ನವದೆಹಲಿ: ರೈಲ್ವೆ ನೌಕರರ ಅಮೋಘ ಕಾರ್ಯಕ್ಷಮತೆಯನ್ನು ಗುರುತಿಸಿ, ಅವರಿಗೆ 78 ದಿನಗಳ ಉತ್ಪಾದಕತೆ ಆಧಾರಿತ ಬೋನಸ್ (ಪಿಎಲ್ಬಿ) ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸರಕಾರ ಬುಧವಾರ ತಿಳಿಸಿದೆ. ಇದರ ಪ್ರಕಾರ, 11,40,770 ರೈಲ್ವೆ ಉದ್ಯೋಗಿಗಳು ರೂ.2009.61 ಕೋಟಿ ಮೊತ್ತದ ಬೋನಸ್ ಪಡೆಯಲಿದ್ದಾರೆ.
ಪ್ರತಿ ವರ್ಷ ದುರ್ಗಾಪೂಜೆ/ದಸರಾ ರಜೆಯ ಮುನ್ನ ಅರ್ಹ ರೈಲ್ವೆ ನೌಕರರಿಗೆ ಈ ಉತ್ಪಾದಕತೆ ಆಧಾರಿತ ಬೋನಸ್ ಪಾವತಿಸಲಾಗುತ್ತದೆ.
''ಈ ವರ್ಷವೂ ಸುಮಾರು 11.40 ಲಕ್ಷ ಗಜೆಟೆಡ್ ಅಲ್ಲದ ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮಾನವಾದ ಬೋನಸ್ ನೀಡಲಾಗುತ್ತಿದೆ. ರೈಲ್ವೆಯ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸಲು ಈ ಬೋನಸ್ ನೌಕರರಿಗೆ ಪೋತ್ಸಾಹ ನೀಡುತ್ತದೆ ಎಂದು ಸರಕಾರ ತಿಳಿಸಿದೆ.



