ಕುಂಬಳೆ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಮಾಳಿಗಪ್ಪುರತ್ತಮ್ಮ ದೇವಿಯನ್ನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿದ ಸನ್ನಿ ಎಂ. ಕಾಪಿಕೋಡ್ ವಿರುದ್ಧ ಕುಂಬಳೆ ಪೋಲೀಸ್ ಠಾಣೆಯಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ದೂರು ನೀಡಲಾಯಿತು.
ತಿರೂರ್‍ನ ತುಂಜನ್ ಪರಂಬದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸನ್ನಿ ಎಂ ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಿದ್ದು, ಹಿಂದೂಗಳ ಧಾರ್ಮಿಕ ಶ್ರದ್ದೆಗೆ ತುಂಬಾ ನೋವು ಉಂಟಾಗಿದೆ. ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಧರ್ಮ ಪ್ರಸಾರ ಪ್ರಮುಖ ಸುರೇಶ್ ಶೆಟ್ಟಿ ಪರಂಕಿಲ ಒತ್ತಾಯಿಸಿ ಮನವಿ ನೀಡಿದರು. ತಂಡದಲ್ಲಿ ಮಂಗಲ್ಪಾಡಿ ಪಂಚಾಯತಿ ಸದಸ್ಯರಾದ ಶಮಂತ್ ಶೆಟ್ಟಿ, ಎಚ್. ಕೆ. ಶೆಟ್ಟಿ, ಪ್ರವೀಣ್ ಕುಮಾರ್, ಹರಿನಾಥ್ ಭಂಡಾರಿ ಒಡ್ಡಂಬೆಟ್ಟು, ಬಾಲಕೃಷ್ಣ ಅಂಬಾರು, ಕಿಶೋರ್ ಭಗವತಿ ಮೊದಲಾದವರು ಜೊತೆಗಿದ್ದರು.

.jpg)
