ಬದಿಯಡ್ಕ : ತುಳು ಲಿಪಿ ಸಂಶೋಧಕ, ವಿದ್ವಾಂಸ ದಿ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ 90ನೇ ಜನ್ಮದಿನವನ್ನು ವಿಶ್ವ ತುಳು ಲಿಪಿ ದಿನಾಚರಣೆಯನ್ನಾಗಿ ನಡೆಸಲಾಯಿತು. ಬದಿಯಡ್ಕದ ತುಳುವೆರೆ ಆಯನೋ ಕೂಟ ಹಾಗೂ ತುಳುವ ಮಹಾ ಸಭೆಯ ಸಹಭಾಗಿತ್ವದಲ್ಲಿ ಬದಿಯಡ್ಕದ ಸಂಸ್ಕøತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆಂಕಟರಾಜ ಪುಣಿಚಿತ್ತಾಯ ಸ್ಮರಣಾರ್ಥ ಮುಂದಿನ ಜನಾಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಗ್ರ ಅಧ್ಯಯನ ಕೇಂದ್ರದ ತುಳು ಭವನವನ್ನು ಬದಿಯಡ್ಕ ಕೇಂದ್ರೀಕರಿಸಿ ಸ್ಥಾಪಿಸಲು ಒತ್ತಾಯಿಸಲಾಯಿತು.
ಈ ಬಗ್ಗೆ ನಡೆದ ಸಭೆಯನ್ನುತುಳುವೆರೆ ಆಯನೋ ಕೂಟದ ಸ್ಥಾಪಕ ಸಂಘಟಕ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಉದ್ಘಾಟಿಸಿದರು.
ತುಳುವೆರೆ ಆಯನೋ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಅಧ್ಯಕ್ಷತೆ ವಹಿಸಿದ್ದರು. ತುಳು ಸಾಹಿತಿ, ಕವಯತ್ರಿ ರಾಜಶ್ರೀ ಟಿ. ರೈ ಪೆರ್ಲ ಅವರು ಪು.ವೆಂ.ಪು ನೆಂಪು ಸಂಸ್ಮರಣಾ ಭಾಷಣಗೈದರು.
ಜಿ.ಪಂ.ಸದಸ್ಯ ರಾಮಪ್ಪ ಮಂಜೇಶ್ವರ, ಕಾಸರಗೋಡು ತುಳುಕೂಟದ ಅಧ್ಯಕ್ಷ ಬಿ.ಪಿ.ಶೇಣಿ, ಜೈ ತುಳುನಾಡ್ ಸಂಘಟನೆ ಕಾಸರಗೋಡು ಘಟಕ ಅಧ್ಯಕ್ಷ ಉತ್ತಮ್ ಉರುಳಿತ್ತಡ್ಕ, ಪುರುಷೋತ್ತಮ ಪುಣಿಚಿತ್ತಾಯ, ಕವಿ ಪುಂಡೂರು ವಿಜಯ ರಾಜ ಪುಣಿಂಚಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ತುಳು ಲಿಪಿ ಕಲಿಕೆಗೆ ನೇತೃತ್ವ ನೀಡಿದ ಜೈ ತುಳುನಾಡ್ ಸಂಘಟನೆ ಹಾಗೂ ತುಲು ಲಿಪಿ ಶಿಕ್ಷಕಿ ವಿನೋದ ಪ್ರಸಾದ್ ರೈ ಕಾರಿಂಜ ಅವರನ್ನು ಸನ್ಮಾನಿಸಲಾಯಿತು.
ಕವಿ ಶ್ರೀನಿವಾಸ ಆಳ್ವ ಕಳತ್ತೂರು ಪ್ರಸ್ತಾವಿಕವಾಗಿ ಮಾತನಾಡಿದರು. ಗುರುಪ್ರಸಾದ್ ರೈ ಬದಿಯಡ್ಕ ಸ್ವಾಗತಿಸಿ, ಹರ್ಷ ರೈ ಪುತ್ರಕಳ ವಂದಿಸಿದರು. ತುಳುವೆರೆ ಆಯನೋ ಕೂಟದ ಕಾರ್ಯದರ್ಶಿ, ಪತ್ರಕರ್ತ ಜಯ ಮಣಿಯಂಪಾರೆ ನಿರೂಪಿಸಿದರು. ಈ ಸಂದರ್ಭ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರು ರಚಿಸಿದ ಕವನಗಳನ್ನು ಬಾಲ ಪ್ರತಿಭೆ ಪ್ರಣಮ್ಯ ಕೆ.ಎಸ್ ಮಾಯಿಪ್ಪಾಡಿ ಹಾಗೂ ಅಪರ್ಣ ಪಾಣೂರು ಗಾಯನ ನಡೆಸಿದರು. ತುಳುವೆರೆ ಆಯನೋ ಸಮಿತಿಯ ಆನಂದ ಕೆ.ಮವ್ವಾರು, ರವೀಂದ್ರ ರೈ ಮಲ್ಲಾವರ, ಕೆ.ಭಾಸ್ಕರ, ಶಂಕರ ಸ್ವಾಮಿಕೃಪಾ, ರವೀಂದ್ರನಾಥ ಭಂಡಾರಿ, ಪುರುಷೋತ್ತಮ ಭಟ್.ಕೆ. ಸುಂದರ ಬಾರಡ್ಕ, ರಾಮ ಪಟ್ಟಾಜೆ ಮೊದಲಾದವರು ಉಪಸ್ಥಿತರಿದ್ದರು.

.jpg)
.jpg)
.jpg)
