HEALTH TIPS

ಸಕ್ಕರೆ ದಾಸ್ತಾನಿಗೆ 1,000 ಕ್ವಿಂಟಲ್ ಮಿತಿ: ಈ ನಿಯಮ ಅ.15ರಿಂದ ನ.30ರವರೆಗೆ ಜಾರಿ

ನವದೆಹಲಿ: ವರ್ತಕರು 1,000 ಕ್ವಿಂಟಲ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ದಾಸ್ತಾನು ಇರಿಸಿಕೊಳ್ಳುವಂತೆ ಇಲ್ಲ ಎಂದು ಕೇಂದ್ರ ಸರ್ಕಾರವು ಗುರುವಾರ ಹೇಳಿದೆ. ಈ ನಿಯಮವು ಅಕ್ಟೋಬರ್ 15ರಿಂದ ನವೆಂಬರ್ 30ರವರೆಗೆ ಜಾರಿಯಲ್ಲಿ ಇರಲಿದೆ.


ದೀಪಾವಳಿ, ನವರಾತ್ರಿಯಂತಹ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಸಕ್ಕರೆಯ ಲಭ್ಯತೆಯು ಅಗತ್ಯ ಪ್ರಮಾಣದಲ್ಲಿ ಇರಬೇಕು, ಅದರ ಬೆಲೆಯು ದುಬಾರಿ ಆಗಬಾರದು ಎಂಬ ಉದ್ದೇಶದಿಂದ ಅದು ಈ ಕ್ರಮ ಕೈಗೊಂಡಿದೆ.

ವರ್ತಕರು 15 ದಿನಗಳ ಅವಧಿಗೆ ಮಾತ್ರ ದಾಸ್ತಾನು ಇರಿಸಿಕೊಳ್ಳಬಹುದು. ದಾಸ್ತಾನು ಮಿತಿ ನಿಯಮವು ಅಸ್ಸಾಂ ರಾಜ್ಯ ಹಾಗೂ ಕೋಲ್ಕತ್ತಕ್ಕೆ ಅನ್ವಯ ಆಗುವುದಿಲ್ಲ ಎಂದು ಕೇಂದ್ರ ಆಹಾರ ಸಚಿವಾಲಯವು ಹೇಳಿದೆ.

ಹೊಸ ಸಕ್ಕರೆ ಹಂಗಾಮು ಅಕ್ಟೋಬರ್ 1ರಿಂದ ಆರಂಭವಾಗಿದೆ. ಅಸ್ಸಾಂ ರಾಜ್ಯ ಹಾಗೂ ಕೋಲ್ಕತ್ತಕ್ಕೆ ದಾಸ್ತಾನು ಮಿತಿಯನ್ನು 2,000 ಕ್ವಿಂಟಲ್‌ಗೆ ನಿಗದಿ ಮಾಡಲಾಗಿದೆ.

'ಸಕ್ಕರೆ ವಿತರಣಾ ವ್ಯವಸ್ಥೆಯಲ್ಲಿ ಅನಗತ್ಯವಾಗಿ ದಾಸ್ತಾನು ಇರಬಾರದು, ಸಕ್ಕರೆ ಕಾರ್ಖಾನೆಗಳಿಂದ ವರ್ತಕರ ಮೂಲಕ ಗ್ರಾಹಕರ ಕೈಗೆ ಸಕ್ಕರೆಯು ಸುಗಮವಾಗಿ ಸೇರುವಂತೆ ಆಗಬೇಕು ಎಂಬುದು ಇದರ ಉದ್ದೇಶ' ಎಂದು ಸಚಿವಾಲಯವು ಹೇಳಿದೆ.

ವರ್ತಕರು ಸಕ್ಕರೆಯನ್ನು 4,000 ಕ್ವಿಂಟಲ್‌ವರೆಗೆ ಮಾತ್ರ ದಾಸ್ತಾನು ಇರಿಸಿಕೊಳ್ಳಬಹುದು ಎಂದು ಕೇಂದ್ರವು ಆಗಸ್ಟ್‌ನಲ್ಲಿ ನಿಯಮ ರೂಪಿಸಿತ್ತು. ನಂತರ ಸೆಪ್ಟೆಂಬರ್‌ 15ರಿಂದ ಅನ್ವಯವಾಗುವಂತೆ ಮಿತಿಯನ್ನು 2,000 ಕ್ವಿಂಟಲ್‌ಗೆ ತಗ್ಗಿಸಲಾಗಿತ್ತು.

ಸಚಿವಾಲಯ ನೀಡಿರುವ ಮಾಹಿತಿ ಅನ್ವಯ ಸಕ್ಕರೆಯ ಸರಾಸರಿ ರಿಟೇಲ್‌ ಬೆಲೆಯು ಆಗಸ್ಟ್‌ನ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಶೇ 15ರಷ್ಟು ಕಡಿಮೆ ಆಗಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ ಎಂದು ಅದು ಹೇಳಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries