HEALTH TIPS

ಖ್ಯಾತ ಆಂಗ್ಲ ಕಾದಂಬರಿಕಾರ ಜೆಫ್ರಿ ಆರ್ಚರ್ ಇನ್ನಿಲ್ಲ

ಲಂಡನ್: ಖ್ಯಾತ ಬ್ರಿಟಿಷ್‌ ಕಾದಂಬರಿಕಾರ ಹಾಗೂ ಕನ್ಸರ್ವೇಟಿವ್ ಪಕ್ಷದ ಮಾಜಿ ಸಂಸದ ಜೆಫ್ರಿ ಆರ್ಚರ್ ಅವರು ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.


ಕೇನ್ ಆಯಂಡ್ ಅಬೆಲ್ ಸೇರಿದಂತೆ ಹಲವಾರು ಜನಪ್ರಿಯ ಕಾದಂಬರಿಗಳಿಂದ ಜಗತ್ತಿನಾದ್ಯಂತ ಇಂಗ್ಲಿಷ್ ಸಾಹಿತ್ಯ ಪ್ರೇಮಿಗಳಿಗೆ ಅರ್ಚರ್ ಚಿರಪರಿಚಿತರಾಗಿದ್ದರು.

ರಾಜಕೀಯ ಹಗರಣಗಳಲ್ಲಿ ಶಾಮೀಲಾದ ಆರೋಪವನ್ನು ಕೂಡಾ ಎದುರಿಸಿದ್ದ ಅವರು, ಸುಳ್ಳು ಸಾಕ್ಷ್ಯ ನೀಡಿದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. 'ಎ ಪ್ರಿಸನರ್ ಆಫ್ ಬರ್ತ್', 'ಆಯಸ್ ದಿ ಕ್ರೋಸ್ ಫ್ಲೈಸ್', 'ಸನ್ಸ್ ಆಫ್ ಫಾರ್ಚ್ಯೂನ್' ಅವರ ಕೆಲವು ಪ್ರಸಿದ್ಧ ಕಾದಂಬರಿಗಳಾಗಿವೆ.

ಕಾದಂಬರಿಕಾರರಾಗಿ ಸುಮಾರು 50 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅವರು ಈವರೆಗೆ 31 ಕಾದಂಬರಿಗಳನ್ನು ಬರೆದಿದ್ದಾರೆ. '' ನಾಟ್ ಎ ಪೆನ್ನಿ ಮೋರ್, ನಾಟ್ ಎ ಪೆನ್ನಿ ಲೆಸ್' ಅವರು ಚೊಚ್ಚಲ ಕಾದಂಬರಿಯಾಗಿತ್ತು. ಕನ್ಸರ್ವೇಟಿವ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು, ಲಂಡನ್ ಮೇಯರ್ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಲು ವಿಫಲ ಯತ್ನ ನಡೆಸಿದ್ದರು. ಹಗರಣವೊಂದರಲ್ಲಿ ಡೈಲಿ ಸ್ಟಾರ್ ಪತ್ರಿಕೆಯ ವಿರುದ್ಧ ಸುಳ್ಳು ಸಾಕ್ಷ್ಯ ನೀಡಲು ಪ್ರಚೋದಿಸಿದ ಆರೋಪದಲ್ಲಿ 2001ರಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಎರಡು ವರ್ಷಗಳ ಜೈಲು ಶಿಕ್ಷೆಯ ಬಳಿಕ 2003ರಲ್ಲಿ ಪರೋಲ್‌ನಲ್ಲಿ ಬಿಡುಗಡೆಗೊಂಡರು. ಇಂಗ್ಲೆಂಡ್ ಸಂಸತ್‌ನ ಮೇಲ್ಮನೆ ಹೌಸ್ ಆಫ್ ಲಾರ್ಡ್ಸ್‌ಗೆ ಆಯ್ಕೆಯಾಗಿದ್ದ ಅವರು 2024ರಲ್ಲಿ ನಿವೃತ್ತರಾಗಿದ್ದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries