HEALTH TIPS

V-Dem ಚುನಾವಣಾ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತಕ್ಕೆ 106ನೇ ಸ್ಥಾನ

ನವದೆಹಲಿ: ವಿ-ಡೆಮ್ ಸಂಸ್ಥೆಯ ಚುನಾವಣಾ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತ 179 ದೇಶಗಳ ಪೈಕಿ 106ನೇ ಸ್ಥಾನದಲ್ಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸದಸ್ಯ ಪಿ. ಚಿದಂಬರಂ ಮಂಗಳವಾರ ಗಮನ ಸೆಳೆದಿದ್ದಾರೆ.

ಇದು 1975ರ ನಂತರ ದೇಶ ಪಡೆದ ಅತಿ ಕಡಿಮೆ ಶ್ರೇಣಿ ಎಂದು ಅವರು 'ಎಕ್ಸ್'ನ ಪೋಸ್ಟ್‌ನಲ್ಲಿ ಹೇಳಿದ್ದಾರೆ. 


ವಿ-ಡೆಮ್ ಸಂಸ್ಥೆ 2025ನೇ ಸಾಲಿನ ಚುನಾವಣಾ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತಕ್ಕೆ 0.68 ಅಂಕಗಳನ್ನು ನೀಡಿದೆ. ಇದರೊಂದಿಗೆ ಭಾರತ ಜಾಗತಿಕ ಮಟ್ಟದಲ್ಲಿ 106ನೇ ಸ್ಥಾನದಲ್ಲಿದೆ. ಅದೇ ರೀತಿ ಉದಾರವಾದಿ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತ 0.26 ಅಂಕಗಳೊಂದಿಗೆ 105ನೇ ಸ್ಥಾನದಲ್ಲಿದೆ.

ವಿ-ಡೆಮ್ ಸಂಸ್ಥೆಯು ಪ್ರಪಂಚದ ಒಬ್ಬ ಸಾಮಾನ್ಯ ಪ್ರಜೆ ಅನುಭವಿಸುವ ಪ್ರಜಾಪ್ರಭುತ್ವದ ವಾಸ್ತವಿಕ ಮಟ್ಟವನ್ನು ಅಳೆಯಲು ಜನಸಂಖ್ಯೆ ಆಧಾರಿತ ಪ್ರಮಾಣಗಳನ್ನು ಬಳಸುತ್ತದೆ. ಅದೇ ರೀತಿ ಜಾಗತಿಕ ಪ್ರಜಾಪ್ರಭುತ್ವದ ಸ್ಥಿತಿಗತಿಯನ್ನು ಅಳತೆ ಮಾಡುವಾಗ ಇದು ಭಾರತ ಅಥವಾ ಅಮೆರಿಕದಂತಹ ದೊಡ್ಡ ದೇಶಗಳ ಬೆಳವಣಿಗೆಗಳಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಸೇಶೆಲ್ಸ್ ಅಥವಾ ತೈಮೂರ್ ಲೆಸ್ಟೆಯಂತಹ ಸಣ್ಣ ದೇಶಗಳ ಬೆಳವಣಿಗೆಗಳಿಗೂ ನೀಡಲು ರಾಷ್ಟ್ರೀಯ ಸರಾಸರಿಯನ್ನು ಬಳಸಿಕೊಳ್ಳುತ್ತದೆ.

ಈ ಸಂಶೋಧನಾ ಸಂಸ್ಥೆಯು ಭಾರತವನ್ನು ''ಚುನಾವಣಾ ಸರ್ವಾಧಿಕಾರ'' ವರ್ಗದ ಅಡಿಯಲ್ಲಿ ವಿಂಗಡಿಸಿದೆ.

ದಕ್ಷಿಣ ಮತ್ತು ಮಧ್ಯ ಏಷ್ಯಾದ್ಯಂತದ ಶೇ. 2ರಷ್ಟು ಜನರು ಮಾತ್ರ ಚುನಾವಣಾ ಪ್ರಜಾಪ್ರಭುತ್ವವನ್ನು ಅನುಭವಿಸುತ್ತಿದ್ದು, ಈ ಜನರು ನೇಪಾಳ ಮತ್ತು ಶ್ರೀಲಂಕಾದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಅದೇ ರೀತಿ ಅತ್ಯಲ್ಪ ಜನರು ಭೂತಾನ್, ಮಂಗೋಲಿಯಾ ಮತ್ತು ಮಾಲ್ಡೀವ್ಸ್ ಎಂಬ ಮೂರು 'ಬೂದು ವಲಯ' ಪ್ರಜಾಪ್ರಭುತ್ವಗಳಲ್ಲಿ ವಾಸಿಸುತ್ತಿದ್ದಾರೆ. ಈ ವರದಿ ಭಾರತವನ್ನು ಕಝಕಿಸ್ತಾನ್ ಮತ್ತು ಪಾಕಿಸ್ತಾನದೊಂದಿಗೆ 'ಚುನಾವಣಾ ಸರ್ವಾಧಿಕಾರಗಳು' ಎಂದು ಗುಂಪು ಮಾಡಿದ್ದರೆ, ಅಪಘಾನಿಸ್ಥಾನ ಮತ್ತು ತುರ್ಕಮೆನಿಸ್ಥಾನ್ ದೇಶಗಳನ್ನು ''ಮುಚ್ಚಿದ ಸರ್ವಾಧಿಕಾರಗಳು'' ಎಂದು ವರ್ಗೀಕರಿಸಿದೆ.

ಭಾರತಕ್ಕೆ ಸಂಬಂಧಿಸಿ 2009ರಿಂದ ದೇಶ ಕ್ರಮೇಣ ಸರ್ವಾಧಿಕಾರದತ್ತ ಸಾಗುತ್ತಿದೆ ಎಂದು ವಿ-ಡೆಮ್ ಪ್ರತಿಪಾದಿಸಿದ್ದು, ''ಪ್ರಜಾಪ್ರಭುತ್ವ ಸಂಸ್ಥೆಗಳ ವ್ಯವಸ್ಥಿತ ನಿರ್ಮೂಲನೆ'' ನಡೆದಿದೆ ಎಂದು ಹೇಳಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಕುಸಿತ, ಮಾಧ್ಯಮಗಳ ಸ್ವಾತಂತ್ರ್ಯದ ಇಳಿಕೆ, ಸರಕಾರದ ವಿರುದ್ಧ ಧ್ವನಿ ಎತ್ತುವ ಪತ್ರಕರ್ತರಿಗೆ ಕಿರುಕುಳ ಮತ್ತು ನಾಗರಿಕ ಸಮಾಜ ಮತ್ತು ರಾಜಕೀಯ ಎದುರಾಳಿಗಳ ಮೇಲಿನ ಒತ್ತಡವೇ ಈ ಕಡಿಮೆ ಅಂಕಗಳಿಗೆ ಮುಖ್ಯ ಕಾರಣ ಎಂದು ಸಂಸ್ಥೆ ಉಲ್ಲೇಖಿಸಿದೆ.

ವಿ-ಡೆಮ್ ಸಂಸ್ಥೆಯನ್ನು ಸಹ ಪ್ರಾದ್ಯಾಪಕ ಸ್ಟೀವನ್ ವಿಲ್ಸನ್ ಮುನ್ನಡೆಸುತ್ತಿದ್ದು, ಇದು ಸ್ವೀಡನ್‌ನ ಗೋಥೆನ್‌ಬರ್ಗ್ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries