HEALTH TIPS

ಹೊಸ ರಾಜಕೀಯ ಪಕ್ಷ ಘೋಷಿಸಿದ ದಿವ್ಯಾ ಮಿತ್ತಲ್: 2027ರ ಯುಪಿ ಚುನಾವಣೆಗೆ ಎಂಟ್ರಿ

ಲಖನೌ: ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ಅವರು 'ಜನ ನೀತಿ ಭಾರತ್' (Jan Neeti Bharat) ಎಂಬ ಹೊಸ ರಾಜಕೀಯ ಪಕ್ಷವನ್ನು ಗುರುವಾರ ಘೋಷಿಸಿದ್ದು, 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.


ಸಾಮಾಜಿಕ ಜಾಲತಾಣ 'ಎಕ್ಸ್‌' ನಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿರುವ ದಿವ್ಯಾ ಅವರು, 'ನೀತಿ ನಿರೂಪಣೆಯಲ್ಲಿ ಸಾರ್ವಜನಿಕರನ್ನು ಕೇಂದ್ರಬಿಂದುವಾಗಿಸುವುದು ಮತ್ತು ಐದು ವರ್ಷಗಳ ಆಡಳಿತಾವಧಿಯಲ್ಲಿ ಸರ್ಕಾರವು ಜನರಿಗೆ ಉತ್ತರದಾಯಿಯಾಗಿರುವಂತೆ ನೋಡಿಕೊಳ್ಳುವುದು ತಮ್ಮ ಪಕ್ಷದ ಮುಖ್ಯ ಉದ್ದೇಶ' ಎಂದು ತಿಳಿಸಿದ್ದಾರೆ.

ರಾಜಕೀಯವು ನಿಮ್ಮ ಮೇಲೆ ಆಳ್ವಿಕೆ ನಡೆಸುತ್ತದೆ. ಆದರೆ 'ಜನ ನೀತಿ'ಯ ಮೂಲಕ ನೀವೇ ಆಡಳಿತ ನಡೆಸುವವರಾಗುತ್ತೀರಿ ಎಂದು ಪ್ರಕಟಿಸಿರುವ ಅವರು, ಮುಂಬರುವ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಖಚಿತಪಡಿಸಿದ್ದಾರೆ.

ಐಐಟಿ ದೆಹಲಿ, ಐಐಎಂ ಬೆಂಗಳೂರಿನ ಹಳೆಯ ವಿದ್ಯಾರ್ಥಿಯಾಗಿರುವ ದಿವ್ಯಾ ಮಿತ್ತಲ್ ಅವರು ತಮ್ಮ 13 ವರ್ಷಗಳ ವೃತ್ತಿಜೀವನದ ಬಳಿಕ ಆ.30ರಂದು ಭಾರತೀಯ ಆಡಳಿತ ಸೇವೆಗೆ (ಐಎಎಸ್) ರಾಜೀನಾಮೆ ನೀಡಿದ್ದರು. ಬಳಿಕ ಸೆಪ್ಟೆಂಬರ್ 29ರಂದು ರಾಜಕೀಯ ಪ್ರವೇಶ ಮಾಡುವುದಾಗಿ ಪ್ರಕಟಿಸಿದ್ದರು.


मेरा राजनीतिक सफर का अगला कदम। मेरे साथ जुड़ें 🙏🙏





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries