HEALTH TIPS

ಕೇಂದ್ರ ಸರ್ಕಾರವು ದೆಹಲಿಯಲ್ಲಿ ಯುದ್ಧದಂತಹ ಸನ್ನಿವೇಶ ಸೃಷ್ಟಿಸಿದೆ: ಶಶಿ ತರೂರ್

ನವದೆಹಲಿ: ನಮ್ಮ ಜೆನ್ ಝೀ ಗಳಿಗೆ ಘೋಷಿಸದಿರುವ 'ಎಮರ್-ಜೆನ್ ಝೀ'ಗಿಂತ ಉತ್ತಮವಾದದ್ದು ಬೇಕಿದೆ. ಆದರೆ, ಕೇಂದ್ರ ಸರ್ಕಾರವು ದೆಹಲಿಯಲ್ಲಿ ಯುದ್ಧದಂತಹ ಸನ್ನಿವೇಶ ಸೃಷ್ಟಿಸಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರವು ಯುವಕರ ಮೇಲೆ ಲಾಠಿ ಪ್ರಹಾರ ಮಾಡುವ ಬದಲು, ಉತ್ತರಗಳನ್ನು ನೀಡಬೇಕಿದೆ. ಅವರ ಹೋರಾಟವನ್ನು ದಮನ ಮಾಡುವ ಬದಲು, ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಬೇಕು ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಶಶಿ ತರೂರ್, 'ನಾನು ಬರ್ಲಿನ್‌ನಿಂದ ದೆಹಲಿಗೆ ರಾತ್ರಿ 2ರ ವೇಳೆಗೆ ಬಂದಾಗ, ಪ್ರತಿ ಕೆಲವು ನೂರು ಮೀಟರ್‌ಗಳಿಗೆ ತಪಾಸಣಾ ಕೇಂದ್ರಗಳು, ರಸ್ತೆಗಳಾದ್ಯಂತ ಕಾಂಕ್ರೀಟ್ ಬ್ಯಾರಿಕೇಡ್‌ಗಳು ಮತ್ತು ನಗರದಾದ್ಯಂತ 22,000 ಪೊಲೀಸ್ ಮತ್ತು ಅರೆಸೇನಾ ಸಿಬ್ಬಂದಿಯ ನಿಯೋಜನೆ ಮಾಡಿರುವುದನ್ನು ನೋಡಿದೆ. ಇದು ಯುದ್ಧದಂತಹ ಸನ್ನಿವೇಶವಾಗಿತ್ತು. 250 ರೈಲುಗಳು ರದ್ದು ಮತ್ತು 45 ಮೆಟ್ರೊ ನಿಲ್ದಾಣಗಳು ಬಂದ್ ಮಾಡಿರುವುದು ಹಾಗೂ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಂತ ಮನೆಗಳಿಂದಲೇ ಯುವಕರನ್ನು ಬಂಧಿಸಲಾಗುತ್ತಿದೆ ಎಂಬ ವರದಿಗಳು ಕೇಳಿಬರುತ್ತಿವೆ. ನಾಗರಿಕರು ಚುನಾವಣೆಯ ಪಾರದರ್ಶಕತೆ ಕುರಿತು ಶಾಂತಿಯುತವಾಗಿ ಪ್ರಶ್ನಿಸುವುದನ್ನು ತಡೆಯಲು ಸರ್ಕಾರವು ಇದನ್ನೆಲ್ಲ ಮಾಡುತ್ತಿದೆ' ಎಂದು ಬರೆದುಕೊಂಡಿದ್ದಾರೆ.

ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿರುವುದು ಅತ್ಯಂತ ದಮನಕಾರಿ ಕ್ರಮವಾಗಿದೆ. ದೆಹಲಿ ಈಗ ಸಾಕ್ಷಿಯಾಗಿರುವಂತಹ ಪರಿಸ್ಥಿತಿಯನ್ನು ನಾನು ಅಪರೂಪಕ್ಕೆ ನೋಡುತ್ತಿದ್ದೇನೆ. ಪ್ರತಿಭಟನೆಯನ್ನು ಹತ್ತಿಕ್ಕುವ ಮೂಲಕ ಈ ಸಮಸ್ಯೆಗೆ ಉತ್ತರ ಸಿಗುವುದಿಲ್ಲ. ಸಾರ್ವಜನಿಕರ ಪ್ರಶ್ನೆಗಳಿಗೆ ಎಷ್ಟು ಬೇಗ ಉತ್ತರ ಸಿಗುತ್ತದೋ, ಅಷ್ಟು ಬೇಗ ಶಾಂತಿ ಮರಳುತ್ತದೆ ಎಂದು ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಜಂತರ್‌ಮಂತರ್‌ನಲ್ಲಿ ಪ್ರತಿಭಟನೆಗೆ ಪ್ರಯತ್ನಿಸುತ್ತಿದ್ದು, ಕೇಂದ್ರ ಸರ್ಕಾರವು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries