ಕಾಸರಗೋಡು: ಮಧೂರು ಸನಿಹದ ಉಳಿಯತ್ತಡ್ಕದಲ್ಲಿ ಚಟುವಟಿಕೆ ನಡೆಸುತ್ತಿರುವ ಪ್ರಗತಿ ವಿಶೇಷ ವಿಕಲಚೇತನ ಶಾಲೆಯ ಮಕ್ಕಳ ಜೊತೆಗೆ ನಿವೃತ್ತ ಪೊಲೀಸ್ ಅಧಿಕಾರಿ ಪರಮೇಶ್ವರ ನಾಯ್ಕ್ ಅವರು ತನ್ನ ಹುಟ್ಟುಹಬ್ಬವನ್ನು ಚರಿಸಿಕೊಂಡಿದ್ದಾರೆ.
ತನ್ನ ಕುಟುಂಬದವರೊಂದಿಗೆ ಆಗಮಿಸಿ, ಶಾಲಾ ಮಕ್ಕಳಿಗೆ ವಿಶೇಷ ಬೋಜನ ವ್ಯವಸ್ಥೆ ಮಾಡಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಳ್ಳುವ ಮೂಲಕ ಆದರ್ಶ ಮೆರೆದಿದ್ದಾರೆ. ಪ್ರಗತಿ ಟ್ರಸ್ಟಿನ ಉಪಾಧ್ಯಕ್ಷ ಅಶೋಕ ರೈ ಎಂ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾನಗರ ಪೆÇಲೀಸ್ ಠಾಣೆ ಎಸ್.ಐ ವಿಜಯನ್, ಪೆÇಲೀಸ್ ಅಧಿಕಾರಿ ಪ್ರಶಾಂತ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯಶಿಕ್ಷಕ ಉದಯಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಭವ್ಯಶ್ರೀ ವಂದಿಸಿದರು.


