HEALTH TIPS

ಪ್ರಧಾನಿ ಮೋದಿಯನ್ನು ಹೊಗಳಲು ಅಗಲಿದ ಸ್ವಾಮಿಗೆ AI ಮೂಲಕ 'ಮರುಜೀವ'; ವೇದಿಕೆಯಲ್ಲೇ ಭಾವುಕರಾದ ಪ್ರಧಾನಿ

ನವದೆಹಲಿ: ದಿವಂಗತ ಸ್ವಾಮಿ ಚಿನ್ಮಯಾನಂದ ಅವರ ಕೃತಕ ಬುದ್ಧಿಮತ್ತೆ (AI) ಆಧಾರಿತ ಹೋಲೊಗ್ರಾಮ್‌ ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವ್ಯಂಗ್ಯಕ್ಕೆ ಗುರಿಯಾಗಿದೆ. ಕೆಲವರು ಇದನ್ನು 'ಕ್ರಿಂಜ್', 'ಪ್ರಚಾರದ ಗಿಮಿಕ್' ಎಂದು ಕರೆದಿದ್ದು, ತಂತ್ರಜ್ಞಾನವನ್ನು ರಾಜಕೀಯ ಸ್ವಪ್ರಶಂಸೆಗೆ ಬಳಸಲಾಗಿದೆ ಎಂದು ಆಕ್ಷೇಪಿಸಿದ್ದಾರೆ.


ಅ. 23ರಂದು ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ಚಿನ್ಮಯ ಮಿಷನ್‌ ನ 75ನೇ ವರ್ಷದ ಅಂಗವಾಗಿ ಆಯೋಜಿಸಿದ್ದ 'ಚಿನ್ಮಯ ಅಮೃತ ಮಹೋತ್ಸವ ಜಾಗತಿಕ ಸಮ್ಮೇಳನ'ವನ್ನು ಮೋದಿ ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ 1993ರ ಆಗಸ್ಟ್‌ ನಲ್ಲಿ ನಿಧನರಾದ ಚಿನ್ಮಯಾನಂದ ಅವರ AI ಆಧಾರಿತ ಹೋಲೊಗ್ರಾಮ್‌ ನೊಂದಿಗೆ ಸಂವಾದ ನಡೆಸಿದರು. ಈ ದೃಶ್ಯಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪರ-ವಿರೋಧದ ಚರ್ಚೆ ಆರಂಭವಾಗಿದೆ.

ಸಂವಾದದಲ್ಲಿ ಚಿನ್ಮಯಾನಂದರ ಹೋಲೊಗ್ರಾಮ್, 1993ರಲ್ಲಿ ವಡೋದರಾದಲ್ಲಿ ಮೋದಿಯವರನ್ನು ಭೇಟಿಯಾಗಿದ್ದ ಸಂದರ್ಭವನ್ನು ನೆನಪಿಸಿಕೊಂಡು, ಆಗ ಭೇಟಿಯಾದ ವ್ಯಕ್ತಿ ಇಂದು ಭಾರತದ ಪ್ರಧಾನಿಯಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿತು. ಅಲ್ಲದೆ, ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಒಂಟಿಯಾಗಿರುತ್ತಾನೆ ಎಂಬ ಮಾತಿನೊಂದಿಗೆ, 'ಭಾರತ ನಿಮ್ಮೊಂದಿಗಿದೆ, ನರೇಂದ್ರ' ಎಂಬ ಸಂದೇಶವನ್ನೂ ನೀಡಿತು. ಇದಕ್ಕೆ ಭಾವುಕರಾಗಿ ಪ್ರತಿಕ್ರಿಯಿಸಿದ ಮೋದಿ, ಈ ಅನುಭವವು 33 ವರ್ಷಗಳ ಹಿಂದಿನ ನೆನಪುಗಳಿಗೆ ಕರೆದೊಯ್ದಿದೆ ಎಂದು ಹೇಳಿ, ಪ್ರತಿಯೊಂದು ಮಾತೂ ಮಂತ್ರದಂತಿದೆ ಎಂದು ಬಣ್ಣಿಸಿದರು.

ಆದರೆ, ಈ ಸಂವಾದವನ್ನು ಟೀಕಿಸಿದ ಅನೇಕರು, ಅಗಲಿದ ವ್ಯಕ್ತಿಯ ಡಿಜಿಟಲ್ ರೂಪದ ಮೂಲಕ ಹಾಲಿ ಪ್ರಧಾನಿಯನ್ನು ಹೊಗಳಿಸುವುದು ನೈತಿಕವಾಗಿ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಚಿನ್ಮಯಾನಂದ ಅವರಂತಹ ಗುರುಗಳ ಹೆಸರನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಚೀನಾದಲ್ಲಿ ರೋಬೊಟಿಕ್ ಸೈನಿಕರ ಅಭಿವೃದ್ಧಿಯಂತಹ ತಂತ್ರಜ್ಞಾನ ಪ್ರಯೋಗಗಳು ನಡೆಯುತ್ತಿರುವಾಗ, ಭಾರತದಲ್ಲಿ ಜನರನ್ನು ಆಕರ್ಷಿಸಲು 'AI ಬಾಬಾ' ಸೃಷ್ಟಿಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಟೀಕಿಸಿದ್ದಾರೆ. ಅಮೆರಿಕದ ಎಐ ಕಾರುಗಳು, ಚೀನಾದ ರೋಬೊಟ್‌ ಗಳಿಗೆ ಹೋಲಿಸಿದರೆ ಭಾರತದಲ್ಲಿ ಎಐ ಮೂಲಕ ಬಾಬಾರನ್ನು ಸೃಷ್ಟಿಸಲಾಗುತ್ತಿದೆ ಎಂಬ ವ್ಯಂಗ್ಯಭರಿತ ಪೋಸ್ಟ್‌ ಗಳೂ ವೈರಲ್ ಆಗಿವೆ.

ಮೋದಿ ಅವರ ಬೆಂಬಲಿಗರಲ್ಲೂ ಕೆಲವರು ಈ ಸಂವಾದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಗಲಿದ ಸ್ವಾಮೀಜಿಯ ಬಾಯಲ್ಲಿ ಪ್ರಧಾನಿಯನ್ನು ಹೊಗಳಿಸುವ ಸಂಭಾಷಣೆ ಅತಿರೇಕದ ಪ್ರದರ್ಶನದಂತೆ ಕಂಡಿದೆ ಎಂದು ಅವರು ಹೇಳಿದ್ದಾರೆ. ದೇಶದ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಇಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿರುವುದೇಕೆ ಎಂಬ ಪ್ರಶ್ನೆಯನ್ನೂ ಕೆಲವರು ಎತ್ತಿದ್ದಾರೆ.

ಎಐ ತಂತ್ರಜ್ಞಾನವನ್ನು ಬಳಸಿ ಅಗಲಿದ ವ್ಯಕ್ತಿಗಳ ಡಿಜಿಟಲ್ ರೂಪಗಳನ್ನು ಸೃಷ್ಟಿಸುವುದು ಮತ್ತು ಅವುಗಳ ಮೂಲಕ ಸಮಕಾಲೀನ ರಾಜಕೀಯ ಸಂದೇಶಗಳನ್ನು ನೀಡುವುದು ಎಷ್ಟು ನೈತಿಕ ಎಂಬ ಚರ್ಚೆಯೂ ಈ ಘಟನೆಯಿಂದ ಮುನ್ನೆಲೆಗೆ ಬಂದಿದೆ. ರಾಜಕೀಯ ಹೊಗಳಿಕೆಗೆ ಆಧ್ಯಾತ್ಮಿಕ ವ್ಯಕ್ತಿಯ ಚಿತ್ರಣವನ್ನು ಬಳಸಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.

ಯಾರು ಈ ಚಿನ್ಮಯಾನಂದ ಸ್ವಾಮಿ?

ಸ್ವಾಮಿ ಚಿನ್ಮಯಾನಂದ ಸರಸ್ವತಿ (1916-1993) ಕೇರಳಂನಲ್ಲಿ ಜನಿಸಿದವರು. ಅವರು ಚಿನ್ಮಯ ಮಿಷನ್‌ನ ಸ್ಥಾಪಕರು. ಅವರ ಮೂಲ ಹೆಸರು ಬಾಲಕೃಷ್ಣ ಮೆನನ್. ಪತ್ರಕರ್ತರಾಗಿದ್ದ ಅವರು ಬಳಿಕ ಸ್ವಾಮಿ ಶಿವಾನಂದರು ಮತ್ತು ಸ್ವಾಮಿ ತಪೋವನಂ ಅವರ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಅಧ್ಯಯನ ನಡೆಸಿ, ಭಗವದ್ಗೀತೆ ಮತ್ತು ಉಪನಿಷತ್ತುಗಳ ಬೋಧನೆ ಮಾಡುತ್ತಿದ್ದರು. 1953ರಲ್ಲಿ ಚಿನ್ಮಯ ಮಿಷನ್ ಸ್ಥಾಪನೆಯಾಯಿತು.

ಹಿಂದೂ ರಾಷ್ಟ್ರೀಯತೆಯನ್ನೂ ಬಲವಾಗಿ ಬೆಂಬಲಿಸಿದ್ದ ಅವರು, 1964ರಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು ಎಂದು ವರದಿಗಳು ತಿಳಿಸಿವೆ. 1993ರ ಜನವರಿಯಲ್ಲಿ ನೀಡಿದ ಸಂದರ್ಶನದಲ್ಲಿ RSSನ 'ಹಿಂದೂ ರಾಷ್ಟ್ರ' ಪರಿಕಲ್ಪನೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಬಾಬರಿ ಮಸೀದಿ ಧ್ವಂಸ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಸಮರ್ಥಿಸಿದ್ದ ಅವರು, ಮುಸ್ಲಿಮರನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಪರಿಗಣಿಸುವುದನ್ನೂ ವಿರೋಧಿಸಿದ್ದರು. ಮುಸ್ಲಿಮರ ಕುರಿತು ಅವರು ಆಡಿದ ಕೆಲವು ಹೇಳಿಕೆಗಳು ಧಾರ್ಮಿಕ ತಾರತಮ್ಯ ಮತ್ತು ಆರ್ಥಿಕ ಬಹಿಷ್ಕಾರಕ್ಕೆ ಉತ್ತೇಜನ ನೀಡುವಂತಿತ್ತು ಎಂದು ಆರೋಪಿಸಲಾಗಿದೆ.


#WATCH | Prime Minister Narendra Modi interacted with Swami Chinmayananda through holographic technology at the Chinmaya Amrit Mahotsav. The moment recalled their historic meeting in 1993. "It makes me happy that the person I spoke to in 1993 has now become the Prime Minister Show more

PM मोदी ने चिन्मय अमृत महोत्सव ग्लोबल सम्मेलन में एक अनोखा अनुभव साझा किया ◆ यहां उन्होंने 33 साल पहले ब्रह्मलीन हो चुके आध्यात्मिक गुरु स्वामी चिन्मयानंद के होलोग्राफिक अवतार यानी होलोबॉट से बातचीत की ◆ इस तकनीक के जरिए ऐसा लगा, मानो स्वामी चिन्मयानंद स्वयं प्रधानमंत्री के Show more

Bhai, this is a new level of CRINGE 💀🤡 PM Modi at Bharat Mandapam, chatting with a hologram of Swami Chinmayananda. A saint who passed away 33 years ago, in 1993. And what does the AI Swamiji say? > "I am very happy that the man I met in 1993 is the Prime Minister of India Show more







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries