ಕಾಸರಗೋಡು: ತ್ಯಾಜ್ಯ ಸಂಸ್ಕರಣಾ ವಲಯದಲ್ಲಿ ಕಾನೂನು ಉಲ್ಲಂಘನೆ ಪರಿಶೀಲಿಸುವ ಜಿಲ್ಲಾ ಎನ್ಫೆÇೀರ್ಸ್ಮೆಂಟ್ ಸ್ಕ್ವಾಡ್ ನಡೆಸಿದ ತಪಾಸಣೆಯಲ್ಲಿ ಮಂಜೇಶ್ವರ ಪಂಚಾಯತ್ನ ಹೊಸಂಗಡಿಯ ಪ್ಲೈವುಡ್ ಕಂಪನಿಯ ಅನ್ಯರಾಜ್ಯ ಕಾರ್ಮಿಕರು ತಮ್ಮ ವಾಸಸ್ಥಳದಲ್ಲಿನ ಮಲಿನಜಲವನ್ನು ತೆರೆದ ಪ್ರದೇಶಕ್ಕೆ ಹರಿಯಬಿಟ್ಟ ಹಿನ್ನೆಲೆಯಲ್ಲಿ ಸಂಸ್ಥೆ ಮಾಲಕನಿಂದ 15,000 ರೂ. ದಂಡ ವಸೂಲಿ ಮಾಡುವುದರ ಜತೆಗೆ, ಸೂಕ್ತ ಸೋಕ್ಪಿಟ್ ಸ್ಥಾಪಿಸಲು ನಿರ್ದೇಶ ನೀಡಲಾಯಿತು.
ಮೀಂಜದ ಆಂಗ್ಲ ಮಾಧ್ಯಮ ಶಾಲೆ, ವರ್ಕಾಡಿಯ ಆಂಗಲ ಮಾಧ್ಯಮ ಶಾಲೆಗಳಲ್ಲಿ ಪ್ರತ್ಯೇಕವಾಗಿ ಸಿದ್ಧಪಡಿಸಿದ ಹೊಂಡಗಲ್ಲಿ ಪ್ಲಾಸ್ಟಿಕ್ ಸಹಿತ ತ್ಯಾಜ್ಯಗಳನ್ನು ಉರಿಸಿರುವುದು ಪತ್ತೆಹಚ್ಚಲಾಗಿದ್ದು, ಈ ಹಿನ್ನೆಲೆಯಲ್ಲಿ ತಲಾ 5,000 ರೂ. ದಂಡ ವಸೂಲು ಮಾಡಲಾಯಿತು. ತ್ಯಾಜ್ಯ ಸಂಸ್ಕರಣೆ ವ್ಯವಸ್ಥೆ ಸಿದ್ಧಪಡಿಸದ ಹಿನ್ನೆಲೆಯಲ್ಲಿ ಮಂಜೇಶ್ವರದ ವಿವಿಧ ಕ್ವಾರ್ಟರ್ಸ್, ಅಪಾರ್ಟ್ಮೆಂಟ್ ಮಾಲಕರಿಗೆ 5000 ರೂ.ನಂತೆ ದಂಡ ವಿಧಿಸಲಾಯಿತು. ತಪಾಸಣೆಯಲ್ಲಿ ಜಿಲ್ಲಾ ಎನ್ಫೆÇೀರ್ಸ್ಮೆಂಟ್ ಸ್ಕ್ವಾಡ್ ಲೀಡರ್ ಕೆ.ವಿ. ಮೊಹಮ್ಮದ್ ಮದನಿ, ಸದಸ್ಯ ಜೋಸ್ ಬಿ.ಎಂ, ಹೆಲ್ತ್ ಇನ್ಸ್ಪೆಕ್ಟರ್ಗಳಾದ ಜಾಸ್ಮಿನ್ ಪಿ.ಕೆ, ಮಂಜು ಟಿ, ಅಖಿಲ್ ಸಿ.ಎ, ಆಶ್ರಿತಿ ಸಿ. ನಾಯರ್, ಕ್ಲರ್ಕ್ ಹರಿತ ಆರ್. ನೇತೃತ್ವ ನೀಡಿದರು.

