HEALTH TIPS

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮಾದಕ ದ್ರವ್ಯದ ವಿರುದ್ಧ ಪ್ರತಿಜ್ಞೆ ಸ್ವೀಕರಿಸಿದ ವಿದ್ಯಾರ್ಥಿಗಳು

ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮಾದಕ ದ್ರವ್ಯದ ವಿರುದ್ಧ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ಆರೋಗ್ಯಕರವಾದ ಶರೀರ ಮತ್ತು ಶಾಂತಿಯುತವಾದ  ಮನಸ್ಸು ನನ್ನ ಅತ್ಯಂತ ದೊಡ್ಡ ಸಂಪತ್ತು ಎಂದು ನಾನು ಅರಿತುಕೊಂಡಿದ್ದೇನೆ. ನನ್ನ ಹೃದಯದ ಆರೋಗ್ಯವನ್ನು ನಾನು ರಕ್ಷಿಸುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಮಾದಕ ದ್ರವ್ಯಗಳು ನನ್ನ ಆರೋಗ್ಯ, ಆಲೋಚನೆಗಳು ಮತ್ತು ಭವಿಷ್ಯದ ಕನಸುಗಳನ್ನು ನಾಶಮಾಡುತ್ತವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದ್ದರಿಂದ, ಎಲ್ಲಾ ರೀತಿಯ ಮಾದಕ ದ್ರವ್ಯಗಳಿಗೆ ನಾನು 'ನೋ' (ಬೇಡ) ಎಂದು ದೃಢವಾಗಿ ಹೇಳುತ್ತೇನೆ. ಮಾದಕ ದ್ರವ್ಯ ಮುಕ್ತವಾದ ಒಂದು ಉತ್ತಮ ಸ್ನೇಹಿತರ ಬಳಗವನ್ನು ಸೃಷ್ಟಿಸಿ, ನನ್ನಂತೆಯೇ ನನ್ನ ಸ್ನೇಹಿತರನ್ನೂ ನಾನು ಸನ್ಮಾರ್ಗದಲ್ಲಿ ಮುನ್ನಡೆಸುತ್ತೇನೆ.  ಉತ್ತಮ ನಾಳೆಗಾಗಿ, ಆರೋಗ್ಯಕರವಾದ ಹೃದಯದೊಂದಿಗೆ, ಮಾದಕ ಮುಕ್ತವಾದ ಒಂದು ವಿದ್ಯಾಲಯ ಮತ್ತು ಸಮಾಜಕ್ಕಾಗಿ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ನಾನು ದೃಢವಾಗಿ ಪ್ರತಿಜ್ಞೆ ಮಾಡುತ್ತೇನೆ ಎಂದು ಎಲ್ಲಾ ವಿದ್ಯಾರ್ಥಿಗಳೂ ಒಗಟ್ಟಿನ ಪ್ರತಿಜ್ಞೆಯನ್ನು ಕೈಗೊಂಡರು. ಶಾಲಾ ಅಧ್ಯಾಪಕ, ಅಧ್ಯಾಪಿಕೆಯರು ಜೊತೆಗೂಡಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries