HEALTH TIPS

ತುಳುವೆರೆ ಆಯನೋ ಕೂಟಕ್ಕೆ ದ್ವಿದಶಕದ ಸಂಭ್ರಮ : ಅ.4ಕ್ಕೆ ಬದಿಯಡ್ಕದಲ್ಲಿ ವಿಶೇಷ ಸಭೆ

ಬದಿಯಡ್ಕ : ಕಾಸರಗೋಡು ಜಿಲ್ಲೆಯಲ್ಲಿ ತುಳು ಭಾಷಾ ಸಂಸ್ಕೃತಿ ವೈವಿಧ್ಯತೆಯ ಮಹತ್ವವನ್ನು ಸಾರಿದ ತುಳುವೆರೆ ಆಯನೋ ಕೂಟಕ್ಕೆ ಇದೀಗ 20ನೇ ವರ್ಷದ ಸಂಭ್ರಮ. 2006ರಲ್ಲಿ ಬದಿಯಡ್ಕವನ್ನು ಕೇಂದ್ರೀಕರಿಸಿಕೊಂಡು ಅಸ್ತಿತ್ವಕ್ಕೆ ಬಂದ ತುಳುವೆರೆ ಆಯನೋ ಕೂಟದ ನೇತೃತ್ವದಲ್ಲಿ ಹಲವಾರು ಅಭೂತಪೂರ್ವ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಅಂದಿನ‌ ಕೇರಳ ಸರ್ಕಾರದ ಮೂಲಕ ತುಳು ಅಕಾಡೆಮಿ ಸ್ಥಾಪನೆಗೆ ನಾಂದಿ ಹಾಡಲಾಗಿತ್ತು. ಬಳಿಕ ತೆನ್ಕಾಯಿ ತುಳುನಾಡ್ದ ನಲಿಕೆಗುಲು, ವಿಶ್ವ ತುಳುವೆರೆ ಆಯನೋ, ತುಳುನಾಡೋಚ್ಛಾಯ, ತುಳುನಾಡ ದೈವರಾಧನೆ ಕೊಡೆ ಇನಿ ಎಲ್ಲೆ ಮೊದಲಾದ ಕಾರ್ಯಕ್ರಮಗಳು ಈ ಸಂಘಟನೆಯ ಮೂಲಕ ನಡೆದಿತ್ತು, ವಿವಿಧ ಭಾಷಿಗರನ್ನು ಒಂದೆಡೆ ಸೇರಿಸಿದ ತುಳುನಾಡ ತಿರ್ಗಾಟೊ, ಬಹುಭಾಷಾ ಸಂಗಮ, ಆಟಿದ ನಲಿಕೆ-ತೆಲಿಕೆ,ಸೋಣೊಗ್ ಸುಗಿಪು, ಮಾಯಿದ ಮದಿಪು, ಸಿರಿ ದಿನಾಚರಣೆ, ಪತ್ತನಾಜೆ,ತುಳುನಾಡ ತುಡರ್ ಪರ್ಬ ಬಲಿಯೇಂದ್ರ,ಕೆಸರ್ ಡ್ ಒಂಜಿ ದಿನ, ನೀರ್ ನೀರ್ ನಿರ್ನಾಲ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಪ್ರಸ್ತುತ ಇಪ್ಪತ್ತನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ತುಳುವೆರೆ ಆಯನೋ ಕೂಟದ ವತಿಯಿಂದ ಬೃಹತ್ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಇದರ ಸಿದ್ಧತೆಗಾಗಿ ಅಕ್ಟೋಬರ್ 4ರಂದು ಮಧ್ಯಾಹ್ನ 3 ಗಂಟೆಗೆ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಸಭೆಯೊಂದನ್ನು ಆಯೋಜಿಸಲಾಗಿದೆ. ತುಳುನಾಡಿನ ಎಲ್ಲರು ಈ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ತುಳುವೆರೆ ಆಯನೋ ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ವಿನಂತಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries