HEALTH TIPS

ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರ ಇನ್ಸ್ಟಾಗ್ರಾಮ್ ಖಾತೆ 'ಅನ್‌ಬ್ಲಾಕ್'

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಟೀಕಿಸುವ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಇನ್‌ಸ್ಟಾಗ್ರಾಮ್ ಖಾತೆ ಒಂದು ವಾರದ ಬಳಿಕ ಮರುಸ್ಥಾಪನೆಯಾಗಿದೆ. 'ಅಂತಿಮವಾಗಿ, ಇನ್‌ಸ್ಟಾಗ್ರಾಮ್‌ ನಲ್ಲಿ ನಿರ್ಬಂಧ ತೆರವುಗೊಂಡಿದೆ. 


ನನ್ನನ್ನು ಬೆಂಬಲಿಸಿದ ಮತ್ತು ನನ್ನೊಂದಿಗೆ ನಿಂತ ಎಲ್ಲರಿಗೂ ಧನ್ಯವಾದಗಳು. ಇದು ನನಗೆ ಬಹಳ ಮಹತ್ತರ ಬೆಳವಣಿಗೆ' ಎಂದು ಸತೀಶ್ ಆಚಾರ್ಯ ಸೋಮವಾರ ತಿಳಿಸಿದ್ದಾರೆ.

ಖಾತೆ ಮರುಸ್ಥಾಪನೆಯಾದ ಬಳಿಕ ಅವರು 'UNBLOCKED' ಎಂದು ಬರೆದಿರುವ ವ್ಯಂಗ್ಯಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

ಸೆಪ್ಟೆಂಬರ್ 28ರಂದು ಆಚಾರ್ಯ ಅವರ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ, 'ಭಾರತದ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ಅಡಿಯಲ್ಲಿನ ಕಾನೂನು ಅಗತ್ಯತೆಗಳಿಗೆ ಅನುಗುಣವಾಗಿ ನಾವು ಈ ಖಾತೆಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದೇವೆ' ಎಂಬ ಸಂದೇಶ ಕಾಣಿಸಿಕೊಂಡಿತ್ತು.

ನಿರ್ಬಂಧಕ್ಕೊಳಗಾದ ಪೋಸ್ಟ್‌ಗಳಲ್ಲಿ 'ಇಂಡಿಯನ್ ಎಕ್ಸ್‌ಪ್ರೆಸ್' ಭಾರತೀಯ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಸುದ್ದಿ ಬಹಿರಂಗಪಡಿಸಿದ ಬಳಿಕ, ಪ್ರಧಾನಿ ಮೋದಿ ಅವರನ್ನು ಟೀಕಿಸಿ ಸತೀಶ್ ಆಚಾರ್ಯ ರಚಿಸಿದ್ದ ವ್ಯಂಗ್ಯಚಿತ್ರವೂ ಸೇರಿತ್ತು.

ಈ ಕುರಿತು ಆಚಾರ್ಯ, 'ಡರ್ ಕೆ ಆಗೆ ಜೀತ್ ನಹೀ ಹೈ, ಸಾಹೇಬ್! (ಭಯದ ಆಚೆಗೆ ಗೆಲುವಿಲ್ಲ, ಸಾಹೇಬ್!) 2023ರಲ್ಲಿ ಪ್ರಕಟವಾದ ಕೆಲವು ವ್ಯಂಗ್ಯಚಿತ್ರಗಳನ್ನು ಈಗ ನಿರ್ಬಂಧಿಸಲಾಗುತ್ತಿದೆ!' ಎಂದು ಪ್ರತಿಕ್ರಿಯಿಸಿದ್ದರು.

ತಮ್ಮನ್ನು ಟೀಕಿಸುವ ಖಾತೆಗಳು ಮತ್ತು ವಿಷಯಗಳ ಮೇಲೆ ಮೋದಿ ಸರಕಾರ ನಿರ್ಬಂಧ ಹೇರುತ್ತಿದೆ ಎಂದು ಪ್ರಶ್ನಿಸಿದ್ದ ಅವರು, 2018ರ ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ನೀಡಿದ್ದ ಹೇಳಿಕೆಯೊಂದನ್ನೂ ಹಂಚಿಕೊಂಡಿದ್ದರು.

ದಿವಂಗತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರ 'ಕಾಮನ್ ಮ್ಯಾನ್' ವ್ಯಂಗ್ಯಚಿತ್ರವನ್ನು ಡಿಜಿಟಲೀಕರಣಗೊಳಿಸಿದ್ದಕ್ಕಾಗಿ ಅವರ ಕುಟುಂಬವನ್ನು ಮೋದಿ ಅವರು 2018ರಲ್ಲಿ ಅಭಿನಂದಿಸಿದ್ದರು.

'ವ್ಯಂಗ್ಯಚಿತ್ರಗಳಿಗೆ ಗುಣಪಡಿಸುವ ಶಕ್ತಿಯಿದೆ, ವ್ಯಂಗ್ಯಚಿತ್ರಕಾರರು ದೇವರಿಗೆ ಹತ್ತಿರವಿರುವವರು' ಎಂದು ಮೋದಿ ಆಗ ಹೇಳಿದ್ದರು.

ಈ ಹೇಳಿಕೆಯನ್ನು ಹಂಚಿಕೊಂಡ ಆಚಾರ್ಯ, 'ವಾಹ್ ಮೋದೀಜಿ ವಾಹ್! #BlockSarkar' ಎಂದು ಪೋಸ್ಟ್ ಮಾಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries