HEALTH TIPS

'ಸುರಕ್ಷಿತ ಕೃತಕ ಬುದ್ಧಿಮತ್ತೆ' ಕೋರಿದ್ದಕ್ಕೆ ಮೊಕದ್ದಮೆ: ಗೂಗಲ್, xAI, ಆಂಥ್ರೋಪಿಕ್ ಮತ್ತು OpenAI ವಿರುದ್ಧ ದಾವೆ ಯಾಕೆ?

ಪ್ರತಿಸ್ಪರ್ಧಿ ಅಮೆರಿಕದ ಕೃತಕ ಬುದ್ಧಿಮತ್ತೆ ಸಂಸ್ಥೆಗಳು ತಂತ್ರಜ್ಞಾನದ ಅಭಿವೃದ್ಧಿಯನ್ನು ನಿಧಾನಗೊಳಿಸುವಂತೆ ಒಟ್ಟಾಗಿ ಮನವಿ ಮಾಡಿದ ಬೆನ್ನಲ್ಲೇ, ಅವುಗಳು ಆಯಂಟಿಟ್ರಸ್ಟ್ ಕಾನೂನುಗಳನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಿ ದಾವೆ ಹೂಡಲಾಗಿದೆ. 


ಈ ನಾಲ್ಕು ಂI ಕಂಪೆನಿಗಳ ಮೇಲೆ ಏನು ಆರೋಪ ಮಾಡಲಾಗಿದೆ? 

ಶುಕ್ರವಾರ (ಸೆಪ್ಟೆಂಬರ್ 18) ನಾರ್ಥರ್ನ್ ಡಿಸ್ಟ್ರಿಕ್ಟ್ ಆಫ್ ಕ್ಯಾಲಿಫೋರ್ನಿಯಾದ ಜಿಲ್ಲಾ ನ್ಯಾಯಾಲಯದಲ್ಲಿ ಈ ಮೊಕದ್ದಮೆ ಹೂಡಲಾಗಿದೆ. ಚಾಟ್ಜಿಪಿಟಿ, ಕ್ಲಾಡ್, ಗ್ರೋಕ್ ಅಥವಾ ಜೆಮಿನೈ ಸೇವೆಗಳಿಗಾಗಿ ಹಣ ಪಾವತಿಸುವ ನಾಲ್ವರು ವ್ಯಕ್ತಿಗಳು, ಇದೇ ರೀತಿಯ ಚಂದಾದಾರರ ಪರವಾಗಿ ಈ ದಾವೆಯನ್ನು ಹೂಡಿದ್ದಾರೆ. ತಂತ್ರಜ್ಞಾನದ ಅಭಿವೃದ್ಧಿಯನ್ನು ನಿಧಾನಗೊಳಿಸಲು ಈ ಕಂಪೆನಿಗಳು ಮಾಡಿಕೊಂಡಿರುವ ಒಪ್ಪಂದವು ಆಯಂಟಿಟ್ರಸ್ಟ್ ಕಾನೂನುಗಳನ್ನು ಉಲ್ಲಂಘಿಸುತ್ತದೆ ಮತ್ತು AI ಚಂದಾದಾರಿಕೆಗಳಿಂದ ಗ್ರಾಹಕರಿಗೆ ಸಿಗಬೇಕಾದ ಮೌಲ್ಯವನ್ನು ಕಡಿಮೆ ಮಾಡಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ. ವ್ಯವಹಾರಗಳ ನಡುವೆ ಮುಕ್ತ ಸ್ಪರ್ಧೆಯನ್ನು ಉತ್ತೇಜಿಸಲು ಮತ್ತು ಮಾರುಕಟ್ಟೆಯಲ್ಲಿ ಕಂಪೆನಿಗಳ ಏಕಸ್ವಾಮ್ಯವನ್ನು ತಡೆಯಲು ಆಯಂಟಿಟ್ರಸ್ಟ್ ಕಾನೂನುಗಳು ಕಾರ್ಯನಿರ್ವಹಿಸುತ್ತವೆ.

ಈ ಮೊಕದ್ದಮೆಗೆ ತಕ್ಷಣದ ಕಾರಣವಾಗಿದ್ದು, ಸೆಪ್ಟೆಂಬರ್ 12ರಂದು ಆಂಥ್ರೋಪಿಕ್ CEO ಡಾರಿಯೊ ಅಮೊಡೆ ಅವರು ಪ್ರಕಟಿಸಿದ ಲೇಖನ. AI ತಂತ್ರಜ್ಞಾನದ ಸಾಮರ್ಥ್ಯಗಳ ಬೆಳವಣಿಗೆಯನ್ನು ನಿಧಾನಗೊಳಿಸಲು ಮತ್ತು ಸುರಕ್ಷತೆಗೆ ಹೆಚ್ಚಿನ ಸಮಯ ಮೀಸಲಿಡಲು ಮುಂಚೂಣಿಯಲ್ಲಿರುವ AI ಕಂಪೆನಿಗಳು ಪರಸ್ಪರ ಸಹಕರಿಸಬೇಕು ಎಂದು ಅವರು ವಾದಿಸಿದ್ದರು. ಕೆಲವು ನಿರ್ದಿಷ್ಟ ಸುರಕ್ಷತಾ ಚರ್ಚೆಗಳಿಗೆ ಸೀಮಿತವಾದ ಆಯಂಟಿಟ್ರಸ್ಟ್ ವಿನಾಯಿತಿ ನೀಡುವ ಮೂಲಕ ಅಮೆರಿಕ ಸರ್ಕಾರವು ಇಂತಹ ಸಹಕಾರಕ್ಕೆ ಅನುಕೂಲ ಕಲ್ಪಿಸಬಹುದು ಎಂದೂ ಅಮೊಡೆ ಸಲಹೆ ಮಾಡಿದ್ದರು. ಅದೇ ದಿನ, OpenAI CEO ಸ್ಯಾಮ್ ಆಲ್ಟ್ಮನ್, ಸ್ಪೇಸ್ ಎಕ್ಸ್AI CEO ಎಲಾನ್ ಮಸ್ಕ್ ಮತ್ತು ಗೂಗಲ್ ಡೀಪ್ಮೈಂಡ್ ಸಹ-ಸಂಸ್ಥಾಪಕ ಹಾಗೂ ಮುಖ್ಯಸ್ಥ ಡೆಮಿಸ್ ಹಸ್ಬಿಸ್ ಅವರು ಅಮೊಡೆ ಅವರ ಪ್ರಸ್ತಾವನೆಗಳನ್ನು ಬಹಿರಂಗವಾಗಿ ಬೆಂಬಲಿಸಿದರು.

ಹಲವಾರು ಪ್ರಮುಖ AI ಪ್ರಯೋಗಾಲಯಗಳ ಹಿರಿಯ ಉದ್ಯೋಗಿಗಳು ಜುಲೈ ತಿಂಗಳಲ್ಲಿ ಸಹಿ ಹಾಕಿದ್ದ ಹೇಳಿಕೆಯೊಂದನ್ನೂ ಅರ್ಜಿದಾರರು ಉಲ್ಲೇಖಿಸಿದ್ದಾರೆ. ತಾವಾಗಿಯೇ ಏಕಾಏಕಿ ಅಭಿವೃದ್ಧಿಯನ್ನು ನಿಧಾನಗೊಳಿಸಲು ಕಂಪೆನಿಗಳು ಎದುರಿಸುತ್ತಿರುವ ಸ್ಪರ್ಧಾತ್ಮಕ ಒತ್ತಡವನ್ನು ಆ ಹೇಳಿಕೆಯು ಒಪ್ಪಿಕೊಂಡಿತ್ತು ಮತ್ತು ಸ್ವಯಂಚಾಲಿತ AI ಅಭಿವೃದ್ಧಿಯನ್ನು ನಿಧಾನಗೊಳಿಸುವ ಜಾಗತಿಕ ಪ್ರಯತ್ನಕ್ಕೆ ಸರ್ಕಾರದ ಬೆಂಬಲವನ್ನು ಕೋರಿತ್ತು.

ಯಾವುದೇ AI ಕಂಪೆನಿಯು ತನ್ನ ಅಭಿವೃದ್ಧಿಯನ್ನು ನಿಧಾನಗೊಳಿಸಲು ಸ್ವತಃ ನಿರ್ಧರಿಸಬಹುದು ಎಂಬುದು ಅರ್ಜಿದಾರರ ವಾದವಲ್ಲ. ಬದಲಿಗೆ, ಪ್ರತಿಸ್ಪರ್ಧಿ ಕಂಪೆನಿಗಳು ಒಟ್ಟಾಗಿ ಸೇರಿ ತಮ್ಮ ಅಭಿವೃದ್ಧಿಯನ್ನು ನಿರ್ಬಂಧಿಸಲು ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.

ಸರಳವಾಗಿ ಹೇಳುವುದಾದರೆ, ನಾಲ್ಕು ಪ್ರತಿಸ್ಪರ್ಧಿ ಕಾರು ತಯಾರಕ ಕಂಪೆನಿಗಳು ತಮ್ಮ ಮುಂದಿನ ಪೀಳಿಗೆಯ ಕಾರುಗಳನ್ನು ತಯಾರಿಸುವ ಮೊದಲು ಸುರಕ್ಷತಾ ವೈಶಿಷ್ಟ್ಯವನ್ನು ಪರಿಚಯಿಸಬೇಕು ಎಂದು ಸ್ವತಂತ್ರವಾಗಿ ನಿರ್ಧರಿಸುವುದನ್ನು ಕಲ್ಪಿಸಿಕೊಳ್ಳಿ. ಮುಂದಿನ ಕೆಲವು ವರ್ಷಗಳವರೆಗೆ ತಮ್ಮಲ್ಲಿ ಯಾರೂ ವೇಗವಾದ ಕಾರುಗಳನ್ನು ತಯಾರಿಸುವುದಿಲ್ಲ ಎಂದು ಆ ನಾಲ್ಕು ಕಂಪೆನಿಗಳು ಪರಸ್ಪರ ಒಪ್ಪಂದ ಮಾಡಿಕೊಳ್ಳುವುದಕ್ಕಿಂತ ಇದು ಸಂಪೂರ್ಣ ಭಿನ್ನವಾಗಿದೆ. ಇಂತಹ ಒಪ್ಪಂದಗಳು ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ದುರ್ಬಲಗೊಳಿಸುತ್ತವೆ ಎಂದು ಮೊಕದ್ದಮೆಯಲ್ಲಿ ವಾದಿಸಲಾಗಿದೆ.

ಮುಖ್ಯ ಪ್ರತಿಸ್ಪರ್ಧಿಗಳು ಒಪ್ಪಿಕೊಂಡಂತೆ AI ಪ್ರಗತಿಯು ಸ್ಪರ್ಧೆಯ ಮೂಲಕ ಸಾಮಾನ್ಯಕ್ಕಿಂತ ನಿಧಾನವಾಗಿದ್ದರೆ, ಗ್ರಾಹಕರು ಅದೇ ಚಂದಾದಾರಿಕೆ ಬೆಲೆಗೆ ಕಡಿಮೆ ಮೌಲ್ಯದ ಉತ್ಪನ್ನಗಳನ್ನು ಅಥವಾ ಕಡಿಮೆ ಸುಧಾರಣೆಗಳನ್ನು ಪಡೆಯಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ.

►ಇದು ಆಯಂಟಿಟ್ರಸ್ಟ್ ಸಮಸ್ಯೆ ಯಾಕೆ?

ಸ್ಪರ್ಧಿಗಳು ಸ್ವತಂತ್ರವಾಗಿ ಸ್ಪರ್ಧಿಸುವ ಬದಲು ಪರಸ್ಪರ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯು ಆಯಂಟಿಟ್ರಸ್ಟ್ ಕಾನೂನುಗಳು ಪರಿಹರಿಸುವ ಮೂಲಭೂತ ಕಾಳಜಿಗಳಲ್ಲಿ ಒಂದಾಗಿದೆ.

ಸುರಕ್ಷತೆಯ ವಿಚಾರದಲ್ಲಿ, "ವೈಯಕ್ತಿಕ ಹೊಣೆಗಾರಿಕೆಯ ಬದಲಿಗೆ ಸಾಮೂಹಿಕ ನಿಯಂತ್ರಣವನ್ನು ಅಳವಡಿಸಿಕೊಳ್ಳುವ" ಒಪ್ಪಂದ ಮಾಡಿಕೊಳ್ಳುವ ಶಾರ್ಟ್ ಕಟ್ ಅನ್ನು ಕಂಪೆನಿಗಳು ಅನುಸರಿಸುವುದನ್ನು ಆಯಂಟಿಟ್ರಸ್ಟ್ ಕಾನೂನುಗಳು ನಿಷೇಧಿಸುತ್ತವೆ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ. ಅಲ್ಲದೆ, ಸ್ಪರ್ಧಾತ್ಮಕ ಮಾರುಕಟ್ಟೆಯು ಯಾವುದೇ ರೀತಿಯಲ್ಲಿ ಜವಾಬ್ದಾರಿ ಮತ್ತು ನೈಜ ಪ್ರಗತಿಗೆ ಅವಕಾಶ ನೀಡುತ್ತದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

"AI ಸುರಕ್ಷತೆ ಮತ್ತು ಪ್ರೋಟೋ ಕಾಲ್ ಗಳನ್ನು ವಿಶ್ವದ ಅತ್ಯಂತ ಶಕ್ತಿಶಾಲಿ 'ಲಾಭದಾಯಕ' ತಂತ್ರಜ್ಞಾನ ಕಂಪೆನಿಗಳ ನಡುವಿನ ಖಾಸಗಿ ಸ್ವಾರ್ಥಿ ಒಪ್ಪಂದಗಳ ಮೂಲಕ ನಿಯಂತ್ರಿಸಲು ಬಿಟ್ಟರೆ, AI ಬೇಗನೆ ಮಾನವನ ನಿಯಂತ್ರಣದಿಂದ ತಪ್ಪಿಸಿಕೊಳ್ಳುತ್ತದೆ ಮತ್ತು ನಮ್ಮೆಲ್ಲರನ್ನೂ ನಾಶಪಡಿಸಬಹುದು" ಎಂದು ಅರ್ಜಿದಾರರ ಪರ ಮುಖ್ಯ ವಕೀಲ ನಿಕ್ ರೌಲಿ ಹೇಳಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ಉಲ್ಲೇಖಿಸಿದೆ.

ಈ ಮೂಲಕ, ಈ ಮೊಕದ್ದಮೆಯು ಸುರಕ್ಷತಾ ನಿಯಂತ್ರಣ ಮತ್ತು ಸಾಮೂಹಿಕ ನಿರ್ಬಂಧದ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತದೆ. ಕಂಪೆನಿಗಳು ತಮ್ಮ ನಡುವೆ ಸ್ಪರ್ಧೆಯನ್ನು ನಿಯಂತ್ರಿಸಬಲ್ಲ ಒಪ್ಪಂದಕ್ಕೆ ಬರುವುದನ್ನು ಅರ್ಜಿದಾರರು ವಿರೋಧಿಸುತ್ತಿದ್ದಾರೆ.

ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ (ಚೀನಾದ ಕಂಪೆನಿಗಳನ್ನು ಹೊರತುಪಡಿಸಿ) ಈ ನಾಲ್ಕು AI ಕಂಪೆನಿಗಳು ಜಾಗತಿಕ ಮಾರುಕಟ್ಟೆಯ ನಾಯಕರಾಗಿರುವುದರಿಂದ ಇದು ಅತ್ಯಂತ ಮಹತ್ವದ್ದಾಗಿದೆ. ನಿಯಂತ್ರಣ ಮತ್ತು ತಂತ್ರಜ್ಞಾನದ ಅಭಿವೃದ್ಧಿಯನ್ನು ನಿಧಾನಗೊಳಿಸುವ ಸಾಮೂಹಿಕ ಕರೆಗಳು, ಬೇರೆ ಯಾರೂ ತಮ್ಮನ್ನು ಮೀರಿ ಬೆಳೆಯದಂತೆ ತಡೆಯಲು ಮತ್ತು ತಮ್ಮ ಮೇಲೆಯೇ ಎಲ್ಲರೂ ಅವಲಂಬಿತರಾಗಿರುವಂತೆ ಮಾಡಲು ಈ ದೈತ್ಯ ಕಂಪೆನಿಗಳು ಹೂಡಿರುವ ತಂತ್ರ ಎಂದು ಇತರ AI ಕಂಪೆನಿಗಳು ವಾದಿಸಿವೆ.

ಉದಾಹರಣೆಗೆ, ಯುರೋಪಿನ ಪ್ರಮುಖ AI ಕಂಪೆನಿಗಳಲ್ಲಿ ಒಂದಾದ ಫ್ರೆಂಚ್ ಸ್ಟಾರ್ಟ್‌ಅಪ್ 'ಮಿಸ್ಟ್ರಾಲ್' ತನ್ನ ಹೇಳಿಕೆಯಲ್ಲಿ, "ಕೆಲವು ಮುಂಚೂಣಿ ಕಂಪೆನಿಗಳು ತಮ್ಮ ಮಾರುಕಟ್ಟೆ ಸ್ಥಾನವನ್ನು ಗಟ್ಟಿಗೊಳಿಸಲು ಈ ಸಂದರ್ಭವನ್ನು ಬಳಸಿಕೊಳ್ಳುತ್ತಿವೆ ಮತ್ತು ಸ್ಪರ್ಧಿಗಳಿಗಿಂತ ತಮಗೆ ಹೆಚ್ಚಿನ ಅನುಕೂಲವಾಗುವಂತಹ ನಿಯಂತ್ರಣಗಳಿಗಾಗಿ ಒತ್ತಾಯಿಸುತ್ತಿವೆ" ಎಂದು ತಿಳಿಸಿದೆ.

ಸ್ವಿಸ್ ಗೌಪ್ಯತಾ ಸಾಫ್ಟ್ವೇರ್ ಕಂಪೆನಿ 'ಪ್ರೋಟಾನ್'ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಫೆಲ್ ಔಫಾನ್ ಮಾತನಾಡಿ, "ಇದು ಸಂಪೂರ್ಣವಾಗಿ ಸ್ವಾರ್ಥಪರ ಎಂದು ನಾನು ಭಾವಿಸುತ್ತೇನೆ. ಅವರು ತಮ್ಮ ಸೇವೆಯ ಮೇಲಿನ ಅವಲಂಬನೆಯನ್ನು ಹಾಗೆಯೇ ಉಳಿಸಿಕೊಳ್ಳಲು ಬಯಸುತ್ತಾರೆ" ಎಂದು ಹೇಳಿರುವುದಾಗಿ ರಾಯಿಟರ್ಸ್ ವರದಿ ಉಲ್ಲೇಖಿಸಿದೆ.

►ಹಾಗಾದರೆ ಇಲ್ಲಿ ಮುಖ್ಯ ನಿಯಂತ್ರಕರ ನಿಲುವೇನು?

ಈ ನಾಲ್ಕು AI ಕಂಪೆನಿಗಳು ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಕೋರಿವೆಯಾದರೂ, AI ಅಭಿವೃದ್ಧಿಯನ್ನು ನಿಧಾನಗೊಳಿಸುವ ಕರೆಯ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಿನ್ನವಾದ ನಿಲುವನ್ನು ಹೊಂದಿದ್ದಾರೆ.

ಅಮೆರಿಕದ AI ಉದ್ಯಮಕ್ಕೆ ಹಿನ್ನಡೆಯುಂಟುಮಾಡುವಂತಹ ಹೆಚ್ಚಿನ ನಿಯಂತ್ರಣಗಳ ವಿರುದ್ಧ ಟ್ರಂಪ್ ಪದೇ ಪದೇ ವಾದಿಸಿದ್ದಾರೆ. ಸೆಪ್ಟೆಂಬರ್ 19ರಂದು, ಯಾವುದೇ ಹೆಚ್ಚಿನ ವಿವರಗಳನ್ನು ನೀಡದೆ, "AI czar" (AI ಉಸ್ತುವಾರಿ ನೋಡಿಕೊಳ್ಳುವ ಉನ್ನತ ಅಧಿಕಾರಿ) ನೇಮಿಸುವುದಾಗಿ ಮತ್ತು AI force ರಚಿಸುವುದಾಗಿ ಅವರು ಘೋಷಿಸಿದರು.

ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದರಲ್ಲಿ ಟ್ರಂಪ್, ಅಮೆರಿಕವು AI ಉದ್ಯಮದ ಬೆಳವಣಿಗೆಯನ್ನು "ತಡೆಯುವುದಿಲ್ಲ ಅಥವಾ ಕುಂಠಿತಗೊಳಿಸುವುದಿಲ್ಲ" ಎಂದು ಹೇಳಿದ್ದಾರೆ. ಬದಲಿಗೆ, ತಪ್ಪುಗಳನ್ನು ಎದುರಿಸಲು ಅಸ್ತಿತ್ವದಲ್ಲಿರುವ ಅಪರಾಧ ಮತ್ತು ನಾಗರಿಕ ನ್ಯಾಯ ವ್ಯವಸ್ಥೆಯ ಮೇಲೆ ಭರವಸೆ ಇಟ್ಟುಕೊಂಡು, ತಮ್ಮ ಆಡಳಿತವು AI ಉದ್ಯಮವನ್ನು "ಪೋಷಿಸುತ್ತದೆ, ಸಹಾಯ ಮಾಡುತ್ತದೆ ಮತ್ತು ಕಾಳಜಿ ವಹಿಸುತ್ತದೆ" ಎಂದು ಅವರು ತಿಳಿಸಿದ್ದಾರೆ.

AI ಕ್ಷೇತ್ರದಲ್ಲಿ ಚೀನಾಗಿಂತ ಅಮೆರಿಕವು ತನ್ನ ಮುಂಚೂಣಿಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದೂ ಟ್ರಂಪ್ ವಾದಿಸಿದ್ದಾರೆ. ಚೀನಾದ ಪ್ರತಿಸ್ಪರ್ಧಿಗಳೊಂದಿಗೆ ಅಮೆರಿಕದ AI ಕಂಪೆನಿಗಳು ಸ್ಪರ್ಧಿಸುವುದರ ಮಹತ್ವವನ್ನು ಅವರ ಆಡಳಿತವು ಒತ್ತಿಹೇಳಿದೆ. ಜತೆಗೆ, ಹೆಚ್ಚಿನ AI ನಿಯಂತ್ರಣಗಳಿಗಾಗಿ ಬಂದಿರುವ ಕರೆಗಳನ್ನು ಟ್ರಂಪ್ ತಳ್ಳಿಹಾಕಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries