಡ್ಗಳಾದ ಶಿವಕುಮಾರ್ ಮತ್ತು ಧನೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ವಶಪಡಿಸಲಾದ ಬೋಟ್ನಲ್ಲಿದ್ದ ಮೀನುಗಳನ್ನು ನಂತರ ಮಡಕ್ಕರಕ್ಕೆ ತಂದು ಒಂದೂವರೆ ಲಕ್ಷ ರೂ.ಗೆ ಹರಾಜು ಮಾಡಲಾಯಿತು.

