ನವದೆಹಲಿ: 2005ರ ಮತದಾರ ಪಟ್ಟಿಯ ಜೊತೆ ಪ್ರಸಕ್ತ ನಡೆಯುತ್ತಿರುವ ಎಸ್ಐಆರ್ನಲ್ಲಿ ಮತದಾರರ ವಿವರಗಳ ಮ್ಯಾಪಿಂಗ್ನಲ್ಲಿ ವ್ಯತ್ಯಾಸಗಳಿರುವ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್ನ 5 ಲಕ್ಷಕ್ಕೂ ಅಧಿಕ ಮತದಾರರಿಗೆ ಚುನಾವಣಾ ಆಯೋಗದಿಂದ ನೋಟಿಸ್ ಬರುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಎಸ್ಐಆರ್ ಕರಡುಪಟ್ಟಿಯನ್ನು ಪ್ರಕಟಿಸಿದ ಮರುದಿನವಾದ ಸೋಮವಾರ, ನಾಗಾಲ್ಯಾಂಡ್ ರಾಜಧಾನಿ ಕೊಹಿಮಾದಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಅವಾ ಲೋರಿನ್ ಅವರು ಮಾತನಾಡಿ, ರಾಜ್ಯದ ಒಟ್ಟು ಮತದಾರರ ಪೈಕಿ 9.33 ಶೇ.ಮಂದಿ ನೋ ಮ್ಯಾಪಿಂಗ್ ಶ್ರೇಣಿಯಲ್ಲಿದ್ದಾರೆ ಹಾಗೂ ಶೇ.21.31 ಮಂದಿಯಲ್ಲಿ ಮ್ಯಾಪಿಂಗ್ನಲ್ಲಿ ಅಸಂಗತತೆಗಳು ಕಂಡುಬಂದಿರುವುದಾಗಿ ಅವರು ತಿಳಿಸಿದ್ದಾರೆ.
ನಾಗಾಲ್ಯಾಂಡ್ನ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕರಡು ಮತದಾರಪಟ್ಟಿಯು ರವಿವಾರ ಪ್ರಕಟಗೊಂಡಿದ್ದು, ಸುಮಾರು 13.57 ಲಕ್ಷ ಮತದಾರರ ಪೈಕಿ 1.59 ಮಂದಿಯನ್ನು ಮತದಾರ ಪಟ್ಟಿಯಿಂದ ಹೊರಗಿಡಲಾಗಿದೆ.

