HEALTH TIPS

ಫ್ರಾನ್ಸ್‌ ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; 1,200ಕ್ಕೂ ಹೆಚ್ಚು ಮಂದಿ ಬಂಧನ

ಪ್ಯಾರಿಸ್: ಹೆಚ್ಚುತ್ತಿರುವ ಜೀವನ ವೆಚ್ಚ, ಹದಗೆಡುತ್ತಿರುವ ಸಾರ್ವಜನಿಕ ಸೇವೆಗಳು ಹಾಗೂ ಪೊಲೀಸರ ಅತಿಯಾದ ಬಲಪ್ರಯೋಗವನ್ನು ವಿರೋಧಿಸಿ ಫ್ರಾನ್ಸ್‌ ನಾದ್ಯಂತ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿವೆ. ಕಾರುಗಳಿಗೆ ಬೆಂಕಿ ಹಚ್ಚಿ, ಅಂಗಡಿಗಳನ್ನು ಲೂಟಿ ಮಾಡಲಾಗಿದ್ದು, ಸಾರ್ವಜನಿಕ ಕಟ್ಟಡಗಳ ಮೇಲೂ ದಾಳಿ ನಡೆದಿದೆ. 


ಹಿಂಸಾಚಾರಕ್ಕೆ ಸಂಬಂಧಿಸಿದಂತೆ 1,200ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಹಿಂಸಾಚಾರದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಪ್ಯಾರಿಸ್ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ. ಹಲವು ಅಂಗಡಿಗಳು ಹಾಗೂ ಸಾರ್ವಜನಿಕ ಕಟ್ಟಡಗಳಿಗೆ ಹಾನಿಯಾಗಿದೆ. ಲಿಮೋಜ್‌ ನಲ್ಲಿರುವ ಪುರಸಭೆ ಕಚೇರಿಗೆ ಬೆಂಕಿ ತಗುಲಿ, ಕಟ್ಟಡದ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ.

ಶಾಲೆಗಳಲ್ಲಿನ ಪರಿಸ್ಥಿತಿ ಹಾಗೂ ಪೊಲೀಸರ ಅತಿಯಾದ ಬಲಪ್ರಯೋಗವನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಗೂ ಬೆಂಬಲ ವ್ಯಕ್ತವಾಗಿದೆ. ಮುಖವಾಡ ಧರಿಸಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದ್ದಾರೆ.

ಫ್ರಾನ್ಸ್‌ ನ ಆಂತರಿಕ ಸಚಿವ ಲಾರೆಂಟ್ ನುನೆಜ್ ಅವರ ಪ್ರಕಾರ, ಹಿಂಸಾಚಾರದಲ್ಲಿ 60 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರು ಪ್ರಜ್ಞೆ ಕಳೆದುಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

►ಹಿಂಸಾಚಾರಕ್ಕೆ ಮ್ಯಾಕ್ರಾನ್ ಖಂಡನೆ :

ರವಿವಾರ 'X' ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಮ್ಯಾಕ್ರಾನ್, ಹಿಂಸಾಚಾರವನ್ನು ಖಂಡಿಸಿ ಭದ್ರತಾ ಪಡೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಕಚೇರಿಗಳು, ವ್ಯಾಪಾರ ಸಂಸ್ಥೆಗಳು ಮತ್ತು ಪುರಸಭೆ ಕಟ್ಟಡಗಳ ಮೇಲೆ ದಾಳಿ ನಡೆಸಿದವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

'ನಮ್ಮ ಗಣರಾಜ್ಯದಲ್ಲಿ ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ' ಎಂದು ಹೇಳಿರುವ ಅವರು, ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ರಕ್ಷಿಸುವಲ್ಲಿ ಭದ್ರತಾ ಸಿಬ್ಬಂದಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದಿದ್ದಾರೆ. ಸರ್ಕಾರಿ ಸಂಸ್ಥೆಗಳನ್ನು ದುರ್ಬಲಗೊಳಿಸಲು ಕೆಲವು ಗುಂಪುಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಕೂಡ ಹಿಂಸಾಚಾರವನ್ನು ಖಂಡಿಸಿದ್ದಾರೆ. ಅತಿ ಎಡಪಂಥೀಯ ಗುಂಪುಗಳು ಮತ್ತು ಅವಕಾಶವಾದಿ ಗಲಭೆಕೋರರು ಹಲವು ನಗರಗಳಲ್ಲಿ ಲೂಟಿ ಹಾಗೂ ಧ್ವಂಸ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿದವರೇ ಅದರ ದುರಸ್ತಿ ವೆಚ್ಚವನ್ನು ಭರಿಸಬೇಕು ಎಂಬ ಉದ್ದೇಶದ ಮಸೂದೆಗೂ ಲೆಕೋರ್ನು ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಹಣವನ್ನು ಸೇವೆಗಳಿಗೆ ಬಳಸಬೇಕೇ ಹೊರತು, ವಿಧ್ವಂಸಕರು ನಾಶಪಡಿಸಿದ ಆಸ್ತಿಯ ದುರಸ್ತಿಗೆ ನಿರಂತರವಾಗಿ ವ್ಯಯಿಸಬಾರದು ಎಂದು ಹೇಳಿದ್ದಾರೆ.

►ಹಲವು ನಗರಗಳಿಗೆ ಹಬ್ಬಿದ ಘರ್ಷಣೆ :

'ಫ್ರಾನ್ಸ್ 24' ವರದಿಯ ಪ್ರಕಾರ, ದೇಶಾದ್ಯಂತ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಹಲವು ನಗರಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸಿಜಿಟಿ ಕಾರ್ಮಿಕ ಸಂಘಟನೆಯ ಅಂದಾಜಿನ ಪ್ರಕಾರ, ಸುಮಾರು 5.5 ಲಕ್ಷ ಮಂದಿ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಅಧಿಕಾರಿಗಳು ತಮ್ಮದೇ ಆದ ಅಂದಾಜನ್ನು ತಕ್ಷಣ ಬಿಡುಗಡೆ ಮಾಡಿಲ್ಲ.

ಪ್ಯಾರಿಸ್‌ ನಲ್ಲಿ ಪಟಾಕಿ ಮತ್ತು ಇತರ ಸ್ಫೋಟಕಗಳನ್ನು ಎಸೆಯುತ್ತಿದ್ದ ಗುಂಪುಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿಗಳನ್ನು ಬಳಸಿದ್ದಾರೆ. ಬಾರ್‌ ವೊಂದಕ್ಕೆ ಮತ್ತು ನಿಲುಗಡೆ ಮಾಡಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಲಿಲ್ಲೆಯಲ್ಲಿರುವ ಆಪಲ್ ಮಳಿಗೆಯೂ ದಾಳಿಗೆ ಗುರಿಯಾಗಿದೆ. ಲಿಯಾನ್‌ ನ ಪ್ರವಾಸಿ ಮಾಹಿತಿ ಕಚೇರಿಗೆ ಬೆಂಕಿ ಹಚ್ಚಲಾಗಿದ್ದು, ಮಾರ್ಸಿಲ್ಲೆ ಮತ್ತು ಲಿಲ್ಲೆಯ ಪುರಸಭೆ ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ.

ಸೇಂಟ್‌-ಎಟಿಯೆನ್ನೆಯಲ್ಲಿ ಪೊಲೀಸರು ಬಳಸಿದ ಜನಸಂದಣಿ ನಿಯಂತ್ರಣ ಗ್ರೆನೇಡ್ ಸ್ಫೋಟಗೊಂಡ ಪರಿಣಾಮ ಪ್ರತಿಭಟನಾಕಾರನೊಬ್ಬನ ಕೈ ತುಂಡಾಗಿದೆ ಎಂದು AFP ಉಲ್ಲೇಖಿಸಿದ ಪೊಲೀಸ್ ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ಲೆನ್ಸ್‌ ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ 15 ವರ್ಷದ ಬಾಲಕನೊಬ್ಬ ಇದೇ ರೀತಿಯ ಗಾಯಕ್ಕೆ ಒಳಗಾಗಿದ್ದ.

►ವೇತನ ಹೆಚ್ಚಳಕ್ಕೆ ಆಗ್ರಹ :

ಹಿಂಸಾಚಾರದ ನಡುವೆಯೂ ಹಲವು ಪ್ರತಿಭಟನಾಕಾರರು ಹೆಚ್ಚಿನ ವೇತನ, ಅಗತ್ಯ ವಸ್ತುಗಳ ಬೆಲೆ ಇಳಿಕೆ ಮತ್ತು ಉತ್ತಮ ಸಾರ್ವಜನಿಕ ಸೇವೆಗಳಿಗೆ ಆಗ್ರಹಿಸಿ ಶಾಂತಿಯುತವಾಗಿ ಮೆರವಣಿಗೆ ನಡೆಸಿದ್ದಾರೆ. ತಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಅಸಮಾಧಾನವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

ಮುಂದಿನ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಫ್ರಾನ್ಸ್‌ ನಲ್ಲಿ ರಾಜಕೀಯ ಅನಿಶ್ಚಿತತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಪ್ರತಿಭಟನೆಗಳು ತೀವ್ರಗೊಂಡಿವೆ. ಆರ್ಥಿಕ ಒತ್ತಡ ಮತ್ತು ಸಾರ್ವಜನಿಕರ ಕುಂದುಕೊರತೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.


BREAKING: Historic 143-year-old Limoges town hall in France collapsed after protesters set it on fire.



Aucune place pour la violence dans notre République. Ceux qui ont cassé, attaqué les préfectures comme les commerces, pillé jusqu’à nos mairies, seront poursuivis et punis. Aux forces de l’ordre, garantes du droit à manifester, je dis le soutien de la Nation. Nous ferons tous Show more
66.1K
Reply
Copy link



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries