HEALTH TIPS

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ: ಸೋನಿಯಾ ವಿರುದ್ಧದ ಮೊಕದ್ದಮೆಗೆ ಮರುಜೀವ ನೀಡಿದ ನ್ಯಾಯಾಲಯ

ನವದೆಹಲಿ:  ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಹಿಂದೆಯೇ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿಯ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿತ್ತು ಎಂಬ ಆರೋಪದ ಬಗ್ಗೆ ತನಿಖೆ ನಿರಾಕರಿಸಿ ಮ್ಯಾಜಿಸ್ಟ್ರೇಟ್ ಒಬ್ಬರು ನೀಡಿರುವ ಆದೇಶವನ್ನು ದಿಲ್ಲಿ ನ್ಯಾಯಾಲಯವೊಂದು ಸೋಮವಾರ ರದ್ದುಗೊಳಿಸಿದೆ.


ದಾಖಲೆಗಳ ನಕಲಿ ಆರೋಪಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿದ ದೂರಿಗೂ, ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಮ್ಯಾಜಿಸ್ಟ್ರೇಟ್ ನೀಡಿರುವ ಆದೇಶಕ್ಕೂ ವ್ಯತ್ಯಾಸವಿದೆ ಎಂದು ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ತನ್ನ ಆದೇಶದ ಪ್ರಮುಖ ಭಾಗವನ್ನು ಓದುತ್ತಾ ಹೇಳಿದರು.

ಮ್ಯಾಜಿಸ್ಟ್ರೇಟ್ ನೀಡಿರುವ ತೀರ್ಪು ಪ್ರಕರಣದ ಸತ್ಯಾಸತ್ಯತೆಗಳಿಗೆ ಹೋಲುತ್ತಿಲ್ಲ ಎಂಬುದಾಗಿಯೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸೂಕ್ತ ತನಿಖೆಗಾಗಿ ನ್ಯಾಯಾಲಯವು ಪ್ರಕರಣವನ್ನು ಮ್ಯಾಜಿಸ್ಟ್ರೇಟ್‌ಗೆ ಮರಳಿಸಿದೆ ಹಾಗೂ ಸೆಪ್ಟೆಂಬರ್ 29ರಂದು ವಿಶೇಷ ನ್ಯಾಯಾಲಯವೊಂದರ ಮೂಲಕ ಹೊಸದಾಗಿ ವಿಚಾರಣೆ ನಡೆಸುವಂತೆ ನಿರ್ದೇಶಿಸಿದೆ.

ದೂರಿನಲ್ಲಿ ನಿರ್ದಿಷ್ಟ ವಿವರಗಳ ಕೊರತೆಯಿದೆ ಎಂಬುದಾಗಿ ಮ್ಯಾಜಿಸ್ಟ್ರೇಟ್ ಆದೇಶದಲ್ಲಿ ನಮೂದಿಸಲಾಗಿದ್ದು, ಇದು ಸ್ಪಷ್ಟ ಕಾನೂನು ದೋಷದಿಂದ ಕೂಡಿದೆ ಎಂದು ನ್ಯಾಯಾಲಯ ಹೇಳಿದೆ.

ಸೋನಿಯಾ ಗಾಂಧಿ 1983ರಲ್ಲಿ ಭಾರತೀಯ ಪೌರತ್ವ ಪಡೆಯುವ ಮುನ್ನ, ಅಂದರೆ 1980ರಲ್ಲೇ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಂಡಿದ್ದರು ಎಂಬ ಇನ್ನೊಂದು ದೂರನ್ನು ದಿಲ್ಲಿಯ ಇನ್ನೊಂದು ನ್ಯಾಯಾಲಯವು ಸೆಪ್ಟಂಬರ್ 10ರಂದು ವಜಾಗೊಳಿಸಿತ್ತು. ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಹಾಗೂ ಇದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ನ್ಯಾಯಾಲಯ ಹೇಳಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ದೂರುದಾರ ವಿಕಾಸ್ ಪಾಠಕ್ ಅವರ ವಾದವನ್ನು ಎರಡು ವಿಚಾರಣೆಗಳಲ್ಲಿ ಕೂಲಂಕಷವಾಗಿ ಆಲಿಸಿದ ನಂತರ, ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ, ಸೆಪ್ಟೆಂಬರ್ 10ರಂದು ನಾಲ್ಕು ಪುಟಗಳ ಸಂಕ್ಷಿಪ್ತ ಆದೇಶ ಹೊರಡಿಸಿದ್ದರು.

ದೂರನ್ನು ವಜಾಗೊಳಿಸುವ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕಿ ಮತದಾರರಾಗಿ ನೋಂದಾಯಿಸಿಕೊಳ್ಳಲು ದಾಖಲೆಗಳನ್ನು ನಕಲು ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಬಲವಾದ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಬೆಟ್ಟುಮಾಡಿತ್ತು. ಅದೂ ಅಲ್ಲದೆ, ಈ ವಿಷಯವು ನ್ಯಾಯಾಲಯದ ವ್ಯಾಪ್ತಿಯನ್ನು ಮೀರಿದ್ದು ಎಂದೂ ಹೇಳಿತ್ತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries