HEALTH TIPS

ಕಣ್ಣಿನ ಡ್ರಾಪ್ ಬಳಸುವ ಮೊದಲು ಎಚ್ಚರವಹಿಸಿ; ಒಮ್ಮೆ ಮುಚ್ಚಳ ತೆಗೆದರೆ ಎಷ್ಟು ದಿನ ಬಳಸಬಹುದು?

ಕಣ್ಣಿನ ಡ್ರಾಪ್ ಬಳಸುವ ಮೊದಲು ಎಚ್ಚರವಹಿಸಿ; ಒಮ್ಮೆ ಮುಚ್ಚಳ ತೆಗೆದರೆ ಎಷ್ಟು ದಿನ ಬಳಸಬಹುದು?

ನೀವು ನಿರುಪದ್ರವವೆಂದು ತಿಳಿದ ಬಾಟಲಿಯೇ ಕಣ್ಣಿನ ಸೋಂಕಿಗೆ ಮೂಲವಾಗಬಹುದು. ಹಾಗಿದ್ದರೆ ಪ್ರತಿ ಬಾಟಲಿಯನ್ನು ತಿಂಗಳ ನಂತರ ಎಸೆಯಬೇಕೆ?


ಕಣ್ಣಿನ ಹನಿಗಳ ಬಾಟಲಿಯ ಮುಕ್ತಾಯದ ದಿನಾಂಕ ಒಂದು ತಿಂಗಳ ನಂತರ ಇರಬಹುದು.

ಆದರೆ ಅಲ್ಲಿಯವರೆಗೆ ನೀವು ಅದನ್ನು ಸುರಕ್ಷಿತವಾಗಿ ಬಳಸಬಹುದು ಎಂದು ಇದರ ಅರ್ಥವಲ್ಲ. ಒಮ್ಮೆ ನೀವು ಬಾಟಲಿಯನ್ನು ತೆರೆದ ನಂತರ ಪದೇಪದೆ ಬಳಸುವುದರಿಂದ ಪರಿಸರದಿಂದ ಸೂಕ್ಷ್ಮ ಜೀವಿಗಳಿಗೆ ಒಡ್ಡಿಕೊಳ್ಳಬಹುದು. ಹೀಗಾಗಿ ನೀವು ನಿರುಪದ್ರವವೆಂದು ತಿಳಿದ ಬಾಟಲಿಯೇ ಕಣ್ಣಿನ ಸೋಂಕಿಗೆ ಮೂಲವಾಗಬಹುದು. ಹಾಗಿದ್ದರೆ ಪ್ರತಿ ಬಾಟಲಿಯನ್ನು ತಿಂಗಳ ನಂತರ ಎಸೆಯಬೇಕೆ? ಅಗತ್ಯವಿಲ್ಲ ಎನ್ನುತ್ತಾರೆ ರತನ್ ಜ್ಯೋತಿ ನೇತ್ರಾಲಯದ ಸಂಸ್ಥಾಪಕರಾದ ನೇತ್ರಶಾಸ್ತ್ರಜ್ಞ ಡಾ ಪುರೇಂದ್ರ ಭಾಸಿನ್.

ಎಲ್ಲಾ ಕಣ್ಣಿನ ಡ್ರಾಪ್ಗಳನ್ನೂ ಒಂದು ತಿಂಗಳ ನಂತರ ಬಳಸಬಾರದೆ?

"ಅನೇಕ ಬಹು-ಡೋಸ್ ಕಣ್ಣಿನ ಹನಿಗಳನ್ನು ತೆರೆದ 28-30 ದಿನಗಳಲ್ಲಿ ಬಳಸಲು ಶಿಫಾರಸು ಮಾಡಲಾಗಿದೆ. ಆದರೆ ಎಲ್ಲ ಕಣ್ಣಿನ ಔಷಧಿಗಳಿಗೂ ಇದು ಅನ್ವಯಿಸುವುದಿಲ್ಲ. ಸುರಕ್ಷಿತ ಅವಧಿಯು ಉತ್ಪನ್ನ, ಸಂರಕ್ಷಕ ವ್ಯವಸ್ಥೆ ಮತ್ತು ತಯಾರಕರ ಸೂಚನೆಗಳನ್ನೂ ಅವಲಂಬಿಸಿರುತ್ತದೆ" ಎನ್ನುತ್ತಾರೆ ವೈದ್ಯರು.

ಈ ವಿಚಾರ ಮುಖ್ಯವಾಗುತ್ತದೆ. ಏಕೆಂದರೆ ವಿಭಿನ್ನ ರೀತಿಯ ಕಣ್ಣಿನ ಹನಿಗಳು ವಿಭಿನ್ನ ಪ್ಯಾಕೇಜಿಂಗ್ನಲ್ಲಿ ಬರುತ್ತವೆ. ಪ್ರಿಸರ್ವೇಟಿವ್ ಫ್ರೀ ಡ್ರಾಪ್ಗಳು (ಸಂರಕ್ಷಕಗಳಿಂದ ಮುಕ್ತವಾಗಿರುವ) ಏಕ ಬಳಕೆಯ ಬಾಟಲಿಗಳಲ್ಲಿ ಬರುತ್ತವೆ. ಅವುಗಳನ್ನು ಬಳಕೆಯ ನಂತರ ತ್ಯಜಿಸಬೇಕು. ಇತರವು ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಾಟಲಿಗಳಲ್ಲಿ ಬರುತ್ತವೆ. ಅವುಗಳನ್ನು ದೀರ್ಘಕಾಲದವರೆಗೆ ಬಳಸಬಹುದು. ಹೀಗಾಗಿ ಒಂದು ತಿಂಗಳ ನಿಯಮ ಅನುಸರಿಸುವ ಬದಲು ಲೇಬಲ್ ಮತ್ತು ಪ್ಯಾಕೇಜ್ ವಿವರಗಳನ್ನು ಪರಿಶೀಲಿಸಿ ಬಳಸಬೇಕು.

ದೀರ್ಘಕಾಲ ಕಣ್ಣಿನ ಡ್ರಾಪ್ಗಳನ್ನು ಬಳಸಿದರೆ ಏನಾಗುತ್ತದೆ?

ಬಾಟಲಿಯನ್ನು ಅನೇಕ ಬಾರಿ ತೆರೆದರೆ ಸೂಕ್ಷ್ಮಜೀವಿಗಳು ಬಾಟಲಿಯನ್ನು ಪ್ರವೇಶಿಸಬಹುದು. ಮುಖ್ಯವಾಗಿ ಬಾಟಲಿಯ ತುದಿ ನಿಮ್ಮ ಕಣ್ಣು, ರೆಪ್ಪೆಗೂದಲುಗಳು, ಬೆರಳುಗಳು ಅಥವಾ ಇನ್ನೊಂದು ಮೇಲ್ಮೈಯನ್ನು ಸ್ಪರ್ಶಿಸಿದರೆ ಹೀಗಾಗಬಹುದು. ಕಲುಷಿತ ಹನಿಗಳು ಕಾಂಜಕ್ಟಿವಿಟೀಸ್, ಕಾರ್ನಿಯಲ್ ಸೋಂಕು ಮತ್ತು ಉರಿಯೂತಕ್ಕೆ ಕಾರಣವಾಗಬಹುದು" ಎಂದು ಅವರು ವಿವರಿಸಿದರು.

ಕಾಂಜಂಕ್ಟಿವಿಟಿಸ್ ಅನೇಕ ಸಂದರ್ಭಗಳಲ್ಲಿ ತುಲನಾತ್ಮಕವಾಗಿ ಸೌಮ್ಯವಾಗಿರಬಹುದು. ಕಾರ್ನಿಯವನ್ನು ಒಳಗೊಂಡ ಸೋಂಕು ಹೆಚ್ಚು ಗಂಭೀರವಾಗಿರುತ್ತದೆ. "ತೀವ್ರತರವಾದ ಪ್ರಕರಣಗಳಲ್ಲಿ ವಿಶೇಷವಾಗಿ ಕಾರ್ನಿಯ ಒಳಗೊಂಡಿರುವಾಗ ದೃಷ್ಟಿ ಸೋಂಕಿನಿಂದ ಆತಂಕ ಸೃಷ್ಟಿಯಾಗಬಹುದು" ಎಂದು ಅವರು ಎಚ್ಚರಿಸಿದ್ದಾರೆ.

ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು?

ಕಣ್ಣು ಕೆಂಪಾಗುವುದು, ಕಣ್ಣು ನೋವು, ವಿಸರ್ಜನೆ, ಊತ, ಬೆಳಕಿಗೆ ಸೂಕ್ಷ್ಮತೆ ಅಥವಾ ಮಸುಕಾದ ದೃಷ್ಟಿ ಸಮಸ್ಯೆ ಇದ್ದಲ್ಲಿ ಹಳೆಯ ಅಥವಾ ಕಲುಷಿತಗೊಂಡ ಬಾಟಲಿ ಜೊತೆಗೆ ಸ್ವಯಂ ಚಿಕಿತ್ಸೆ ನೀಡುವ ಬದಲು ವೈದ್ಯಕೀಯ ಗಮನ ಕೊಡಬೇಕಾಗುತ್ತದೆ.

ಉಳಿದಂತೆ ನಾವು ಮಾಡುವ ಸಾಮಾನ್ಯ ತಪ್ಪುಗಳೆಂದರೆ ಡ್ರಾಪರ್ ತುದಿ ಸ್ಪರ್ಶಿಸುವುದು, ಬೇರೊಬ್ಬರ ಕಣ್ಣಿನ ಡ್ರಾಪ್ಗಳನ್ನು ಬಳಸುವುದು, ಬಾಟಲಿಯ ಮುಚ್ಚಳ ಹಾಕದೆ ಇಡುವುದು, ಬಾಟಲಿಯನ್ನು ಹೆಚ್ಚು ಶಾಖ ಅಥವಾ ಸೂರ್ಯನ ಬೆಳಕಿನಲ್ಲಿ ಸಂಗ್ರಹಿಸಿಡುವುದು ಮತ್ತು ಶಿಫಾರಸು ಮಾಡಿದ ತ್ಯಜಿಸುವ ದಿನಾಂಕ ಮೀರಿ ಬಾಟಲಿ ಬಳಸುವುದು ಸೇರಿವೆ.

ಈ ಕೆಲವು ಸರಳ ಅಭ್ಯಾಸಗಳಿಂದ ಅಪಾಯ ತಡೆಯಬಹುದು:

• ಕಣ್ಣಿನ ಡ್ರಾಪ್ ಹಾಕುವ ಮೊದಲು ಕೈ ತೊಳೆಯುವುದು

• ಡ್ರಾಪರ್ ತುದಿಯು ಕಣ್ಣು, ರೆಪ್ಪೆಗೂದಲು ಅಥವಾ ಚರ್ಮ ಸ್ಪರ್ಶಿಸಲು ಬಿಡಬೇಡಿ.

• ಬಳಸಿದ ತಕ್ಷಣ ಕ್ಯಾಪ್ ಬದಲಿಸಿ

• ತಯಾರಕರ ಸೂಚನೆಗಳ ಪ್ರಕಾರ ಬಾಟಲಿಯನ್ನು ಅತಿಯಾದ ಶಾಖ ಅಥವಾ ಸೂರ್ಯನ ಬೆಳಕಿನಿಂದ ದೂರವಿಡಿ. ಸಲಹೆ ನೀಡಿದಂತೆ ಸಂಗ್ರಹಿಸಿಡಿ

• ಕಣ್ಣಿನ ಡ್ರಾಪ್ಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬೇಡಿ

• ಬಾಟಲಿ ತೆರೆದ ದಿನಾಂಕವನ್ನು ಲೇಬಲ್ನಲ್ಲಿ ಬರೆಯಿರಿ. ಹೀಗಾಗಿ ಯಾವಾಗ ಎಸೆಯಬೇಕು ಎಂದು ತಿಳಿಯುತ್ತದೆ.






Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries