HEALTH TIPS

ಚರ್ಚ್‌ ನಲ್ಲಿ ಟ್ರಂಪ್ ಅಳಿಯನ ಫೋನ್ ಹ್ಯಾಕ್ | 2 ದೇಶಗಳೊಂದಿಗೆ ರಹಸ್ಯ ವ್ಯವಹಾರ ಬಹಿರಂಗ: ವರದಿ

ವಾಶಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಅವರು ಶ್ವೇತಭವನದ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾಗ, ಗಲ್ಫ್-ನಿಧಿ ಆಧಾರಿತ ವಿದೇಶಿ ಬ್ಯಾಂಕ್ ಖಾತೆಗಳನ್ನು ರಹಸ್ಯವಾಗಿ ಪರಿಶೀಲಿಸುತ್ತಿದ್ದರು ಎಂಬ ಆರೋಪಗಳನ್ನು ಎದುರಿಸಿದ್ದಾರೆ. 


`ವ್ಯಾನಿಟಿ ಫೇರ್' ವರದಿಯ ಪ್ರಕಾರ, ಡಚ್ ಗೂಢಚಾರರು ಕುಶ್ನರ್ ಅವರ ಫೋನ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಿದ್ದು, ಸೌದಿ, ಯುಎಇ ಮತ್ತು ಇಸ್ರೇಲಿ ನಾಯಕರನ್ನೊಳಗೊಂಡ ರಹಸ್ಯ ಹಣಕಾಸು ವ್ಯವಸ್ಥೆಗಳನ್ನು ಬಹಿರಂಗಪಡಿಸಿದ್ದಾರೆ. ಟ್ರಂಪ್ ಬಳಿ ತಮ್ಮ ಕಾರ್ಯಸೂಚಿಯನ್ನು ಕುಶ್ನರ್ ಮುಂದಿಡುವುದಕ್ಕೆ ಪ್ರತಿಯಾಗಿ ಈ ವ್ಯವಹಾರಗಳನ್ನು ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.

ಮ್ಯಾಥ್ಯೂ ಕೋಲ್ ಅವರ ಶೀಘ್ರದಲ್ಲೇ ಬರಲಿರುವ `ಪ್ರಿನ್ಸಸ್ ಅಂಡ್ ಥೀವ್ಸ್: ಜೇರೆಡ್ ಕುಶ್ನರ್ ಅಂಡ್ ಮುಹಮ್ಮದ್ ಬಿನ್ ಝಾಯೆದ್ಸ್ ಸೀಕ್ರೆಟ್ ಪ್ಲಾಟ್ ಟು ರಿಮೇಕ್ ದಿ ಮಿಡಲ್ ಈಸ್ಟ್' ಪುಸ್ತಕದ ಆಯ್ದ ಭಾಗವನ್ನು ಆಧರಿಸಿದ ಈ ವರದಿಯು ` ಮೊದಲ ಟ್ರಂಪ್ ಆಡಳಿತದ ಅವಧಿಯಲ್ಲಿ ಡಚ್ ಗೂಢಚಾರರು ಜೇರೆಡ್ ಕುಶ್ನರ್ ಅವರ ಐಫೋನ್ ಅನ್ನು ರಹಸ್ಯವಾಗಿ ಗಮನಿಸುತ್ತಿದ್ದರು. ಅಝರ್‌ಬೈಜಾನ್‍ನ ಬ್ಯಾಂಕ್‍ನಿಂದ ನೂರಾರು ಮಿಲಿಯನ್ ಡಾಲರ್‌ಗಳನ್ನು ಸ್ವೀಕರಿಸಿದ್ದ ಯುಎಇ ಸಂಬಂಧಿತ ಬ್ಯಾಂಕ್ ಖಾತೆಯನ್ನು ಕುಶ್ನರ್ ಪರಿಶೀಲಿಸಿರುವ ಮಾಹಿತಿ ಗೂಢಚಾರರಿಗೆ ಲಭಿಸಿದೆ' ಎಂದು ಪ್ರತಿಪಾದಿಸಿದೆ.

ಯುಎಇ ಸರಕಾರಿ ಅನುದಾನಿತ ದತ್ತಿ ಸಂಸ್ಥೆಯಾದ ವಟಾನಿ ಅಲ್ ಎಮಿರೇಟ್ ಫೌಂಡೇಶನ್ ಹೊಂದಿರುವ ಫಸ್ಟ್ ಅಬುಧಾಬಿ ಬ್ಯಾಂಕ್‍ನ ಖಾತೆಗೆ ಸುಮಾರು 750 ದಶಲಕ್ಷ ಡಾಲರ್ ವರ್ಗಾಯಿಸಲಾಗಿದೆ. ಕುಶ್ನರ್ ಈ ಖಾತೆಯ ಸಹಿ ಮಾಡುವ ಅಧಿಕಾರ ಹೊಂದಿದ್ದರು, ಇದು ಅವರಿಗೆ ಖಾತೆಯನ್ನು ಪ್ರವೇಶಿಸಲು ಅವಕಾಶ ನೀಡಿತು. ಆದರೆ ಅವರು ಖಾತೆಯ ಮಾಲಕರಾಗಿರಲಿಲ್ಲ.ಇದನ್ನು ಬ್ಯಾಂಕ್‍ನ ಅಧ್ಯಕ್ಷ ಮತ್ತು ಯುಎಇ ಆಡಳಿತಗಾರ ಮುಹಮ್ಮದ್ ಬಿನ್ ಝಾಯೆದ್ ಅವರ ಸಹೋದರ ತಹ್ನೂನ್ ಬಿನ್ ಝಾಯೆದ್ ಮೇಲ್ವಿಚಾರಣೆ ಮಾಡುತ್ತಿದ್ದರು ಎಂದು ವರದಿ ತಿಳಿಸಿದೆ.

ಟ್ರಂಪ್ ಆಡಳಿತಕ್ಕೆ ಅದರ ವಿದೇಶಾಂಗ ನೀತಿಯ ಗುರಿಗಳನ್ನು ತಲುಪಲು ಸಹಾಯ ಮಾಡಲು `ರಹಸ್ಯ ನಿಧಿ' ಸ್ಥಾಪಿಸಲು ಬಿನ್ ಝಾಯೆದ್ ಮತ್ತು ಸೌದಿ ಅರೇಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಈ ಖಾತೆಯ ಕಲ್ಪನೆಯ ಹಿಂದೆ ಇದ್ದರು. ಈ ರಹಸ್ಯ ನಿಧಿಯ ಕಲ್ಪನೆಯು ಅಂತಿಮವಾಗಿ ವಿಫಲವಾಗಿದ್ದರೂ, ಇಬ್ಬರು ಮಧ್ಯಪ್ರಾಚ್ಯ ರಾಜಮನೆತನದವರು ಕುಶ್ನರ್‌ಗಾಗಿ ಎರಡು ಖಾತೆಗಳಲ್ಲಿ ಕನಿಷ್ಠ 2 ಶತಕೋಟಿ ಡಾಲರ್‍ಗಳನ್ನು ಹೂಡಿಕೆ ಮಾಡಿದ್ದಾರೆ. ಕುಶ್ನರ್ ಅವರ ವೈಯಕ್ತಿಕ ಲಾಭಕ್ಕಾಗಿ 1 ಶತಕೋಟಿ ಡಾಲರ್ ಹಣವನ್ನು ವರ್ಗಾಯಿಸಲು ಸೌದಿ ರಾಜಕುಮಾರ ಬಳಸಿದ್ದರೆನ್ನಲಾದ ಮತ್ತೊಂದು ಬ್ಯಾಂಕ್ ಖಾತೆಯೂ ಇತ್ತು. ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಈ ಹಣ ವರ್ಗಾವಣೆಗೆ ವ್ಯವಸ್ಥೆ ಮಾಡಿದ್ದರು ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಹಣವನ್ನು ಇಸ್ರೇಲ್‍ನಲ್ಲಿ ಠೇವಣಿ ಇಡುವಂತೆ ಕುಶ್ನರ್ ಅವರಿಗೆ ಪ್ರೋತ್ಸಾಹಿಸಿದ್ದರು . ಕುಶ್ನರ್ ಅವರು ಆಗ ಇಸ್ರೇಲ್‍ಗೆ ಅಮೆರಿಕ ರಾಯಭಾರಿಯಾಗಿದ್ದ ಡೇವಿಡ್ ಫ್ರೈಡ್‍ಮ್ಯಾನ್ ಅವರ ಮೂಲಕ ಈ ವಹಿವಾಟುಗಳ ಕುರಿತು ನೆತನ್ಯಾಹು ಅವರೊಂದಿಗೆ ವ್ಯವಹರಿಸಿದ್ದರು ಎಂದು ವರದಿ ತಿಳಿಸಿದೆ.

ಕುಶ್ನರ್ ಈ ಆರೋಪಗಳನ್ನು ಬಲವಾಗಿ ನಿರಾಕರಿಸಿದ್ದು, ಈ ವಾದಗಳು ಅತ್ಯಂತ ಆಕ್ಷೇಪಾರ್ಹ ಮತ್ತು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries