ಬದಿಯಡ್ಕ: ಧರ್ಮವೆಂಬ ಕೊಡೆಯ ಅಡಿಯಲ್ಲಿರುವ ನಮ್ಮೆಲ್ಲರನ್ನು ರಕ್ಷಿಸುವ ಭಗವಂತನ ಮುಂದೆ ನಾವೆಲ್ಲರೂ ಸಮರ್ಪಣಾ ಭಾವವನ್ನು ಹೊಂದಿರಬೇಕು. ವಿವಿಧ ಆಚರಣೆಗಳು ನಮ್ಮೆಲ್ಲರನ್ನು ಒಂದುಗೂಡಿಸುತ್ತದೆ ಎಂದು ಕಾಸರಗೋಡು ನಗರಸಭೆಯ ಮಾಜಿ ಅಧ್ಯಕ್ಷ ಡಾ. ಎಸ್.ಜೆ. ಪ್ರಸಾದ್ ತುರುತ್ತಿ ಹೇಳಿದರು.
ಪಾಡಿ ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಇತ್ತೀಚೆಗೆ ನಡೆದ ಒಳಾಂಗಣದ ಮೇಲ್ಮಾಡಿನ ನಿರ್ಮಾಣಕಾರ್ಯ ಯೋಜನೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಇರುವೈಲ್ ಕೇಶವ ತಂತ್ರಿ ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನವನ್ನು ನೀಡಿದರು. ಶ್ರೀ ಹರಿಹರ ಸೇವಾಸಮಿತಿಯ ಅಧ್ಯಕ್ಷ ಎಂ.ಜೆ. ಹರಿಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಣಿಪಾಲ್ ಕೆ.ಎಂ.ಸಿ. ಆಸ್ಪತ್ರೆಯ ತಜ್ಞ ವೈದ್ಯ ಡಾ. ಸುನಿಲ್ ಕೃಷ್ಣ ಎಂ., ಮಂಗಲ್ಪಾಡಿ ಬಂಟರ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಮುಟ್ಟಂ, ಧಾರ್ಮಿಕ ಮುಖಂಡ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಉದ್ಯಮಿ ಅಭಿಲಾಷ್ ಕೆ.ವಿ., ಊರಿನ ಪ್ರಮುಖರು ಪಾಲ್ಗೊಂಡು ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಶ್ರೀಕ್ಷೇತ್ರದಲ್ಲಿ ವಿಶೇಷವಾಗಿ ತುಪ್ಪದೀಪ ಸೇವೆ ಬಿ.ಗೋಪಾಲಕೃಷ್ಣ ಪೈ ಬದಿಯಡ್ಕ ಅವರು ಶ್ರೀಸನ್ನಿಧಿಯಲ್ಲಿ ದೀಪಬೆಳಗಿಸುವುದರೊಂದಿಗೆ ಆರಂಭಿಸಲಾಯಿತು. ಶ್ರೀ ಹರಿಹರ ಸೇವಾಸಮಿತಿಯ ಕಾರ್ಯದರ್ಶಿ ಸಿ.ಕೆ.ವೇಣುಗೋಪಾಲನ್ ನಾಯರ್ ಸ್ವಾಗತಿಸಿ, ಕೋಶಾಧಿಕಾರಿ ವಿ.ಎನ್.ರವೀಂದ್ರನ್ ವಂದಿಸಿದರು. ಹಿರಿಯ ಅಧ್ಯಾಪಕ ಶ್ರೀನಿವಾಸ ಕಾರ್ಯಕ್ರಮ ನಿರೂಪಿಸಿದರು. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೆಳಗ್ಗೆ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

.jpg)
.jpg)
