HEALTH TIPS

Pakistan | ಸೇನಾ ಬೆಂಗಾವಲು ವಾಹನದ ಮೇಲೆ ಬಲೂಚಿ ಮಹಿಳಾ ಘಟಕದಿಂದ ದಾಳಿ; 9 ಯೋಧರು ಮೃತ್ಯು

ಬಲೂಚಿಸ್ತಾನ : ಪಾಕಿಸ್ತಾನ ಸೇನೆಯ ಬೆಂಗಾವಲು ವಾಹನದ ಮೇಲೆ ಬಲೂಚಿ ಪ್ರತ್ಯೇಕತಾವಾದಿ ಸಂಘಟನೆಯ ಮಹಿಳಾ ಸಶಸ್ತ್ರ ಘಟಕ ದಾಳಿ ನಡೆಸಿದ್ದು, 9 ಮಂದಿ ಪಾಕಿಸ್ತಾನಿ ಯೋಧರು ಮೃತಪಟ್ಟಿದ್ದಾರೆ ಎಂದು ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ (BLF) ಹೇಳಿಕೊಂಡಿದೆ.


BLF ಬಿಡುಗಡೆ ಮಾಡಿರುವ ವೀಡಿಯೊದಲ್ಲಿ, ಸಂಘಟನೆಯ ಮೊದಲ ಸಶಸ್ತ್ರ ಮಹಿಳಾ ಘಟಕವಾದ 'ಕರೀಮಾ ಸಶಸ್ತ್ರ ದಾಳಿ ವಿಭಾಗ'ದ ಸದಸ್ಯರು ಪಾಕಿಸ್ತಾನ ಸೇನೆಯ ವಾಹನಗಳ ಮೇಲೆ ದಾಳಿ ನಡೆಸುತ್ತಿರುವ ದೃಶ್ಯಗಳಿವೆ. ಪಾಕಿಸ್ತಾನ ಸೇನೆಯ ಬೆಂಗಾವಲು ವಾಹನ ಮತ್ತು ಮತ್ತೊಂದು ಸಶಸ್ತ್ರ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು BLF ಹೇಳಿದೆ.

ಸೆಪ್ಟೆಂಬರ್ 22ರಂದು ಬಲೂಚಿಸ್ತಾನ ಪ್ರಾಂತ್ಯದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC)ನಲ್ಲಿ ಪಾಕಿಸ್ತಾನ ಸೇನೆಯ ಕ್ಷಿಪ್ರ ಸ್ಪಂದನಾ ಪಡೆಯ ಮೂರು ವಾಹನಗಳು ಸಾಗುತ್ತಿದ್ದವು. ಈ ವಾಹನಗಳ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಲಾಗಿದೆ ಎಂದು BLF ತಿಳಿಸಿದೆ.

ರೈಫಲ್ ಗಳನ್ನು ಹಿಡಿದಿದ್ದ ದಾಳಿಕೋರರು ಸೇನಾ ವಾಹನಗಳ ಮೇಲೆ ದಾಳಿ ನಡೆಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಸೇನಾ ವಾಹನದಿಂದ ಕೇವಲ ಐದು ಹೆಜ್ಜೆಗಳಷ್ಟು ದೂರದಲ್ಲಿದ್ದುಕೊಂಡು ದಾಳಿ ನಡೆಸಲಾಗಿದೆ ಎಂದು ವೀಡಿಯೊದಲ್ಲಿ ಮಹಿಳಾ ಕಮಾಂಡರ್ ಒಬ್ಬರು ವಿವರಿಸಿದ್ದಾರೆ. ಇದು ಮಹಿಳಾ ಘಟಕದ ಸದಸ್ಯರು ಪಡೆದಿರುವ ಉನ್ನತ ಮಟ್ಟದ ತರಬೇತಿಯನ್ನು ತೋರಿಸುತ್ತದೆ ಎಂದು ವ್ಯಾಖ್ಯಾನಿಸಲಾಗಿದೆ.

BLF ವಕ್ತಾರ ಮೇಜರ್ ಗ್ವಾಹ್ರಮ್ ಬಲೋಚ್ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ದಾಳಿಯಲ್ಲಿ ಪಾಕಿಸ್ತಾನ ಸೇನೆಯ ಹಲವು ವಾಹನಗಳು ಗಂಭೀರವಾಗಿ ಹಾನಿಗೀಡಾಗಿವೆ.

ಮಹಿಳಾ ಘಟಕ ನಡೆಸಿದ ಈ ಕಾರ್ಯಾಚರಣೆಗೆ BLFನ 'ಕುರ್ಬಾನ್ ಘಟಕ' ನೆರವು ನೀಡಿತ್ತು. ತಮ್ಮನ್ನು ಸುತ್ತುವರಿಯಲು ಪಾಕಿಸ್ತಾನ ಸೇನಾಪಡೆಗಳು ಯತ್ನಿಸಿದವು. ಆದರೆ, ಅವರ ವಿರುದ್ಧ ಯಶಸ್ವಿಯಾಗಿ ಹೋರಾಡಿ ಸೇನಾಪಡೆಗಳನ್ನೇ ಸುತ್ತುವರಿಯಲಾಯಿತು ಎಂದು ಮೇಜರ್ ಗ್ವಾಹ್ರಮ್ ಬಲೋಚ್ ಹೇಳಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕುರ್ಬಾನ್ ಘಟಕದ ಯೋಧ ಚಕರ್ ಮುರಾದ್ ಅಲಿಯಾಸ್ ದಿಲೀಪ್ ಜಾನ್ ಮೃತಪಟ್ಟಿದ್ದಾರೆ ಎಂದು ಮೇಜರ್ ಗ್ವಾಹ್ರಮ್ ಬಲೋಚ್ ತಿಳಿಸಿದ್ದಾರೆ.


مانیٹرنگ : بلوچستان لبریشن فرنٹ (BLF) نے اپنے میڈیا سیل ’’آشوب‘‘ کے ذریعے اپنے نو تشکیل شدہ ’’کریمہ آرمڈ اسالٹ ڈویژن‘‘ (KAAD) کی ایک ویڈیو جاری کی ہے۔ ویڈیو میں تربت کے علاقے جوسک میں سی پیک روڈ پر کیو آر ایف قافلے پر حملے اور قلات کے علاقے منگچر میں ناکہ بندی اور گاڑیوں کے Show more






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries