HEALTH TIPS

ಇರಾನಿಯನ್ ತೈಲ ಟ್ಯಾಂಕರ್ ಗಳ ಮೇಲೆ ಅಮೆರಿಕ ದಾಳಿ : ಜೋರ್ಡಾನ್ ನ ನೆಲೆಗಳ ಮೇಲೆ ಇರಾನ್‌ ಪ್ರತಿದಾಳಿ

ಟೆಹ್ರಾನ್ : ಅಮೆರಿಕದ ನೌಕಾಪಡೆಯು ಐದು ಇರಾನಿಯನ್ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಗೆ ಪ್ರತಿಕ್ರಿಯೆಯಾಗಿ, ಇರಾನ್ ಜೋರ್ಡಾನ್ ನಲ್ಲಿರುವ ಅಲ್ ಅಜ್ರಾಕ್ ನೆಲೆಯ ಮೇಲೆ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಪ್ರತಿದಾಳಿ ನಡೆಸಿತು. 


ಅಮೇರಿಕಾ ಮತ್ತು ಇರಾನ್ ನಡುವಿನ ಯುದ್ಧವು ಆರು ತಿಂಗಳು ಪೂರೈಸಿರುವ ಸಂದರ್ಭದಲ್ಲಿ ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಗುಂಡಿನ ದಾಳಿ ನಡೆದಿದೆ.

ಇರಾನ್ ಹಾರ್ಮುಝ್ ಜಲಸಂಧಿಯನ್ನು ಮುಚ್ಚುವುದನ್ನು ಮುಂದುವರಿಸಿದ್ದು, ಮತ್ತೊಂದೆಡೆ ಅಮೆರಿಕ ಇರಾನಿನ ಬಂದರುಗಳ ಮೇಲೆ ನೌಕಾ ದಿಗ್ಬಂಧನ ಹೇರಿದೆ.

ಈ ಸಂಘರ್ಷದಿಂದಾಗಿ ಮಂಗಳವಾರದ ಆರಂಭ ವಹಿವಾಟಿನಲ್ಲಿ ತೈಲ ಬೆಲೆಯು ಪ್ರತಿ ಬ್ಯಾರೆಲ್ ಗೆ 99.46 ಡಾಲರ್ ಗೆ ಏರಿಕೆಯಾಯಿತು.

ಈ ದಾಳಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಯುಎಸ್ ಸೆಂಟ್ರಲ್ ಕಮಾಂಡ್ (CENTCOM) , ಒಮಾನ್ ಕೊಲ್ಲಿಯಲ್ಲಿ ಮತ್ತು ಖರ್ಗ್ ದ್ವೀಪದ ಬಳಿ ಅಮೆರಿಕವು ಈ ಇರಾನಿಯನ್ ತೈಲ ಟ್ಯಾಂಕರ್ ಗಳ ಮೇಲೆ ದಾಳಿ ನಡೆಸಲಾಗಿದೆ. ಯುಎಸ್ ಯುದ್ಧನೌಕೆಯ ಮೇಲೆ ಇರಾನ್ ಎರಡು ದಿನಗಳಲ್ಲಿ ಎರಡು ಬಾರಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ ಹಿನ್ನೆಲೆಯಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದೆ.

"ಕಳೆದ ಎರಡು ದಿನಗಳಲ್ಲಿ ಇರಾನ್ ನ IRGC ಯುಎಸ್ ಯುದ್ಧನೌಕೆಯನ್ನು ಎರಡು ಬಾರಿ ಗುರಿಯಾಗಿಸಲು ಪ್ರಯತ್ನಿಸಿತ್ತು .ಆದರೆ ಆ ಹಡಗು ಇರಾನ್ನ ದಾಳಿಯಿಂದ ಯಶಸ್ವಿಯಾಗಿ ತಪ್ಪಿಸಿಕೊಂಡಿದೆ. ಯಾವುದೇ ಅಮೆರಿಕದ ಸಿಬ್ಬಂದಿಗೆ ಗಾಯಗಳಾಗಿಲ್ಲ" ಎಂದು CENTCOM) ಸ್ಪಷ್ಟಪಡಿಸಿದೆ .

ಈ ದಾಳಿಗಳನ್ನು ಇರಾನ್ ನ ಐಆರ್‌ಐಬಿ (IRIB) ಸಂಸ್ಥೆ ದೃಢಪಡಿಸಿದ್ದು , ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಮತ್ತು ಒಮಾನ್ ಕೊಲ್ಲಿಯ ದಕ್ಷಿಣ ಬಂದರಾದ ಜಾಸ್ಕ್ ಬಳಿ ಎರಡನೇ ಟ್ಯಾಂಕರ್ ಗೆ ಹೊಡೆತ ಬಿದ್ದಿದೆ ಎಂದು ಅದು ವರದಿ ಮಾಡಿದೆ. ಖರ್ಗ್ ದ್ವೀಪವು ಯುದ್ಧಕ್ಕೂ ಮುಂಚಿತವಾಗಿ ದೇಶದ ಶೇಕಡಾ 90 ರಷ್ಟು ತೈಲ ರಫ್ತುಗಳನ್ನು ನಿರ್ವಹಿಸುತ್ತಿತ್ತು.

ಇರಾನ್‌ ಪ್ರತಿದಾಳಿ

ಹಲವಾರು ಇರಾನಿಯನ್ ವಾಣಿಜ್ಯ ಹಡಗುಗಳ ಮೇಲೂ ದಾಳಿ ನಡೆಸಲಾಗಿದೆ ಎಂದು IRGC ತಿಳಿಸಿದೆ.

ಆದರೆ , ಜೋರ್ಡನ್ ನಲ್ಲಿರುವ ಅಲ್ ಅಜ್ರಾಕ್ ನೆಲೆ ಮೇಲೆ ಭಯಾನಕ ಕ್ಷಿಪಣಿ ದಾಳಿ ನಡೆಸುವ ಮೂಲಕ ಪ್ರತಿಕಾರ ತೀರಿಸಿಕೊಳ್ಳಲಾಗಿದೆ ಎಂದು ಹೇಳಿದೆ. ಈ ದಾಳಿಯಲ್ಲಿ ಯುಎಸ್ ಯುದ್ಧ ವಿಮಾನಗಳು ನಿಲ್ಲಿಸುವ ಹ್ಯಾಂಗರ್ ಗಳು ನಾಶವಾಗಿವೆ ಎಂದು ಪ್ರತಿಪಾದಿಸಿದೆ.

ಕುವೈತ್ ಮತ್ತು ಬಹ್ರೈನ್ ಬಂದರುಗಳಲ್ಲಿರುವ ತೈಲ ಟ್ಯಾಂಕರ್ ಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುವುದು ಎಂದು IRGC ಎಚ್ಚರಿಕೆ ನೀಡಿದ್ದು , ಅಲ್ಲಿನ ಸಿಬ್ಬಂದಿ ಕೂಡಲೇ ಸ್ಥಳಾಂತರಗೊಳ್ಳುವಂತೆ ಸೂಚಿಸಿದೆ.

ಇರಾನ್‌ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಜೋರ್ಡನ್ ಸಶಸ್ತ್ರ ಪಡೆ , ತಮ್ಮ ವಾಯು ರಕ್ಷಣಾ ಪಡೆಗಳು 20 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆದಿವೆ. ಅವುಗಳಲ್ಲಿ 18 ಅನ್ನು ಯಶಸ್ವಿಯಾಗಿ ತಡೆದು ನಾಶಪಡಿಸಲಾಗಿದ್ದು , ಉಳಿದ ಎರಡು ಕ್ಷಿಪಣಿಗಳು ಜನವಸತಿ ಇಲ್ಲದ ಪ್ರದೇಶಗಳಲ್ಲಿ ಬಿದ್ದಿವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries