HEALTH TIPS

ಇಸ್ರೇಲಿನ ಆಕ್ರಮಣವೇ ಪ್ರಾದೇಶಿಕ ಅಸ್ಥಿರತೆಗೆ ಮೂಲ: ಈಜಿಪ್ಟ್, ಸೌದಿ ಅರೇಬಿಯ, ತುರ್ಕಿಯೆ, ಪಾಕಿಸ್ತಾನದಿಂದ ಜಂಟಿ ಹೇಳಿಕೆ

ಇಸ್ತಾಂಬುಲ್: ಇಸ್ರೇಲಿ ಆಕ್ರಮಣವೇ ಮಧ್ಯಪ್ರಾಚ್ಯದಲ್ಲಿ ಮತ್ತು ಅದರಾಚೆಗಿನ ಅಸ್ಥಿರತೆಗೆ ಮೂಲ ಕಾರಣ ಎಂದು ಈಜಿಪ್ಟ್, ಸೌದಿ ಅರೇಬಿಯ, ತುರ್ಕಿಯೆ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರು ಜಂಟಿ ಹೇಳಿಕೆಯಲ್ಲಿ ಆರೋಪಿಸಿದ್ದಾರೆ ಎಂದು Aljazeera ವರದಿ ಮಾಡಿದೆ.


ಇಸ್ತಾಂಬುಲ್‌ ನಲ್ಲಿ ನಡೆದ 'R4' ಸಭೆಯ ಬಳಿಕ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ, ಇಸ್ರೇಲ್‌ ನ ನೀತಿಗಳು ಜಾಗತಿಕವಾಗಿ ಅನ್ಯಾಯದ ಭಾವನೆಯನ್ನು ಮತ್ತಷ್ಟು ಗಾಢಗೊಳಿಸಿವೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

1967ಕ್ಕೂ ಮುನ್ನ ಇದ್ದ ಗಡಿರೇಖೆಗಳ ಆಧಾರದ ಮೇಲೆ, ಪೂರ್ವ ಜೆರುಸಲೆಮ್ ರಾಜಧಾನಿಯಾಗಿರುವ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಗೆ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ದ್ವಿ-ರಾಷ್ಟ್ರ ಪರಿಹಾರವನ್ನು ತುರ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಹೌತಿ ಬಂಡುಕೋರ ಗುಂಪು ಸಂಘರ್ಷವನ್ನು ತೀವ್ರಗೊಳಿಸುತ್ತಿರುವುದನ್ನು ಖಂಡಿಸಿರುವ ಸಚಿವರು, ಸೌದಿ ಅರೇಬಿಯದೊಂದಿಗೆ ಸಂಪೂರ್ಣ ಒಗ್ಗಟ್ಟು ವ್ಯಕ್ತಪಡಿಸಿದ್ದಾರೆ. ಹೌತಿಗಳು ಎಲ್ಲ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಿ ರಾಜಕೀಯ ಪ್ರಕ್ರಿಯೆಗೆ ಮರಳಬೇಕು ಎಂದು ಒತ್ತಾಯಿಸಿದ್ದಾರೆ.

ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ, ಮಾತುಕತೆ ಮತ್ತು ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ತುರ್ತು ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕಾನೂನುಬದ್ಧ ನೌಕಾಯಾನಕ್ಕೆ ಅಡ್ಡಿಪಡಿಸುವ ಯಾವುದೇ ಕ್ರಮಗಳನ್ನು ತಿರಸ್ಕರಿಸಿರುವ ನಾಲ್ಕೂ ದೇಶಗಳ ಸಚಿವರು, ಜಾಗತಿಕ ಇಂಧನ ಪೂರೈಕೆ ಮತ್ತು ಸಮುದ್ರ ವ್ಯಾಪಾರಕ್ಕೆ ಮಹತ್ವದ ಹಾರ್ಮುಝ್ ಜಲಸಂಧಿಯಲ್ಲಿ ಸುರಕ್ಷಿತ ನೌಕಾಯಾನವನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಬೇಕು ಎಂದು ಕರೆ ನೀಡಿದ್ದಾರೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries