HEALTH TIPS

ಬಾಲಗೋಕುಲ ಬದಿಯಡ್ಕ ತಾಲೂಕು ಪ್ರಶಿಕ್ಷಣ ವರ್ಗ

ಬದಿಯಡ್ಕ: ಬಾಲಗೋಕುಲ ಬದಿಯಡ್ಕ ತಾಲೂಕು ಪ್ರಶಿಕ್ಷಣ ವರ್ಗ ಭಾನುವಾರ ಎಡನಾಡು ಸೇವಾ ಸಹಕಾರಿ ಬ್ಯಾಂಕ್ ನ ಸಮನ್ವಯ ಸಭಾಂಗಣದಲ್ಲಿ ಜರಗಿತು. ಆರೆಸ್ಸೆಸ್ ಕಾಸರಗೋಡು ಜಿಲ್ಲಾ ಸಹಸಂಪರ್ಕ ಪ್ರಮುಖ್ ಗಣೇಶ್ ಪೆರ್ಲ ಉದ್ಘಾಟಿಸಿದರು. ಎಡನಾಡು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ಯಾಮರಾಜ್ ದೊಡ್ಡಮಾಣಿ ಶ್ರೀಕೃಷ್ಣನ ವಿಗ್ರಹಕ್ಕೆ ಹಾರಾರ್ಪಣೆಗೈದರು. ಬಾಲಗೋಕುಲದ ತಾಲೂಕು ರಕ್ಷಾಧಿಕಾರಿ ಜಯರಾಮ ಚೆಟ್ಟಿಯಾರ್ ಬದಿಯಡ್ಕ, ಜಿಲ್ಲಾ ಉಪಾಧ್ಯಕ್ಷ ಯೋಗೀಶ್ ಪೊಡಿಪ್ಪಳ್ಳ, ತಾಲೂಕು ಅಧ್ಯಕ್ಷ ರಮೇಶ್ ಚೌಕ್ಕಾರು ಉಪಸ್ಥಿತರಿದ್ದರು. ಕಲಾರ್ಪಣಮ್ ಬಾಲಗೋಕುಲದ ವಿದ್ಯಾರ್ಥಿಗಳು ದೀಪಸ್ತುತಿ, ಪ್ರಾರ್ಥನಾಗೀತೆಯನ್ನು ಹಾಡಿದರು. ನೀರ್ಚಾಲು ಮಂಡಲ ಅಧ್ಯಕ್ಷ ಸದಾಶಿವ ಮಾಸ್ತರ್ ಬೇಳ ಸ್ವಾಗತಿಸಿದರು. ಬಾಲಗೋಕುಲ ಬದಿಯಡ್ಕ ತಾಲೂಕು ಕಾರ್ಯದರ್ಶಿ ಪ್ರೇಮಲತಾ ಕೇರ ಕಾರ್ಯಕ್ರಮ ನಿರೂಪಿಸಿದರು. ಲಾವಣ್ಯಾ ಗಿರೀಶ್, ಸತ್ಯನ್ ಮಾಸ್ತರ್, ಪ್ರೇಮಲತಾ ಕೇರ, ಪೂರ್ಣಿಮಾ ಟೀಚರ್, ಸದಾಶಿವ ಕಡಂಬಾರು ವಿವಿಧ ತರಗತಿಗಳನ್ನು ನಡೆಸಿಕೊಟ್ಟರು. 

ಸಂಜೆ ಸಮಾರೋಪ ಸಮಾರಂಭ ನಡೆಯಿತು. ಆರೆಸ್ಸೆಸ್ ಕಾಸರಗೋಡು ಜಿಲ್ಲಾ ಪ್ರೌಢ ಪ್ರಮುಖ್ ಸದಾಶಿವ ಕಡಂಬಾರು, ರಾಜ್ಯಸಮಿತಿ ಸದಸ್ಯ ಸದಾನಂದ ಮಾಸ್ತರ್, ರೆವೆನ್ಯೂ ಜಿಲ್ಲಾ ಅಧ್ಯಕ್ಷ ನಾರಾಯಣ ಮಾಸ್ತರ್ ಉಪಸ್ಥಿತರಿದ್ದರು. ಬದಿಯಡ್ಕ ತಾಲೂಕು ಕೋಶಾಧಿಕಾರಿ ಭಾಸ್ಕರ ಬದಿಯಡ್ಕ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries