HEALTH TIPS

2030ರ ಪುರುಷರ, ಮಹಿಳೆಯರ ಹಾಕಿ ವಿಶ್ವಕಪ್ ಆತಿಥ್ಯ: ಸ್ಪರ್ಧೆಯಲ್ಲಿ ಪಂಜಾಬ್, ತಮಿಳುನಾಡು, ಒಡಿಶಾ

ನವದೆಹಲಿ: 2030ರ ಪುರುಷರ ಮತ್ತು ಮಹಿಳೆಯರ ಎಫ್‌ಐಎಚ್ ವಿಶ್ವಕಪ್ ಆತಿಥ್ಯ ಸ್ಪರ್ಧೆಯಲ್ಲಿ ಪಂಜಾಬ್, ಒಡಿಶಾ ಮತ್ತು ತಮಿಳುನಾಡು ರಾಜ್ಯಗಳು ಮುಂಚೂಣಿಯಲ್ಲಿವೆ ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.


ಒಡಿಶಾ ಈಗಾಗಲೇ ಎರಡು ಬಾರಿ ಪುರುಷರ ವಿಶ್ವಕಪ್ ಆಯೋಜಿಸಿದೆ. ಅದೇ ವೇಳೆ, ತಮಿಳುನಾಡು ಕಳೆದ ವರ್ಷ ಚೆನ್ನೈ ಮತ್ತು ಮದುರೈನಲ್ಲಿ ಪುರುಷರ ಜೂನಿಯರ್ ವಿಶ್ವಕಪ್‌ಅನ್ನು ಯಶಸ್ವಿಯಾಗಿ ಸಂಘಟಿಸಿತ್ತು.

ಭಾರತೀಯ ಹಾಕಿಯ ತವರು ಎಂದೇ ಪರಿಗಣಿಸಲ್ಪಟ್ಟಿರುವ ಪಂಜಾಬ್, ಈವರೆಗೆ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಿಲ್ಲ. ಆದರೆ ಪ್ರಸ್ತುತ ರಾಜ್ಯವು ಪುರುಷರ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುತ್ತಿದ್ದು, ಇದು 17 ವರ್ಷಗಳ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಯಾಗಿದೆ. ಪಂಜಾಬ್ ಕೊನೆಯ ಬಾರಿ 2009ರಲ್ಲಿ ಗೋಲ್ಡ್ ಕಪ್ ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿತ್ತು.

''ಒಡಿಶಾ, ತಮಿಳುನಾಡು ಮತ್ತು ಪಂಜಾಬ್ ಎಲ್ಲವೂ ವಿಶ್ವಕಪ್ ಆತಿಥ್ಯ ವಹಿಸುವ ಸ್ಪರ್ಧೆಯಲ್ಲಿವೆ. ಒಡಿಶಾಗೆ ಹಾಕಿ ವಿಶ್ವಕಪ್ ಆಯೋಜಿಸುವ ಅವಕಾಶ ಸಿಕ್ಕರೆ, ಅದು ಆ ರಾಜ್ಯದ ದೊಡ್ಡ ಸಾಧನೆಯಾಗಲಿದೆ. ಒಡಿಶಾ ನಮ್ಮ ಮೊದಲ ಆದ್ಯತೆಯಾಗಿರಲಿದೆ'' ಎಂದು ಭೋಲಾ ನಾಥ್ ತಿಳಿಸಿದರು. 




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries