HEALTH TIPS

ಶಿಶು ಉತ್ಪನ್ನಗಳಲ್ಲಿ ನಿಯಮ ಮೀರಿದ ಪ್ರಚಾರ: ನೆಸ್ಲೆ ವಿರುದ್ಧ FSSAI ಕ್ರಮ

ನವದೆಹಲಿ:  ಶಿಶು ಪೋಷಕಾಂಶ ಉತ್ಪನ್ನಗಳಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ನೆಸ್ಲೆ ಇಂಡಿಯಾ ಲಿಮಿಟೆಡ್ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಾನೂನು ಕ್ರಮ ಆರಂಭಿಸಿದೆ.


'ನಾನ್ ಎಕ್ಸೆಲ್ಲಾ ಪ್ರೋ ಸ್ಟೇಜ್ 1' (NAN Excella Pro Stage 1), 'ಲ್ಯಾಕ್ಟೋಜೆನ್ ಪ್ರೋ 1' (Lactogen Pro 1) ಉತ್ಪನ್ನಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ 'ನ್ಯಾನ್ ಎಕ್ಸೆಲ್ಲಾ ಪ್ರೋ' ಉತ್ಪನ್ನದ ಮೇಲಿದ್ದ '5HMOs' ಮತ್ತು 'ವ್ಹೇ ಪ್ರೋಟೀನ್' ಹಾಗೂ 'ಲ್ಯಾಕ್ಟೋಜೆನ್ ಪ್ರೋ 1' ಉತ್ಪನ್ನದಲ್ಲಿ 'ವ್ಹೇ ಪ್ರೋಟೀನ್ ಜೀರ್ಣಿಸಿಕೊಳ್ಳಲು ಸುಲಭ' ಎಂಬ ಪ್ರಚಾರದ ಹೇಳಿಕೆಗಳನ್ನು ಎಫ್‌ಎಸ್‌ಎಸ್‌ಎಐ ಪ್ರಶ್ನಿಸಿದೆ.

ಶಿಶು ಪೋಷಕಾಂಶ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಚಾರದ ವಾಕ್ಯಗಳನ್ನು ಬಳಸುವುದು, ಆಹಾರ ಸುರಕ್ಷತಾ ಕಾಯ್ದೆ-2020 ಹಾಗೂ 1992ರ ಶಿಶು ಹಾಲಿನ ಪರ್ಯಾಯ ಉತ್ಪನ್ನಗಳ ನಿಯಂತ್ರಣ ಕಾಯ್ದೆಯಡಿ ನಿಷೇಧಿಸಲಾಗಿದೆ. ನೆಸ್ಲೆ ಸಂಸ್ಥೆಯು ಈ ನಿಯಮಗಳನ್ನು ಮೀರಿ ಪ್ರಚಾರ ಮಾಡಿದೆ ಎಂದು ಪ್ರಾಧಿಕಾರ ತಿಳಿಸಿದೆ.

ನೆಸ್ಲೆಯ ಫಾಲೋ-ಅಪ್ ಫಾರ್ಮುಲಾದ ಮಾದರಿ ಪರೀಕ್ಷಿಸಿದಾಗ ಅದರಲ್ಲಿ ಅಗತ್ಯಕ್ಕಿಂತ ಕಡಿಮೆ ಪ್ರಮಾಣದ 'ಬಯೋಟಿನ್' ಇರುವುದು ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ.

ಈ ಉತ್ಪನ್ನಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ನೆಸ್ಲೆ ಇಂಡಿಯಾ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಪ್ರತ್ಯೇಕ ಪ್ರಕರಣ ದಾಖಲಿಸಿದೆ.

ಷೇರು ಮಾರುಕಟ್ಟೆ ಮೇಲಿನ ಪ್ರಭಾವ

ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಬಿಎಸ್‌ಇ (BSE) ಮಾರುಕಟ್ಟೆಯಲ್ಲಿ ನೆಸ್ಲೆ ಇಂಡಿಯಾ ಷೇರುಗಳ ಮೌಲ್ಯ ಸುಮಾರು ಶೇ 2ರಷ್ಟು ಕುಸಿತ ಕಂಡು, ₹1,345.45 ತಲುಪಿದೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries