HEALTH TIPS

ನೋಯ್ಡಾ: ಬಹುಮಹಡಿ ಕಟ್ಟಡದ 43ನೇ ಮಹಡಿಯಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ

ನೋಯ್ಡಾ: ಗುರುಗ್ರಾಮದ 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್‌ ಒಬ್ಬರು ನೋಯ್ಡಾದ 'ಸೂಪರ್‌ನೋವಾ ಸ್ಪೈರಾ' ಕಟ್ಟಡದ 43ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಜನರು ಆತನನ್ನು ರಕ್ಷಿಸಲು ಪ್ರಯತ್ನಿಸಿದರೂ ಲೆಕ್ಕಿಸದೆ ಮಹಡಿಯಿಂದ ಜಿಗಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬಾಲ್ಕನಿಯ ಗ್ರಿಲ್ ಹಿಡಿದು ತೂಗಾಡುತ್ತಿರುವ ವೇಳೆ, ಬಾಲ್ಕನಿಯಲ್ಲಿದ್ದ ನಾಲ್ವರು ಆತನನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ಆ ವಿಡಿಯೊದಲ್ಲಿದೆ.

ಮೃತನನ್ನು ಸಂಭವ್ ಜೈನ್ ಎಂದು ಗುರುತಿಸಲಾಗಿದ್ದು, ಇವರು ಸೆಕ್ಟರ್ 94ರ ಬಹುಮಹಡಿ ಕಟ್ಟಡದಲ್ಲಿ ಒಬ್ಬರೇ ಬಂದು ಒಂದು ದಿನದ ಮಟ್ಟಿಗೆ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಕುರಿತು ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ತಲುಪಿದೆವು. ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯದ ತಂಡದೊಂದಿಗೆ ಘಟನಾ ಸ್ಥಳವನ್ನು ಪರಿಶೀಲಿಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಸಂಭವ್ ಜೈನ್ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೌಟುಂಬಿಕ ಸಮಸ್ಯೆಗಳು, ಮಗನ ಆರೋಗ್ಯ ಸ್ಥಿತಿ, ಸಾಲದ ಹೊರೆ ಮತ್ತು ದಾಂಪತ್ಯ ಕಲಹ ಇದಕ್ಕೆ ಪ್ರಮುಖ ಕಾರಣಗಳಾಗಿರಬಹುದು ಎಂದು ಮಾಹಿತಿ ನೀಡಿದ್ದಾರೆ.

ಘಟನೆಗೂ ಮುನ್ನ ಸಂಭವ್ ಜೈನ್ ಅವರ ತಂದೆಯೊಂದಿಗೆ ಸಂಪರ್ಕದಲ್ಲಿದ್ದು, ತಾವು ಇನ್ನು ಮುಂದೆ ಬದುಕುವುದಿಲ್ಲ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಆತ್ಮಹತ್ಯೆಗೂ ಮೊದಲು ತಮ್ಮ ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದು, ಅದರಲ್ಲಿ ಸಾಲದ ಕುರಿತು ಮನನೊಂದು ಮಾತನಾಡಿದ್ದಾರೆ. ಅದರಲ್ಲಿ ಈ ನಿರ್ಧಾರಕ್ಕೆ ತಾವೇ ಹೊಣೆ ಎಂದು ಹೇಳಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 


(ಯಾರಿಗಾದರೂ ಖಿನ್ನತೆ ಇದ್ದರೆ ಇಲ್ಲವೆ ಆತ್ಮಹತ್ಯೆಯ ಮನೋಭಾವ ಕಾಡುತ್ತಿದ್ದರೆ ಈ ಕೆಳಗಿನ ಸಹಾಯವಾಣಿ ಸಂಪರ್ಕಿಸಿ: ಟೆಲಿಮನಸ್‌-14416 ಅಥವಾ ಸಹಾಯ್‌- 080 25497777, 98864 44075)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries