HEALTH TIPS

Mizoram | ರಸ್ತೆ ಜಗಳ; ಯೋಧನನ್ನು ಥಳಿಸಿ ಹತ್ಯೆಗೈದ ದುಷ್ಕರ್ಮಿಗಳು

ಐಝಾಲ್: ಮಿಜೋರಾಂನ ಕೊಲಾಸಿಬ್ ಜಿಲ್ಲೆಯಲ್ಲಿ ನಡೆದ ರಸ್ತೆ ಜಗಳದ ಸಂದರ್ಭ ಯೋಧನೋರ್ವನನ್ನು ಗುಂಪೊಂದು ಥಳಿಸಿ ಹತ್ಯೆಗೈದಿದೆ.


ಬುವಾಲ್ಪುಯಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-306ರಲ್ಲಿ ರವಿವಾರ ಸಂಜೆ ನಡೆದ ಈ ಘಟನೆಗೆ ಸಂಬಂಧಿಸಿ ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. 

ಹತ್ಯೆಯಾದ ಯೋಧ ಝಕರಿಯಾ(29) ಅಸ್ಸಾಂ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜನೆಗೊಂಡಿದ್ದರು ಎಂದು ಜಿಲ್ಲಾ ವರಿಷ್ಠಾಧಿಕಾರಿ ಲಾಲ್ರಿನ್ಪುಯಾ ವರ್ತೆ ತಿಳಿಸಿದ್ದಾರೆ.

''ಝಕರಿಯಾ ಅವರನ್ನು ಐಜ್ವಾಲ್ ಬಳಿಯ ಲೇಂಗ್ಬುಯಿ ವಿಮಾನ ನಿಲ್ದಾಣದಲ್ಲಿ ಅವರ ಸ್ನೇಹಿತ ಜಾನ್ ಲಾಲ್ತಾನ್ಪುಯಾ ಬರ ಮಾಡಿಕೊಂಡಿದ್ದರು. ಇಬ್ಬರೂ ಟ್ರಕ್‌ನಲ್ಲಿ ಕೊಲಾಸಿಬ್ ಕಡೆಗೆ ಪ್ರಯಾಣಿಸುತ್ತಿದ್ದಾಗ ಕಾನ್ವ್ಪುಯಿ ಪಟ್ಟಣದ ಯುವಕರ ಗುಂಪೊಂದು ಬುವಾಲ್ಪುಯಿ ಗ್ರಾಮದ ಸಮೀಪ ಅವರ ಮೇಲೆ ಹಲ್ಲೆ ನಡೆಸಿದೆ. ಘಟನೆಯಲ್ಲಿ ಝಕರಿಯಾ ಸ್ಥಳದಲ್ಲೇ ಮೃತಪಟ್ಟರೆ, ಟ್ರಕ್ ಚಲಾಯಿಸುತ್ತಿದ್ದ ಲಾಲ್ತಾನ್ಪುಯಾ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಝಕರಿಯಾ ಅವರ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries