ಬದಿಯಡ್ಕ: ಕಾರಡ್ಕ ಮತ್ತು ಮುಳ್ಳೇರಿಯ ವಲಯದಲ್ಲಿ ಭಜನಾ ಪರಿಷತ್‍ನ ನೂತನ ವಲಯ ಸಮಿತಿಯನ್ನು ಮುಳ್ಳೇರಿಯ ಶ್ರೀ ಗಣೇಶ ಕಲಾ ಮಂದಿರದಲ್ಲಿ ರೂಪೀಕರಿಸಲಾಯಿತು. ವಲಯದ ಭಜನಾ ಮಂಡಳಿಗಳ ಪದಾಧಿಕಾರಿಗಳ ಸಭೆಯನ್ನು ತಾಲೂಕು ಭಜನಾ ಪರಿಷತ್ ನ ಅಧ್ಯಕ್ಷ ವೆಂಕಟರಮಣ ಹೊಳ್ಳ ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಭಜನಾ ಪರಿಷತ್‍ನ ಸಂಯೋಜಕ ಸಂತೋಷ ಕುಮಾರ್ ಧರ್ಮಸ್ಥಳ ಭಜನಾ ಪರಿಷತ್‍ನ ಮೂಲಕ ನಡೆಯುವ ಕಾರ್ಯ ಚಟುವಟಿಗಳ ಬಗ್ಗೆ ಮಾಹಿತಿ ನೀಡುತ್ತಾ ಭಜನಾ ಕಮ್ಮಟ ಮತ್ತು ಭಜನಾ ಮಂಗಳೋತ್ಸವದಲ್ಲಿ ಪಾಲ್ಗೊಳ್ಳುವ ಬಗ್ಗೆ ಮಾಹಿತಿ ನೀಡಿದರು. ವಲಯ ಸಮಿತಿಯ ರಚನೆ ಮಾಡಿದ್ದು ವಲಯದ ಭಜನಾ ಪರಿಷತ್ ಅಧ್ಯಕ್ಷರಾಗಿ ಚಂದ್ರಶೇಖರ ನಾಟೆಕಲ್, ಉಪಾಧ್ಯಕ್ಷರಾಗಿ ರಮೇಶ್ ಮಲ್ಲಾವರ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಅಡೂರು, ಜೊತೆ ಕಾರ್ಯದರ್ಶಿಯಾಗಿ ವೇಣುಗೋಪಾಲ ಪಾಂಡಿ, ಕೋಶಾಧಿಕಾರಿಯಾಗಿ ರೇಣುಕಾ ಇವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರಾಗಿ ಈಶ್ವರ ಗೌಡ ಕುತ್ತಿ ಮುಂಡಾ, ವಿಶ್ವನಾಥ ಕುಂಟಾರು ಮತ್ತು ಉದಯ ಮಾರ್ಪನಡ್ಕ ಅವರನ್ನು ಆಯ್ಕೆ ಮಾಡಲಾಯಿತು. ತಾಲೂಕು ಯೋಜನಾಧಿಕಾರಿ ದಿನೇಶ್, ತಾಲೂಕು ಜನಜಾಗೃತಿ ಅಧ್ಯಕ್ಷ ಜಯರಾಮ ಪಾಟಾಳಿ ಉಪಸ್ಥಿತರಿದ್ದರು. ಮೇಲ್ವಿಚಾರಕ ರಮೇಶ್ ಸ್ವಾಗತಿಸಿ, ಸೇವಾ ಪ್ರತಿನಿಧಿ ಶಶಿಕಲಾ ವಂದಿಸಿದರು.

.jpg)
.jpg)
