ಬದಿಯಡ್ಕ: ಮಮತೆಯನ್ನು ನೀಡಿ ಪುಟ್ಟ ಮಕ್ಕಳನ್ನು ದಿನವಿಡೀ ಪ್ರೀತಿಯಿಂದ ಸಲಹುತ್ತಾ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹೆತ್ತ ತಾಯಿಗೆ ಸಮಾನರು ಎಂದು ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಹೇಳಿದರು.
ನರೇಂದ್ರ ಮೋದಿಯವರ ಜನ್ಮದಿನ ಹಾಗೂ 25 ವರುಷದ ಆಡಳಿತ ಪ್ರಯುಕ್ತ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17ರ ವರೆಗೆ ನಡೆಯುವ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಗ್ರಾಮ ಪಂಚಾಯಿತಿನ ಹದಿಮೂರನೇ ವಾರ್ಡಿನ ಅಂಗನವಾಡಿಗಳಲ್ಲಿ ಅಂಗನ್ ಕಾ ಉತ್ಸವ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಗನವಾಡಿ ಎಂದರೆ ಆ ಊರಿನ ಪ್ರಧಾನ ಕೇಂದ್ರವಾಗಿದೆ. ಸರ್ಕಾರದ ಅನೇಕ ಯೋಜನೆಗಳೂ ಅಂಗನವಾಡಿಗಳ ಮೂಲಕ ಜನರಿಗೆ ಲಭಿಸುತ್ತದೆ. ಇದೆಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಮಕ್ಕಳ ಪಾಲನೆ ಮಾಡುವ ಕಾರ್ಯಕರ್ತೆರು ನಿಜಾರ್ಥದಲ್ಲಿ ಅಭಿನಂದನಾರ್ಹರು ಎಂದರು.
ವಾರ್ಡಿನ ಪೆÇಯ್ಯಕಂಡ ಅಂಗನವಾಡಿಯಲ್ಲಿ ಕಾರ್ಯಕರ್ತೆ ಉಷಾ ಕುಮಾರಿ ಹಾಗೂ ಸಹಾಯಕಿ ಅನೀಷಾ ಅವರನ್ನು ಹಾಗೂ, ಬೀಜಂತಡ್ಕ ಅಂಗನವಾಡಿಯಲ್ಲಿ ಕಾರ್ಯಕರ್ತೆ ಚಂದ್ರಾವತಿ ಬಿ ಹಾಗೂ ಸಹಾಯಕಿ ಲೀಲಾ ಬಿ ಅವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಊರಿನ ಹಿರಿಯರಾದ ತಿರುಪತಿಕುಮಾರ ಭಟ್, ಕುಞ್ಞಣ್ಣ ಬದಿಯಡ್ಕ, ರಾಜೇಶ್ವರಿ ಪೆರ್ಮುಖ ಉಪಸ್ಥಿತರಿದ್ದರು.

.jpg)
.jpg)
